ಧರ್ಮಸ್ಥಳ ಯೋಜನೆಯಿಂದ ಗಾಂಧಿ ಜಯಂತಿ
– ಜನಜಾಗೃತಿ ಜಾಥಾ,ಗಾಂಧಿ ಜಯಂತಿ, ನವಜೀವನ ಸಮಿತಿ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮ
– ಜನ ಜಾಗೃತಿ ಜಾಥಾ ಮೆರವಣಿಗೆ
NAMMUR EXPRESS NEWS
ತೀರ್ಥಹಳ್ಳಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ತೀರ್ಥಹಳ್ಳಿ ತಾಲೂಕು ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಬೆಳ್ತಂಗಡಿ, ಜಿಲ್ಲಾ ಜನಜಾಗೃತಿ ವೇದಿಕೆ ಶಿವಮೊಗ್ಗ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ, ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ಘಟಕಗಳು ಹಾಗೂ ನವಜೀವನ ಸಮಿತಿ ತೀರ್ಥಹಳ್ಳಿ ತಾಲೂಕು ಇವರ ಸಹಯೋಗದಲ್ಲಿ ಪರಮಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹಾಗೂ ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆಯವರ ಶುಭಾಶೀರ್ವಾದದೊಂದಿಗೆ ಜನಜಾಗೃತಿ ಜಾಥಾ,ಗಾಂಧೀ ಜಯಂತಿ ಕಾರ್ಯಕ್ರಮ ಹಾಗೂ ನವಜೀವನ ಸಮಿತಿ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ.
ಅ.2ರ ಬೆಳಿಗ್ಗೆ 11ಕ್ಕೆ ಮಾಧವ ಮಂಗಲ ಸಭಾಭವನ, ತುಂಗಾತೀರ, ತೀರ್ಥಹಳ್ಳಿಯಲ್ಲಿ ಕಾರ್ಯಕ್ರಮ ನಡೆಯಲಿದೆ.
ಮಾಜಿ ಸಚಿವ ಆರಗ ಜ್ಞಾನೇಂದ್ರ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದು, ಜಿಲ್ಲಾ ಜನಜಾಗೃತಿ ವೇದಿಕೆ ಶಿವಮೊಗ್ಗದ ಅಧ್ಯಕ್ಷರಾದ ಸೊಪ್ಪುಗುಡ್ಡೆ ರಾಘವೇಂದ್ರ ಅಧ್ಯಕ್ಷತೆ ವಹಿಸಲಿದ್ದಾರೆ. ಜಾಥಾ ಉದ್ಘಾಟನೆಯನ್ನು ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಗೀತಾ ರಮೇಶ್ ಮಾಡಲಿದ್ದಾರೆ. ಉಪನ್ಯಾಸವನ್ನು ಶಿವಮೊಗ್ಗದ ಮನೋವೈದ್ಯರಾದ ಡಾ.ಎಸ್. ಪವಿತ್ರ ನಡೆಸಿಕೊಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಚಂದ್ರಶೇಖರ್ ಜೆ., ನಿರ್ದೇಶಕರು ಎಸ್.ಕೆ.ಡಿ.ಆರ್.ಡಿ.ಪಿ. ಬಿ. ಸಿ. ಟ್ರಸ್ಟ್ (ರಿ) ಶಿವಮೊಗ್ಗ, ಡಾ.ಜೀವಂಧರ್ ಜೈನ್, ವೈದ್ಯರು, ಪೂಜ್ಯಪಾದ ಚಿಕಿತ್ಸಾಲಯ, ತೀರ್ಥಹಳ್ಳಿ ಡಿವೈಎಸ್ಪಿ ಗಜಾನನ ವಾಮನ ಸುತಾರ, ಜಿಲ್ಲಾ ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ಅಶೋಕಮೂರ್ತಿ, ಮುದ್ದಣ್, ವಿನುತಾ ಮುರಳೀಧರ,ಆಶಾ ಸತೀಶ್, ಆಶಾ ಶ್ರೀನಿವಾಸ್, ಚಂದವಳ್ಳಿ ಸೋಮಶೇಖರ್(ಅಧ್ಯಕ್ಷರು 1719ನೇ ಮಧ್ಯವರ್ಜನ ವ್ಯವಸ್ಥಾಪನಾ ಸಮಿತಿ ಅರಗ),ಸುರೇಶ್ ಶೆಟ್ಟಿ(ಮಾಸ್ಟರ್ ಶೌರ್ಯ ವಿಪತ್ತು ಘಟಕ, ತೀರ್ಥಹಳ್ಳಿ ತಾಲೂಕು) ಉಪಸ್ಥಿತರಿರಲಿದ್ದಾರೆ. ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಶೌರ್ಯ ವಿಪತ್ತು ಘಟಕಗಳು ಹಾಗೂ ನವಜೀವನ ಸಮಿತಿಗಳು, ತೀರ್ಥಹಳ್ಳಿ, ಧರ್ಮಸ್ಥಳ ಯೋಜನೆಯ ಯೋಜನಾಧಿಕಾರಿಗಳು, ಜಿಲ್ಲಾ ಜನಜಾಗೃತಿ ವೇದಿಕೆ ಶಿವಮೊಗ್ಗ ಇವರು ಸರ್ವರನ್ನು ಸ್ವಾಗತಿಸಿದ್ದಾರೆ.
ಜನ ಜಾಗೃತಿ ಜಾಥಾ ಮೆರವಣಿಗೆ
ಬೆಳಿಗ್ಗೆ 9-00ರಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಛೇರಿಯಿಂದ (ಶ್ರೀನಿಧಿ ಕಾಂಪ್ಲೆಕ್ಸ್, ಆಗುಂಬೆ ರೋಡ್ ) ಮುಖ್ಯರಸ್ತೆ ಮೂಲಕ ಮಾಧವ ಮಂಗಲ ಸಭಾ ಭವನದವರೆಗೆ ಜನ ಜಾಗೃತಿ ಜಾಥಾ ಮೆರವಣಿಗೆ ನಡೆಯಲಿದೆ.