ಪ್ರೀತಿಗೆ ಕಣ್ಣಿಲ್ಲ!: 65 ವರ್ಷದ ವೃದ್ಧನ ಕೈಹಿಡಿದ 35 ವರ್ಷದ ವಧು!
– ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೊಂದು ಅಪರೂಪದ ಮದುವೆ
NAMMUR EXPRESS NEWS
ಚಿಕ್ಕಬಳ್ಳಾಪುರ: ಪ್ರೀತಿಗೆ ಯಾವುದೇ ವಯಸ್ಸಿನ ಮಿತಿ ಇಲ್ಲ ಎಂಬ ಮಾತುಗಳು ಆಗಾಗ ಕೇಳಿ ಬರುತ್ತವೆ. ಅದರಂತೆ ವಯಸ್ಸಿನ ಗಡಿಯೂ ಇಲ್ಲ ಎಂಬುದು ಇದೀಗ ಸಾಬೀತಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಚಿಕ್ಕಬಳ್ಳಾಪುರದಲ್ಲಿ 65 ವರ್ಷದ ವರ 35 ವರ್ಷದ ಯುವತಿಯನ್ನು ಮದುವೆಯಾಗಿರುವುದು ತಿಳಿದು ಬಂದಿದೆ . ಅಪರೂಪದ ಜೋಡಿ ಜಿಲ್ಲೆಯ ಶಿಡ್ಲಘಟ್ಟದ ಅಪ್ಪೇಗೌಡನಹಳ್ಳಿ ಗೇಟ್ನ ಬಯಲಾಂಜನೇಯ ಸ್ವಾಮಿ ದೇವಾಲಯದ ಬಳಿ ಮದುವೆಯಾಗಿದ್ದಾರೆ. ಈರಣ್ಣ ಹಾಗೂ ಅನು ಮದುವೆಯಾಗಿರುವ ನವ ದಂಪತಿಯಾಗಿದ್ದಾರೆ. ಆರು ತಿಂಗಳ ಹಿಂದೆ ಈರಣ್ಣ ಅವರ ಪತ್ನಿ ತೀರಿಕೊಂಡಿದ್ದರು. ಅನು ಅವರ ಪತಿ ಇಲ್ಲ. ಓರ್ವ ಮಗ ಇದ್ದಾನೆ. ಇದರಿಂದ ಸಂಗಾತಿ ಇಲ್ಲದ ಕೊರತೆಯನ್ನು ತುಂಬಿಕೊಳ್ಳಲು ಅವರು ಮರು ಮದುವೆಯಾಗಿದ್ದಾರೆ. ವಿಶೇಷ ದಂಪತಿಗೆ ಗ್ರಾಮಸ್ಥರು ಶುಭ ಹಾರೈಸಿದ್ದಾರೆ. ಇಬ್ಬರೂ ಪರಸ್ಪರ ಒಪ್ಪಿಯೇ ಮದುವೆ ಆಗಿದ್ದಾರೆ.