ಹಾಸ್ಯನಟ ನವೀನ್ ಪಡೀಲ್ಗೆ ವಿಶ್ವಪ್ರತಿಭಾ ಪುರಸ್ಕಾರ-2025..!
– ಕರಾವಳಿಯ ಹೆಮ್ಮೆಯ ಹಾಸ್ಯ ನಟ
– ತುಳು,ಕನ್ನಡ ಚಲನಚಿತ್ರ,ರಿಯಾಲಿಟಿ ಶೋಗಳಲ್ಲಿ ಅಭಿನಯ
NAMMUR EXPRESS NEWS
ಉಡುಪಿ: ಕರಾವಳಿಯ ಹೆಮ್ಮೆಯ ಕಲಾವಿದ ನವೀನ್ ಡಿ ಪಡೀಲ್ರವರಿಗೆ ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ಇದರ ವತಿಯಿಂದ ಪ್ರಭಾವತಿ ಹಾಗೂ ಉಡುಪಿ ವಿಶ್ವನಾಥ್ ಶೆಣೈ ಪ್ರಾಯೋಜಿತ ‘ವಿಶ್ವಪ್ರಭಾ ಪುರಸ್ಕಾರ – 2025 ಪ್ರಶಸ್ತಿ ಲಭಿಸಿದೆ. ತುಳು ಹಾಗೂ ಕನ್ನಡ ಚಲನಚಿತ್ರ ಮತ್ತು ರಂಗಭೂಮಿಯ ಪ್ರಸಿದ್ಧ ಕಲಾವಿದ ನವೀನ್ ಡಿ ಪಡೀಲ್ ಅವರಿಗೆ ಈ ಪ್ರಶಸ್ತಿ ಲಭಿಸಿದ್ದು, ಈ ಪುರಸ್ಕಾರವು ಪ್ರಶಸ್ತಿ ಪತ್ರ, ಫಲಕ ಹಾಗೂ ಒಂದು ಲಕ್ಷ ರೂಪಾಯಿ ನಗದು ಒಳಗೊಂಡಿರುತ್ತದೆ. ಇದೇ ಬರುವ ಫೆಬ್ರವರಿಯಂದು ಉಡುಪಿಯ ಯಕ್ಷಗಾನ ಕಲಾರಂಗದ ಐ ವೈ ಸಿ ಸಭಾಂಗಣದಲ್ಲಿ ಪುರಸ್ಕಾರ ಪ್ರಧಾನ ಮಾಡಲಾಗುವುದು ಎಂದು ವಿಶ್ವಪ್ರಭಾ ಪುರಸ್ಕಾರ ಸಮಿತಿಯ ಸಂಚಾಲಕ ಮರವಂತೆ ನಾಗರಾಜ ಹೆಬ್ಬಾರ್ ತಿಳಿಸಿದ್ದಾರೆ.