ಚೈತ್ರಾ ವಂಚನೆ ಕೇಸ್: ಮತ್ತೋರ್ವ ಅರೆಸ್ಟ್!
– ಖಾಸಗಿ ಫೋಟೋ, ವಿಡಿಯೋ ತೋರಿಸಿ ಯುವತಿಗೆ ಬ್ಲಾಕ್ಮೇಲ್
– ನಾಟಕ ಪ್ರದರ್ಶನದ ವೇಳೆ ಹೃದಯಾಘಾತ
– ವೇದಿಕೆಯಲ್ಲೇ ಕುಸಿದು ಬಿದ್ದು ಯುವ ಕಲಾವಿದ ಸಾವು!
NAMMUR EXPRESS NEWS
ಬೆಂಗಳೂರು : ಚೈತ್ರಾ ವಂಚನೆ ಕೇಸ್ನ 5ನೇ ಆರೋಪಿ ಚನ್ನಾನಾಯ್ಕ್ ಅರೆಸ್ಟ್ ಮಾಡಲಾಗಿದೆ. ಚನ್ನಾನಾಯ್ಕ್ ಬಿಜೆಪಿ ಎಲೆಕ್ಷನ್ ಸಮಿತಿ ಸದಸ್ಯನ ಪಾತ್ರ ಮಾಡಿದ್ದ. ಕೆ.ಆರ್.ಪುರಂನಲ್ಲಿ ಕಬಾಬ್ ಮಾರುತ್ತಿದ್ದ. ನಾಯ್ಕ್ ಅರೆಸ್ಟ್ ನಂತರ ವಂಚನೆ ಸ್ಟೋರಿ ಇಂಚಿಂಚಾಗಿ ಹೇಳಿದ್ದಾರೆ. ಸಿಸಿಬಿ ಕಚೇರಿಗೆ ಬಂಧಿಸಿ ಕರೆತಂದಾಗ ಚನ್ನಾನಾಯ್ಕ್ ಹೇಳಿಕೆ ಕೊಟ್ಟಿದ್ದು, ಚೈತ್ರಾ ಅವರನ್ನು ಕಡೂರಿಗೆ ಕರೆಸಿ ಗಗನ್ ಪರಿಚಯ ಮಾಡಿಸಿದ್ದರು, ಸತತ ಮೂರು ಗಂಟೆ ಮೀಟಿಂಗ್ ಮಾಡಿದ್ದೆವು.
ಮೇಕಪ್ ಮಾಡಬೇಕು, ಮೀಸೆ ತೆಗೀಬೇಕು ಅಂದ್ರು, ನೀವು ಹೋಗಿ ಇಷ್ಟು ಮಾತಾಡಬೇಕು ಎಂದು ಹೇಳಿದ್ರು . ಚೈತ್ರಾ ಕಳಿಸಿರೋ ಫೋಟೋದಂತೆ ನೀವು ರೆಡಿ ಆಗಬೇಕು ಎಂದ್ರು, ರೆಡಿ ಮಾಡಿ ಬೆಂಗಳೂರಿನ ಕುಮಾರಕೃಪಾಗೆ ಕರೆತಂದ್ರು ಎಂದು ಹೇಳಿದ್ದಾರೆ.
ಖಾಸಗಿ ಫೋಟೋ, ವಿಡಿಯೋ ತೋರಿಸಿ ಯುವತಿಗೆ ಬ್ಲಾಕ್ಮೇಲ್
ಬೆಂಗಳೂರು : ಹೋಟೆಲ್ ಗೆ ಬರ್ತಿದ್ದ ಯುವತಿಯ ಖಾಸಗಿ ಫೋಟೋ , ವಿಡಿಯೋ ತೋರಿಸಿ ಬ್ಲಾಕ್ ಮೇಲ್ ಮಾಡಿದ್ದ ಮಂಗಳೂರು ಶೆಟ್ಟಿ ಲಂಚ್ ಹೋಮ್ ಪಾರ್ಟ್ನರ್ ಅರೆಸ್ಟ್ ಮಾಡಲಾಗಿದೆ. ನಯನ, ಕಿರಣ್ ಬಂಧಿತ ಆರೋಪಿಗಳಾಗಿದ್ದಾರೆ. ಬೆಂಗಳೂರಿನ ಚಂದ್ರಲೇಔಟ್ ನಲ್ಲಿ ವಾಸವಿದ್ದ 22 ವರ್ಷದ MBA ವಿದ್ಯಾರ್ಥಿನಿಗೆ ಬ್ಲಾಕ್ ಮೇಲ್ ಮಾಡಲಾಗಿದೆ. ಯುವತಿಯ ಸಂಬಂಧಿ ನಯನ ಶೆಟ್ಟಿ ಲಂಚ್ ಹೋಮ್ ನಡೆಸುತ್ತಿದ್ದರು, ನಯನ ಜೊತೆಗೆ ಕಿರಣ್ ಎಂಬಾತ ಕೂಡ ಪಾರ್ಟರ್ನ್ ಆಗಿದ್ದ . ಸಂಬಂಧಿ ಹೋಟೇಲ್ ಅಂತ ಯುವತಿ ಕೂಡ ಆಗಾಗ ಕೆಂಚನಾಪುರದಲ್ಲಿದ್ದ ಶೆಟ್ಟಿ ಲಂಚ್ ಹೋಂಗೆ ಬರುತ್ತಿದ್ದಳು. ಈ ವೇಳೆ ಯುವತಿಗೆ ಹೋಟೆಲ್ ನ ಕಿರಣ್ ಪರಿಚಯವಾಗಿತ್ತು , ಆದರೆ ಕಳೆದ ವಾರ ಯುವತಿ ಮೊಬೈಲ್ ಗೆ ಇದೇ ರಾಕೇಶ್ ಒಂದಷ್ಟು ಖಾಸಗಿ ಫೋಟೋ ಮತ್ತು ವಿಡಿಯೋ ಕಳುಹಿಸಿದ್ದ.
