ವಾಹನ ಖರೀದಿಸುವವರಿಗೆ ಸರ್ಕಾರದಿಂದ ಗುಡ್ ನ್ಯೂಸ್.!
– ವಾಹನ ಖರೀದಿಸಲು 3 ಲಕ್ಷ ಸಹಾಯಧನ
– ಸ್ವಾವಲಂಬಿಸಾರಥಿ ಯೋಜನೆಯಡಿ ಆನ್ಲೈನ್ ಅರ್ಜಿ ಸಲ್ಲಿಕೆ
NAMMUR EXPRESS NEWS
ನೀವು ವಾಹನ ಚಾಲಕರಾ..? ಆಟೋ ರಿಕ್ಷಾ, ಟ್ಯಾಕ್ಸಿ ಸರಕು ವಾಹನ ಖರೀದಿಸಲು ನಿಮಗೆ ಸರ್ಕಾರದ ಸಬ್ಸಿಡಿ ಪಡೆಯಬೇಕೆ? ಹಾಗಿದ್ದರೆ ನಿಮಗೆ ನಾವು ಇಲ್ಲಿ ಸಂಪೂರ್ಣ ಮಾಹಿತಿ ನೀಡಿದ್ದೇವೆ. ಈ ಲೇಖನವನ್ನು ಓದಿ ಹಾಗೂ ಸರ್ಕಾರದ ಸಹಾಯಧನ ಪಡೆದು ನಿಮ್ಮ ವೃತ್ತಿ ಜೀವನನ್ನು ಯಶಸ್ವಿಯಾಗಿಸಿ. ಆಟೋ ರಿಕ್ಷಾ, ಟ್ಯಾಕ್ಸಿ, ಸರಕು ವಾಹನಗಳನ್ನು ಖರೀದಿಸಲು ಸ್ವಾವಲಂಬಿ ಸಾರಥಿ ಯೋಜನೆಯಡಿ ಬ್ಯಾಂಕುಗಳಿಂದ ಮಂಜೂರಾತಿ ನೀಡಿದ ಅರ್ಹ ಪ್ರತಿ ಫಲಾನುಭವಿಗೆ ವಾಹನದ ಮೌಲ್ಯದ ಶೇ 50 ರಷ್ಟು ಅಥವಾ ಗರಿಷ್ಠ ರೂ. 3,00,000 ರ ವರೆಗೆ ಸಹಾಯಧನಯನ್ನು ನೀಡುತ್ತಾರೆ. ವಾಹನದ ಉಳಿದ ಮೊತ್ತಕ್ಕೆ ಬ್ಯಾಂಕ್ ಸಾಲ ಪಡೆದುಕೊಂಡ ಬಗ್ಗೆ ಬ್ಯಾಂಕ್ ಪತ್ರವನ್ನು ಸಲ್ಲಿಸಬೇಕಾಗುತ್ತದೆ.
ಯೋಜನೆಯ ಹೆಸರು: ಸ್ವಾವಲಂಬಿ ಸಾರಥಿ ಯೋಜನೆ
ಸಹಾಯಧನ ಮೊತ್ತ: ವಾಹನದ ಮೌಲ್ಯದ ಶೇ 50 ರಷ್ಟು ಅಥವಾ ಗರಿಷ್ಠ ರೂ. 3 ಲಕ್ಷದ ವರೆಗೆ ಅರ್ಜಿದಾರರ
ವಯಸ್ಸು: 18 ರಿಂದ 55 ವರ್ಷ ನಿಗಮದ
ಹೆಸರು: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತ
ಅರ್ಹತೆ :
1. ಅರ್ಜಿದಾರ ಕರ್ನಾಟಕ ರಾಜ್ಯದ ಧಾರ್ಮಿಕ ಅಲ್ಪಸಂಖ್ಯಾತರಿಗೆ ಸೇರಿದವರಾಗಿರಬೇಕು.
2. ಅರ್ಜಿದಾರ ಕರ್ನಾಟಕದ ಶಾಶ್ವತ ನಿವಾಸಿಯಾಗಿರಬೇಕು.
3. ಅರ್ಜಿದಾರರು 18 ರಿಂದ 55 ವರ್ಷಗಳ ನಡುವಿನ ವಯೋಮಿತಿಯವರಾಗಿರಬೇಕು.
4. ಕುಟುಂಬದ ವಾರ್ಷಿಕ ಆದಾಯ ರೂ. 4,50,000/- ಕ್ಕಿಂತ ಕಡಿಮೆ ಇರಬೇಕು. (ಎಲ್ಲಾ ಮೂಲಗಳಿಂದ ಬರುವು)
5. ಅರ್ಜಿದಾರರು ಪ್ರಾದೇಶಿಕ ಸಾರಿಗೆ ಅಧಿಕಾರಿಯಿಂದ ನೀಡಲಾದ ಚಾಲನಾ ಪರವಾನಗಿ ಹೊಂದಿರಬೇಕು
6. ಅರ್ಜಿದಾರರ ಕುಟುಂಬದ ಯಾವುದೇ ಸದಸ್ಯರು ಕೇಂದ್ರ ಅಥವಾ ರಾಜ್ಯ ಸರ್ಕಾರಿ ಉದ್ಯೋಗಿಯಾಗಬಾರದು.
