ಅಕ್ಟೋಬರ್ 31ರವರೆಗೆ ದಸರಾ ರಜೆ?!
– ದಸರಾ ರಜೆ ಕಡಿತ ಮಾಡದಂತೆ ಸರಕಾರಕ್ಕೆ ಒತ್ತಡ
– ಅ.25ಕ್ಕೆ ಈಗ ರಜೆ ದಿನಾಂಕ ಕೊನೆ ಇತ್ತು
NAMMUR EXPRESS NEWS
ಬೆಂಗಳೂರು : ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ಶಿಕ್ಷಣ ಇಲಾಖೆಯು ಈ ಬಾರಿ 15 ದಿನಗಳ ಕಾಲ ದಸರಾ ರಜೆ ಘೋಷಣೆ ಮಾಡಿದೆ. ದಸರಾ ವಿಸ್ತರಣೆ ಮಾಡುವಂತೆ ಶಿಕ್ಷಕರ ಸಂಘ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಶಿಕ್ಷಣ ಸಚಿವರಿಗೆ ಪತ್ರ ಬರೆದಿದೆ. ಕರ್ನಾಟಕದ ಶಾಲೆಗಳಿಗೆ ಈಗಾಗಲೇ ದಸರಾ ರಜೆಯನ್ನು ನೀಡಲಾಗಿದೆ. ನವರಾತ್ರಿಯ ಆಚರಣೆ ನಡೆಯುತ್ತಿದೆ. ಅಕ್ಟೋಬರ್ 24 ರಂದು ವಿಜಯದಶಮಿ ಆಚರಿಸಲಾಗುತ್ತಿದೆ. ಹಬ್ಬದ ಮರುದಿನ ಅಕ್ಟೋಬರ್ 25 ರಂದು ಶಾಲೆ ಆರಂಭಿಸಲು ಶಿಕ್ಷಣ ಇಲಾಖೆ ಆದೇಶಿಸಿದೆ. ಹಬ್ಬದ ಮರುದಿನ ಶಾಲಾರಂಭ ಮಾಡುವುದು ಮಕ್ಕಳ ಮೇಲೆ ಒತ್ತಡ ಹೆಚ್ಚಲಿದೆ ಅನ್ನೋ ಆತಂಕ ವ್ಯಕ್ತವಾಗಿದೆ.
ಸದ್ಯ ಮಕ್ಕಳು ಶಾಲಾ ರಜೆಯ ಮಜಾ ಅನುಭವಿಸುತ್ತಿದ್ದಾರೆ. ಜೊತೆಗೆ ದಸರಾ ಸಂಭ್ರಮದಲ್ಲಿ ಪಾಲ್ಗೊಂಡಿದ್ದಾರೆ. ಹಬ್ಬದ ಮರು ದಿನ ಶಾಲಾರಂಭ ಮಾಡುವ ಬದಲು ದಸರಾ ರಜೆಯನ್ನು ಅಕ್ಟೋಬರ್ 30ರ ವರೆಗೆ ವಿಸ್ತರಿಸುವಂತೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರಿಗೆ ಪತ್ರ ಬರೆಯುತ್ತಿದ್ದಾರೆ. ವರ್ಷ ರಜೆ ವಿಸ್ತರಣೆ ಕುರಿತು ಶಿಕ್ಷಣ ಇಲಾಖೆ ಶಿಕ್ಷಕರ ಸಂಘಕ್ಕೆ ಮೌಖಿಕವಾಗಿ ತಿಳಿಸಿದ್ದರೂ ಈ ವರ್ಷ ರಜೆ ಅವಧಿ ವಿಸ್ತರಣೆ ಮಾಡಿಲ್ಲ. ಇತರ ಇಲಾಖೆ ನೌಕರರಿಗೆ 30 ದಿನಗಳ ಗಳಿಕೆ ರಜೆ ಸಿಗುತ್ತದೆ, ಆದರೆ ಶಿಕ್ಷಕರಿಗೆ ಕೇವಲ 10 ಗಳಿಕೆ ದಿನಗಳ ರಜೆ ಸಿಗುತ್ತದೆ. ದಸರಾ ಹಾಗೂ ಬೇಸಿಗೆ ರಜೆ ಕಾರಣದಿಂದಲೇ ಗಳಿಕೆ ರಜೆ ಕಡಿಮೆ ಇದೆ. ಹೀಗಾಗಿ ದಸರಾ ರಜೆ ಕಡಿತ ಮಾಡದಂತೆ ಸರಕಾರಕ್ಕೆ ಒತ್ತಡ ಹೇರಿದ್ದಾರೆ.