ಕೃಷ್ಣ ನೀ ಬೇಗನೇ ಬಾರೋ…!
– ರಾಜ್ಯದೆಲ್ಲೆಡೆ ಕೃಷ್ಣ ಜನ್ಮಾಷ್ಟಮಿ ಸಂಭ್ರಮ
– ಕೃಷ್ಣನ ವೇಷ ತೊಡಲು ಮಕ್ಕಳು ಸಜ್ಜು
– ದೇಗುಲಗಳಲ್ಲಿ ವಿಶೇಷ ಪೂಜೆಗೆ ಸಿದ್ಧತೆ
NAMMUR EXPRESS NEWS
ಶ್ರಾವಣ ಮಾಸ ಎಂದರೆ ಹಬ್ಬಗಳು ಶುರು. ಹಿಂದೂಗಳಾದ ನಾವು ಹಬ್ಬಗಳನ್ನು ಕುಟುಂಬ ಸಮೇತ ಅರ್ಥ ಪೂರ್ಣವಾಗಿ ಆಚರಿಸುತ್ತೇವೆ. ಅದರಲ್ಲೂ ಅದ್ದೂರಿಯಿಂದ ಆಚರಿಸುವ ಹಬ್ಬಗಳಲ್ಲಿ ಭಾದ್ರಪದ ಮಾಸದ 8 ನೇ ದಿನ ಬರುವ ಕೃಷ್ಣ ಜನ್ಮಾಷ್ಟಮಿ ಸಹ ಒಂದು. ಈ ಕೃಷ್ಣ ಜನ್ಮಾಷ್ಟಮಿಯನ್ನು ಶ್ರೀ ಹರಿಯ ಎಂಟನೇ ಅವತಾರ ಅದ ಶ್ರೀ ಕೃಷ್ಣ ಹುಟ್ಟಿದ ಜನ್ಮ ದಿನವನ್ನು ಈ ಕೃಷ್ಣ ಜನ್ಮಾಷ್ಟಮಿ ಎಂದು ಆಚರಿಸಲಾಗುತ್ತದೆ. ಜನ್ಮಾಷ್ಟಮಿಯನ್ನು ಗೋಕುಲಾಷ್ಟಮಿ ಎಂದು ಸಹ ಕರೆಯಲಾಗುತ್ತದೆ.
ಆಚರಣೆ ಹೇಗೆ..?
ಶ್ರೀ ಕೃಷ್ಣ ಜನ್ಮಾಷ್ಟಮಿಯ ದಿನದಂದು ಬಾಲಕೃಷ್ಣ ರೂಪದಲ್ಲಿ ಪೂಜಿಸಿ ಬಹಳ ವಿಜೃಂಭಣೆಯಿಂದ ಪೂಜಿಸಲಾಗುತ್ತದೆ. ಈ ಅಪೇಕ್ಷಿತ ಫಲ ದೊರೆಯುತ್ತದೆ ಎಂದು ಹೇಳಲಾಗುತ್ತದೆ. ದಿನದಂದು ಶ್ರೀಕೃಷ್ಣನಿಗೆ ಹಾಲು ಮತ್ತು ಗಂಗಾಜಲದಿಂದ ಸ್ನಾನ ಮಾಡಿ ಪೂಜಿಸಲಾಗುತ್ತದೆ. ಇಂದು ಕೃಷ್ಣನಿಗೆ ನವಿಲು ಗರಿಗಳು, ಕೊಳಲು, ಕಿರೀಟ, ಶ್ರೀಗಂಧ, ವೈಜಯಂತಿ ಮಾಲೆ, ತುಳಸಿ ದಳ ಇತ್ಯಾದಿಗಳಿಂದ ಅಲಂಕರಿಸಲಾಗುತ್ತದೆ. ಭಕ್ತಿಯಿಂದ ಪೂಜಿಸಿ ದೇವರ ಕೃಪೆಗೆ ಪಾತ್ರರಾಗುತ್ತಾರೆ. ವಿಧ ಬಗ್ಗೆಯ ಖಾದ್ಯವನ್ನು ತಯಾರಿಸಿ ಬಾಲ ಕೃಷ್ಣನಿಗೆ ಅರ್ಪಿಸುತ್ತಾರೆ. ಈದಿನ ಕೃಷ್ಣನ ಬಾಲ ಲೀಲೆಗಳನ್ನು ನೆನೆದು ಬೇದ ಭಾವ ತೋರದೆ ಮೊಸರು ಕುಡಿಕೆ ಉತ್ಸವನ್ನು ಆಚರಿಸಿ ಸಂಭ್ರಮಿಸುತ್ತಾರೆ.
ಮಕ್ಕಳನ್ನು ಬಾಲಕೃಷ್ಣನ ರೂಪದಲ್ಲಿ ನೋಡುವ ಸುದಿನ.
ಈ ದಿನದ ವಿಶೇಷತೆ ಚಿಕ್ಕ ಚಿಕ್ಕ ಮಕ್ಕಳಿಗೆ ರಾಧಾ,ಬಾಲ ಕೃಷ್ಣನ ವೇಷಧರಿಸಿ ಹೆತ್ತವರು ಸಂಭ್ರಮಿಸುತ್ತಾರೆ. ಹಲವು ಸಂಘ ಸಂಸ್ಥೆಗಳು ಕೃಷ್ಣನ ವೇಷದ ಸ್ಪರ್ಧೆಯನ್ನು ಏರ್ಪಡಸಿ ವಿಜೇತರಿಗೆ ಆಕರ್ಷಕ ಬಹುಮಾನವನ್ನು ನೀಡಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ.
ಸಮಸ್ತ ಜನತೆಗೆ ಈ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು. ಆ ಕೃಷ್ಣ ಎಲ್ಲರಿಗೂ ಆರೋಗ್ಯ ಆಯಸನ್ನು ನೀಡಲಿ.