ಶಾಸಕ ಬೇಳೂರು ಗೋಪಾಲಕೃಷ್ಣ ಫೋಟೋ ಇದ್ದ ಪ್ಲೆಕ್ಸ್ ಹರಿದು ವಿಕೃತಿ!
– ಅಣ್ಣ-ತಮ್ಮಂದಿರ ಗಲಾಟೆಗೆ 400 ಅಡಿಕೆ ಗಿಡ ನಾಶ
– ಮೀನುಗಾರರ ಬಲೆಗೆ ಬಿದ್ದ 3.5 ಕ್ವಿಂಟಲ್ ಮೀನು!
NAMMUR EXPRES NEWS
ಹೊಸನಗರ: ರಿಪ್ಪನ್ಪೇಟೆ ಸಮೀಪದ ಕೋಡೂರು ಗ್ರಾಪಂ ವ್ಯಾಪ್ತಿಯ ಅಮ್ಮನಘಟ್ಟ ದೇವಸ್ಥಾನದ ಬಳಿ ಜಾತ್ರಾ ಮಹೋತ್ಸವಕ್ಕೆ ಶುಭಾಶಯ ಕೋರಿ ಹಾಕಿದ್ದ ಶಾಸಕ ಬೇಳೂರು ಗೋಪಾಲ ಕೃಷ್ಣ ಫೋಟೋ ಇದ್ದ ಪ್ಲೆಕ್ಸ್ ನ್ನು ಕಿಡಿಗೇಡಿಗಳು ವಿಕೃತಿ ಮೆರೆದಿದ್ದಾರೆ. ಸ್ಥಳೀಯ ಗ್ರಾಮಾಡಳಿತದ ಅನುಮತಿ ಪಡೆದು ಪ್ಲೆಕ್ಸ್ ಶುಕ್ರವಾರ ಅಳವಡಿಸಲಾಗಿತ್ತು ಆದರೆ ರಾತ್ರೋರಾತ್ರಿ ಯಾರೋ ಕಿಡಿಗೇಡಿಗಳು ಪ್ಲೆಕ್ಸ್ ನ್ನು ಬ್ಲಡ್ ನಲ್ಲಿ ಹರಿದು ವಿಕೃತಿ ಮೆರೆದಿದ್ದಾರೆ. ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳುವ ಮೂಲಕ ಕಿಡಿಗೇಡಿಗಳನ್ನು ಬಂಧಿಸಬೇಕು ಈ ಬಗ್ಗೆ ಠಾಣೆಯಲ್ಲಿ ದೂರು ದಾಖಲಿಸಲಿದ್ದೇವೆ ಎಂದು ಸ್ಥಳೀಯ ಮುಖಂಡ ಪ್ರದೀಪ್ ಹೇಳಿದ್ದಾರೆ. ಸ್ಥಳಕ್ಕೆ ಪಿಎಸ್ಐ ಪ್ರವೀಣ್ ಎಸ್ ಪಿ ಭೇಟಿ ನೀಡಿದ್ದು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಅಣ್ಣ ತಮ್ಮಂದಿರ ಗಲಾಟೆಗೆ 400 ಅಡಿಕೆ ಗಿಡ ನಾಶ!
ಕಡೂರು: ಕುಟುಂಬ ದ್ವೇಷದ ಹಿನ್ನೆಲೆ ಒಂದು ಎಕರೆ ಅಡಿಕೆ ತೋಟವನ್ನು ಕಡಿದು ನಾಶ ಮಾಡಿರುವ ಘಟನೆ ತಾಲೂಕಿನ ಸಖರಾಯಪಟ್ಟಣ ಸಮೀಪದ ಪಿಳ್ಳೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಚಿಕ್ಕಪ್ಪ ದೊಡ್ಡಪ್ಪ ಮಕ್ಕಳ ನಡುವೆ ಆಸ್ತಿಗಾಗಿ ಗಲಾಟೆ ನಡೆದಿದ್ದು 400 ಅಡಿಕೆ ಗಿಡಗಳನ್ನು ರಾತ್ರೋರಾತ್ರಿ ಕಡಿದು ನಾಶಪಡಿಸಲಾಗಿದೆ. ಪಿಳ್ಳೇನಹಳ್ಳಿ ಗ್ರಾಮದ ಮಹೇಶ್ ನಾಯಕ್ ಎಂಬುವರಿಗೆ ಸೇರಿದ ತೋಟ ಇದಾಗಿದ್ದು, ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಬ್ಬಬ್ಬಾ ಮೀನುಗಾರರ ಬಲೆಗೆ ಬಿದ್ದ 350 ಕ್ವಿಂಟಲ್ ತೂಕದ ಮೀನು!
ಮಂಗಳೂರಿನ ಮೀನುಗಾರರ ಬಲೆಗೆ 350 ಕೆಜಿ ತೂಕದ ಬೃಹತ್ ಮುರು ಮೀನು ಸಿಕ್ಕಿದ್ದು ಭಾರೀ ಸುದ್ದಿಯಾಗಿದೆ.
ಮಂಗಳೂರು ನಗರದ ಮೀನುಗಾರಿಕಾ ಧಕ್ಕೆಯಿಂದ ಆಳಸಮುದ್ರ ಮೀನುಗಾರಿಕೆಗೆ ಎಂದು ಹೊರಟ ಬೋಟ್ನವರ ಬಲೆಗೆ ಈ ಮೀನು ಬಿದ್ದಿದೆ. ಸುಮಾರು 350 ಕೆಜಿಯಷ್ಟು ತೂಕ ಇರುವ ಈ ಮುರು ಮೀನನ್ನು ಐದಾರು ಮಂದಿ ಮೀನುಗಾರರು ಟೆಂಪೊಗೆ ಹಾಕಲು ಹರಸಾಹಸ ಪಟ್ಟಿದ್ದಾರೆ.