ಕಿರಿಕ್ ಡಾಕ್ಟರ್ ಜೈಲುಪಾಲು!
– ಎನ್.ಆರ್.ಪುರ ಸರಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಎಲ್ಲೋಸ್ ಲೈಂಗಿಕ ಕಿರುಕುಳ ಹಿನ್ನಲೆ
– ಷರತ್ತು ಬದ್ಧ ಜಾಮೀನು ರದ್ದು ಹಿನ್ನಲೆ ಜೈಲು ಪಾಲು
NAMMUR EXPRESS NEWS
ಎನ್.ಆರ್ ಪುರ: ಬಾಳೆಹೊನ್ನೂರಿನ ವೈದ್ಯರ ವಸತಿ ಗೃಹದಲ್ಲಿ ಡಿ’ದರ್ಜೆ ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿ, ಲೈಂಗಿಕ ಆರೋಪ ಎದುರಿಸುತ್ತಿರುವ ಡಾ.ಎಲ್ಲೋಸ್’ಗೆ ನರಸಿಂಹರಾಜ ಪುರ ಜೆ.ಎಂ.ಎಫ್.ಸಿ ನ್ಯಾಯಾಲಯ ಆ.7ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ. ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಡಾ.ಎಲ್ಲೋಸ್ ವಿರುದ್ಧ ದೂರು ದಾಖಲಾಗಿತ್ತು. ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಆದೇ ದಿನ ಕೋರ್ಟ್ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿತ್ತು. ಸೆ.25ರಂದು ನ್ಯಾಯಾಲಯಕ್ಕೆ ಹಾಜರಾಗಿದ್ದ ಎಲ್ಲೋಸ್’ಗೆ ಕೋರ್ಟ್ ಪೊಲೀಸ್ ಕಸ್ಟಡಿ ಒಪ್ಪಿಸಿದೆ.ವಿಚಾರಣೆ ನಡೆಸಿದ ನ್ಯಾಯಾಧೀಶರು ವೈದ್ಯನಿಗೆ ನೀಡಿದ ಷರತ್ತು ಬದ್ಧ ಜಾಮೀನನ್ನ ರದ್ದುಗೊಳಿಸಿದ್ದಾರೆ. ನ್ಯಾಯಾಧೀಶರಾದ ದಾಸರಿಕ್ರಾಂತಿ ಕಿರಣ್ ಅವರಿಂದ ಆದೇಶವಾಗಿದೆ. ಸಂತ್ರಸ್ತ ಪರ ಸರ್ಕಾರಿ ಸಹಾಯಕ ಅಭಿಯೋಜಕಿ ಕು.ಶಾಂಭವಿ ವಾದ ಮಂಡಿಸಿದ್ದರು.