ಕಾಫಿ ನಾಡಿನ ಚಿಕ್ಕಮಗಳೂರಲ್ಲಿ ಬಂದ್ ಬಿಸಿ..!
– ತುಂತುರು ಮಳೆ ನಡುವೆ ಹೋರಾಟ ಜೋರು
– ಚಿಕ್ಕಮಗಳೂರು ಬಸ್ ಸಂಪೂರ್ಣ ಬಂದ್
– ಜಿಲ್ಲೆಯ ಎಲ್ಲಾ ತಾಲೂಕಲ್ಲಿ ಮಿಶ್ರ ಪ್ರತಿಕ್ರಿಯೆ
NAMMUR EXPRESS NEWS
ಚಿಕ್ಕಮಗಳೂರು: ಕರ್ನಾಟಕ ಬಂದ್ ಗೆ ಚಿಕ್ಕಮಗಳೂರಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ವರ್ತಕರು ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ. ಬಿಜೆಪಿ ಕಾರ್ಯಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು. ಕರ್ನಾಟಕ ರಕ್ಷಣಾ ವೇದಿಕೆ, ಕನ್ನಡ ಸೇನೆ, ರೈತ ಸಂಘದ ಕಾರ್ಯಕರ್ತರು ಬಸ್ ಗಳ ಸಂಚಾರ ತಡೆದು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಶಾಲಾ-ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಣೆ ಮಾಡಿಲ್ಲ. ಕಾಲೇಜುಗಳಿಗೆ ವಿದ್ಯಾರ್ಥಿಗಳು ಬಂದಿದ್ದು, ಪ್ರತಿಭಟನೆ ತೀವ್ರಗೊಂಡ ಬಳಿಕ ಶಾಲಾ-ಕಾಲೇಜುಗಳ ಆಡಳಿತ ಮಂಡಳಿಗಳಿಂದ ರಜೆ ನೀಡಲಾಗಿದೆ. ಮನೆಗೆ ವಾಪಸ್ ಹೋಗಲು ಬಸ್ ಗಳು ಇಲ್ಲದೆ ವಿದ್ಯಾರ್ಥಿಗಳು ಬಸ್ ನಿಲ್ದಾಣದಲ್ಲೇ ಉಳಿದಿದ್ದಾರೆ. ತುಂತುರು ಮಳೆ ಅರಂಭವಾಗಿದ್ದು, ಮಳೆಯ ನಡುವೆ ಹಮಾಲಿ ಸಂಘಟನೆಗಳು ಮೆರವಣಿಗೆ ನಡೆಸಿದರು.
ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ, ಎನ್. ಅರ್. ಪುರ, ಶೃಂಗೇರಿ, ಕಡೂರು, ತರೀಕೆರೆ, ಅಜ್ಜ0ಪುರ, ಮೂಡಿಗೆರೆಯಲ್ಲೂ ಬಂದ್ ಬಿಸಿ ಉದ್ಯಮಿಗಳಿಗೆ ತಟ್ಟಿದೆ. ಆದರೆ ಮಳೆ ಬಂದ್ ಬಿಸಿಗೆ ತಣ್ಣೀರು ಎರಚಿದೆ. ಕೆಲವೆಡೆ ಎಂದಿನಂತೆ ವ್ಯವಹಾರ, ಅಂಗಡಿ ಓಪನ್ ಇದ್ದವು.