7. ಕಳೆದ 05 ವರ್ಷಗಳಲ್ಲಿ ಅರ್ಜಿದಾರ ಅಥವಾ ಅವನ ಅಥವಾ ಅವಳ ಕುಟುಂಬದ ಸದಸ್ಯರು ಸರ್ಕಾರದ ಅಥವಾ ನಿಗಮದ ಯಾವುದೇ ಇತರ ಯೋಜನೆಯಡಿಯಲ್ಲಿ (ಅರಿವು ಯೋಜನೆ ಹೊರತುಪಡಿಸಿ) ಸಾಲ ಸೌಲಭ್ಯಗಳನ್ನು ಪಡೆದಿರಬಾರದು.
ಬೇಕಾಗುವ ದಾಖಲೆಗಳು:
– ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಜಾತಿ ಪ್ರಮಾಣಪತ್ರ
– ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಆದಾಯ ಪ್ರಮಾಣಪತ್ರ
– ಆಧಾರ್ ಕಾರ್ಡ್ ಪ್ರತಿ (ನಿವಾಸದ ಪುರಾವೆ)
– ವಾಹನ ಚಾಲನಾ ಪರವಾನಗಿ ಪ್ರತಿ
– ಬ್ಯಾಂಕ್ ಪಾಸ್ ಬುಕ್ ಪ್ರತಿ
– ವಾಹನದ ಅಂದಾಜು ದರಪಟ್ಟಿ ಸ್ವಯಂ ಘೋಷಣೆ ಪತ್ರ
– ಫಲಾನುಭವಿಯ ಇತ್ತೀಚಿನ 2 ಪಾಸ್ಪೋರ್ಟ್ ಅಳತೆಯ ಭಾವಚಿತ್ರ
– ಅರ್ಜಿದಾರರ ಮತ್ತು ಕುಟುಂಬದ ಸದಸ್ಯರು ವಾಹನ ಖರೀದಿಗೆ ರಾಜ್ಯ ಸರ್ಕಾರದ ಯಾವುದೇ ಯೋಜನೆಯಡಿ ಸಾಲ ಸೌಲಭ್ಯ ಪಡೆದಿಲ್ಲದಿರುವ ಬಗ್ಗೆ ಜಿಲ್ಲಾ ವ್ಯವಸ್ಥಾಪಕರಿಂದ ದೃಢೀಕರಣ ಪತ್ರ
– ಈ ಯೋಜನೆಯಡಿ ಪಡೆದ ವಾಹನವನ್ನು ಯಾರಿಗೂ ಪರಭಾರೆ ಮಾಡದಿರುವ ಬಗ್ಗೆ ದೃಢೀಕರಣ ಪತ್ರ
ಆಯ್ಕೆ ಸಮಿತಿ:
1. ಸಂಬಂಧಪಟ್ಟ ಜಿಲ್ಲೆಯ ಜಿಲ್ಲಾಧಿಕಾರಿಗಳು- ಅಧ್ಯಕ್ಷರು
2. ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ- ಉಪಾಧ್ಯಕ್ಷರು
3. ಸಂಬಂಧಪಟ್ಟ ಜಿಲ್ಲೆಯ ಲೀಡ್ ಬ್ಯಾಂಕಿನ ವ್ಯವಸ್ಥಾಪಕರು – ಸದಸ್ಯರು
4. ಸಂಬಂಧಪಟ್ಟ ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ -ಸದಸ್ಯರು
5. ಸಂಬಂಧಪಟ್ಟ ಜಿಲ್ಲೆಯ ಜಿಲ್ಲಾ ಅಧಿಕಾರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ- ಸದಸ್ಯರು
6. ಸಂಬಂಧಪಟ್ಟ ಜಿಲ್ಲೆಯ ಕ.ಅ.ಅ.ನಿಗಮದ ಜಿಲ್ಲಾ ವ್ಯವಸ್ಥಾಪಕರು- ಸದಸ್ಯ ಕಾರ್ಯದರ್ಶಿ
ಅರ್ಜಿ ಸಲ್ಲಿಸುವುದು ಹೇಗೆ?
ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆ ಲಿಂಕ್ನ್ನು ಕೇಳಗೆ ನೀಡಲಾಗಿದೆ.
ಆನ್ಲೈನ್ ಅರ್ಜಿ ಲಿಂಕ್: ಇಲ್ಲಿ ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್: kmdc.karnataka.gov.in, kmdconline.karnataka.gov.in
ಪ್ರಮುಖ ದಿನಾಂಕಗಳು: ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 25-09-2023