ಆ ಫೋಟೋ, ವಿಡಿಯೋ ಯಾರದ್ದು ಅಂತ ನೋಡಿದ ಯುವತಿಗೆ ಶಾಕ್ ಆಗಿದೆ, ಯಾಕಂದ್ರೆ ಅದೆಲ್ಲವೂ ಯುವತಿ ತನ್ನ ಪ್ರೇಮಿ ಜೊತೆ ಇದ್ದ ಖಾಸಗಿ ಫೋಟೋಗಳು, ವಿಡಿಯೋಗಳಾಗಿವೆ. ಕಿರಣ್ ಖಾಸಗಿ ಫೋಟೋಗಳನ್ನ ಯುವತಿಗೆ ವಾಟ್ಸಾಪ್ ಮಾಡಿ 1 ಲಕ್ಷ ಹಣಕ್ಕೆ ಡಿಮ್ಯಾಂಡ್ ಮಾಡಿದ್ದ, 1 ಲಕ್ಷ ಹಣ ನೀಡದಿದ್ದರೆ ಫೋಟೋ, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡೋದಾಗಿ ಬ್ಲಾಕ್ ಮೇಲ್ ಮಾಡಿದ್ದನು. ಈ ಸಂಬಂಧ ಯುವತಿಯು ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು, ದೂರಿನ ಮೇರೆಗೆ ಪೊಲೀಸರು ನಯನ ಮತ್ತು ಕಿರಣ್ರನ್ನ ಬಂಧಿಸಿದ್ದಾರೆ.
ವೇದಿಕೆಯಲ್ಲೇ ಕುಸಿದು ಬಿದ್ದು ಯುವ ಕಲಾವಿದ ಸಾವು!
ವಿಜಯಪುರ: ನಾಟಕ ಪ್ರದರ್ಶನ ಮಾಡುವ ವೇಳೆ ರಂಗ ವೇದಿಕೆಯಲ್ಲೇ ಕುಸಿದು ಬಿದ್ದು ಯುವ ಕಲಾವಿದ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ. ವಿಜಯಪುರ ಜಿಲ್ಲೆ ತಿಕೋಟಾ ತಾಲೂಕಿನ ಕೋಟ್ಯಾಳ ಗ್ರಾಮದಲ್ಲಿ ನಿನ್ನೆ ಕೋಟ್ಯಾಳ ಗ್ರಾಮ ದೇವತೆ ಮುಕ್ತಾಕರ ದೇವರ ಜಾತ್ರೆಯ ನಿಮಿತ್ತ ನಾಟಕ ಪ್ರದರ್ಶನ ಮಾಡಲಾಗಿತ್ತು. ರಾತ್ರಿ ನಾಟಕದ ವೇಳೆ ಡಾನ್ಸ್ ಮಾಡುವಾಗಲೇ ಹೃದಯಾಘಾತವಾಗಿ ಕುಸಿದು ಬಿದ್ದು ಪೋಸ್ಟ್ ಮ್ಯಾನ್ ಸಾವನ್ನಪ್ಪಿದ್ದಾರೆ. ವಿಜಯಪುರ ಜಿಲ್ಲೆ ತಿಕೋಟ ತಾಲೂಕಿನ ಕೋಟ್ಯಾಳ ಗ್ರಾಮದಲ್ಲಿ ಘಟನೆ ನಡೆದಿದ್ದು, ಪೋಸ್ಟ್ ಮ್ಯಾನ್ ಕುಸಿದು ಬಿಳುವ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. 24 ವರ್ಷದ ಶರಣು ಎಂಬವರು ಬಾಗಲಕೋಟೆಯಲ್ಲಿ ಪೋಸ್ಟ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು. ಶರಣು ಇತ್ತೀಚೆಗೆ ಊರಿನ ಪೋಸ್ಟ್ ಮ್ಯಾನ್ ಆಗಿ ನೇಮಕಗೊಂಡಿದ್ದರು. ಗ್ರಾಮ ದೇವರ ಜಾತ್ರೆ ಹಿನ್ನೆಲೆ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.ನಾಟಕ ಪ್ರದರ್ಶನ ವೇಳೆ ಡಾನ್ಸ್ ಮಾಡಲು ವೇದಿಕೆ ಏರಿದ್ದ ಶರಣು ಹೃದಯಾಘಾತದಿಂದ ಸಾವನ್ನಪಿದ್ದಾರೆ. ಹಳ್ಳಿ ಹುಲಿ ಕೊಟ್ಟ ಬೆಳ್ಳಿ ಕಾಲುಂಗುರ ನಾಟಕ ಪ್ರದರ್ಶನದ ವೇಳೆ ಈ ಘಟನೆ ನಡೆದಿದೆ.