ಕಾಪಿ ನಾಡಲ್ಲಿ ಆನೆ ಹಾವಳಿ ತಡೆಗೆ ಬೇಕು ಆನೆ ಸರ್ವೇ!
– ಭದ್ರಾ ಎಕೊ ಕನ್ಸರ್ವೇಷನ್ ಫೌಂಡೇಷನ್ ಅಗ್ರಹ
– ಚಿಕ್ಕಮಗಳೂರು ಜಿಲ್ಲೆಯಲ್ಲಿ ಆನೆ ಉಪಟಳ ಹೆಚ್ಚಳ
NAMMUR EXPRESS NEWS
ಚಿಕ್ಕಮಗಳೂರು: ಆನೆ-ಮಾನವ ಸಂಘರ್ಷ ತಡೆಗಟ್ಟಲು ವೈಜ್ಞಾನಿಕವಾಗಿ ಅನೆಗಳ ಗಣತಿ ಕಾರ್ಯ ಅಗತ್ಯವಿದೆ ಎಂದು ಭದ್ರಾ ಎಕೊ ಕನ್ಸರ್ವೇಷನ್ ಫೌಂಡೇಷನ್ ಮುಖ್ಯಸ್ಥ ಎಸ್.ಆರ್.ಶಿವಪ್ರಸಾದ್ ಹೇದ್ದಾರೆ. ದೇಶದಲ್ಲಿ ಅನೆಗಳ ಸಂತತಿ ಹೆಚ್ಚುತ್ತಿದೆ. ಪಶ್ಚಿಮ ಘಟ್ಟಗಳ ಸಾಲಿನ ಜಿಲ್ಲೆಗಳಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗುತ್ತಿದ್ದು, ಜನ ಆತಂಕದಲ್ಲಿ ಬದುಕುವ ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಸರ್ಕಾರ ಕೃತಕ ಬುದ್ಧಿಮತೆ ಆಧಾರಿತ ಅನೆಗಳ ಗಣತಿ ಕಾರ್ಯ ಕೈಗೊಳ್ಳಬೇಕು. ಈ ಮೂಲಕ ಅವುಗಳ ದೇಹ ಚರ್ಯೆ, ಸೊಂಡಿಲು, ದೇಹದ ಸುಕ್ಕು ಮೊದಲಾದ ದತ್ತಾಂಶಗಳನ್ನು ಸಂಗ್ರಹಿಸಿ, ಉಪಟಳ ನೀಡುವ ಕಾಡಾನೆಗಳ ಸ್ಥಳಾಂತರಕ್ಕೆ ಸರ್ಕಾರ ಚಿಂತನೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ಕಾಡಂಚಿನ ಭಾಗದಲ್ಲಿ ಕಾಡಾನೆಗಳ ನಿಯಂತ್ರಣಕ್ಕೆ ಸರ್ಕಾರ ಅಗತ್ಯ ಕ್ರಮ ವಹಿಸಬೇಕು. ಅರಣ್ಯ ಇಲಾಖೆ ಪ್ರತ್ಯೇಕ ಆನೆ ಪಥಗಳನ್ನು ನಿರ್ಮಿಸಿ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು. ಆನೆಗಳ ಗಣತಿಯಿಂದಾಗಿ ಸಮಗ್ರ ಮಾಹಿತಿ ದೊರೆಯುವುದರ ಜತೆಗೆ ಸಂಶೋಧನೆಗೂ ಸಹಕಾರಿಯಾಗಲಿದೆ ಎಂದರು. ಗೋಷ್ಠಿಯಲ್ಲಿ ಸಿ.ಇ.ರಂಗನಾಥ್ ಇದ್ದರು.