ಅಂಗಡಿ, ಕಚೇರಿ ಫಲಕದಲ್ಲಿ ಕನ್ನಡ ಕಡ್ಡಾಯ..!
– ಎಲ್ಲಾ ಊರಿಗೂ ನಿಯಮ ಅನ್ವಯ
– ಆದೇಶ ನವೆಂಬರ್ ತಿಂಗಳಿಗೆ ಸೀಮಿತವಲ್ಲ
NAMMUR EXPRESS NEWS
ನಾಡಿನ ರಾಜ್ಯ ಭಾಷೆ ಕನ್ನಡದ ಉಳಿವಿಗಾಗಿ ಮತ್ತು ನಮ್ಮಸಂಸ್ಕೃತಿ ತಿಳಿದುಕೊಳ್ಳುವ ಸಲುವಾಗಿ ರಾಜ್ಯದ ಎಲ್ಲಾ ಅಂಗಡಿ, ಮುಂಗಟ್ಟು, ಹೋಟೆಲ್, ಕಂಪನಿಗಳು ಕನ್ನಡದ ನಾಮಫಲಕವನ್ನು ಕಡ್ಡಾಯವಾಗಿ ಅಳವಡಿಸಬೇಕು. ಇತರೆ ಭಾಷೆಯ ನಾಮಫಲಕಕ್ಕಿಂತ ಕನ್ನಡದ ನಾಮಫಲಕವನ್ನು ದೊಡ್ಡದಾಗಿ ಅಳವಡಿಸುವಂತೆ ಸರ್ಕಾರದ ಆದೇಶವಿದೆ.
ರಾಜ್ಯೋತ್ಸವದ ಸಂದರ್ಭದಲ್ಲಿ ಈ ನಿಯಮವನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕಿದೆ. ಈಗಾಗಲೇ ಸರ್ಕಾರ ಖಡಕ್ ಆದೇಶ ಹೊರಡಿಸಿದೆ.
ಸಂಘಟನೆಗಳ ಎಚ್ಚರಿಕೆ:
ಕರವೇ, ಜಯ ಕರ್ನಾಟಕ ಸೇರಿ ಕನ್ನಡಪರ ಸಂಘಟನೆಗಳು ಈ ಬಗ್ಗೆ ಜನರಿಗೆ ಜಾಗೃತಿ ಮೂಡಿಸಿವೆ. ಉದ್ಯಮಿಗಳು ಸ್ವ ಪ್ರೇರಣೆಯಿಂದ ಕನ್ನಡ ಗೌರವಿಸಿ ಕನ್ನಡ ಫಲಕ ಹಾಕಬೇಕಿದೆ.
ಬ್ಯಾಂಕ್, ಸರ್ಕಾರಿ ಕಚೇರಿಯಲ್ಲಿ ಕಡ್ಡಾಯ
ಬ್ಯಾಂಕ್ ಹಾಗೂ ಕಚೇರಿಗಳಲ್ಲಿ ಕನ್ನಡ ಕಡ್ಡಾಯವಾಗಿ ಬಳಕೆ ಮಾಡಬೇಕಿದೆ. ಸಿಬ್ಬಂದಿ ಕೂಡ ಕನ್ನಡದಲ್ಲಿ ವ್ಯವಹಾರ ಮಾಡಬೇಕಿದೆ. ಇಲ್ಲವಾದಲ್ಲಿ ಕನ್ನಡ ಸಹಾಯವಾಣಿ ವಿಭಾಗ ತೆರೆಯಬೇಕಿದೆ.
ಕನ್ನಡ ಮಾತನಾಡಿ… ಕನ್ನಡ ಉಳಿಸಿ…!