ಉತ್ತರ ಕನ್ನಡದ ಸಿದ್ದಾಪುರದ ಉತ್ಸವಕ್ಕೆ ಸಜ್ಜು!
– ಫೆ. 8 ಹಾಗೂ 9 ಸಿದ್ದಾಪುರ ಉತ್ಸವ: ಉತ್ಸವಕ್ಕೆ ಈಗಾಗಲೇ ಸಿದ್ಧತೆ
– ಸ್ಥಳೀಯ ಕಲಾವಿದರಿಗೆ ಅವಕಾಶ: 2 ದಿನಗಳ ಉತ್ಸವಕ್ಕೆ ಸ್ವಾಗತ
NAMMUR EXPRESS NEWS
ಸಿದ್ದಾಪುರ : ಪ್ರತಿ ವರ್ಷದಂತೆ ಈ ವರ್ಷದ ಸಿದ್ದಾಪುರ ಉತ್ಸವ ಫೆಬ್ರವರಿ 8 ಹಾಗೂ 9 ರಂದು 2 ದಿನಗಳ ಕಾಲ ಜರುಗಲಿದೆ. ಉತ್ತರ ಕನ್ನಡದ ಸಿದ್ದಾಪುರದ ಉತ್ಸವಕ್ಕೆ ವೇದಿಕೆ ಸಿದ್ಧಗೊಂಡಿದ್ದು, ಮಳಿಗೆಗಳು ಹಾಗೂ ಕಲಾವಿದರಿಗೆ 2 ದಿನಗಳ ಉತ್ಸವಕ್ಕೆ ಸ್ವಾಗತ ಕೋರಲಾಗಿದೆ. ಸಾವಿರಾರು ಜನ ಈ ಉತ್ಸವದಲ್ಲಿ ಭಾಗಿಯಾಗಲಿದ್ದಾರೆ. ಸಿದ್ದಾಪುರ ಉತ್ಸವ ಸಮಿತಿ ಅಧ್ಯಕ್ಷ ಕೆ.ಜಿ ನಾಯ್ಕ ಹಣಜಿಬೈಲ್ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿ, ಸ್ಥಳೀಯ ಕಲಾವಿದರಿಗೆ ಕೂಡ ಅವಕಾಶ ಕಲ್ಪಿಸೋ ನಿಟ್ಟಿನಲ್ಲಿ 2 ದಿನಗಳ ಕಾಲ ಈ ವರ್ಷದ ಸಿದ್ದಾಪುರ ಉತ್ಸವ ನಡೆಸಲಾಗುತ್ತಿದೆ. ತಾಲೂಕಿನಲ್ಲಿ ಜಾತ್ರೆ, ಉತ್ಸವಗಳು ಬರುತ್ತಿರೋ ಹಿನ್ನೆಲೆಯಲ್ಲಿ 3 ದಿನ ಇರೋ ಉತ್ಸವವನ್ನ 2 ದಿನಗಳಿಗೆ ಸೀಮಿತಗೊಳಿಸಲಾಗಿದೆ. ಪಟ್ಟಣದ ನೆಹರೂ ಮೈದಾನದಲ್ಲಿ ಉತ್ಸವ ಜರುಗಲಿದೆ. ಉದ್ಘಾಟನಾ ಹಾಗೂ ಸಮಾರೋಪ ಸಮಾರಂಭಗಳಿಗೆ ಸ್ವಾಮೀಜಿಗಳು, ಜಿಲ್ಲೆಯ ಸಂಸದರು, ಶಾಸಕರು ಸೇರಿದಂತೆ ಅನೇಕ ಗಣ್ಯರನ್ನು ಆಹ್ವಾನಿಸಲಾಗುವುದು. ತಾಲೂಕಿನ ಜನತೆ ಉತ್ಸವದಲ್ಲಿ ಪಾಲ್ಗೊಂಡು ಉತ್ಸವವನ್ನ ಯಶಸ್ವಿಗೊಳಿಸಬೇಕು ಎಂದರು. ಕಾರ್ಯಾಧ್ಯಕ್ಷ ಸತೀಶ್ ಹೆಗಡೆ ಬೈಲಲ್ಲಿ, ಉಪಾಧ್ಯಕ್ಷ ಅನಿಲ್ ದೇವನಳ್ಳಿ, ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡರ್, ಸುರೇಶ್ ಮೆಸ್ತಾ, ರವಿಕುಮಾರ್ ನಾಯ್ಕ, ವಿನಯ್ ಹೊನ್ನೆಗುಂಡಿ ಮತ್ತು ಪದಾಧಿಕಾರಿಗಳು ಹಾಜರಿದ್ದರು.