ಹೊಸ ವರ್ಷಕ್ಕೆ ಯುವನಿಧಿ ಯೋಜನೆ ಗಿಫ್ಟ್!
– ಸಿದ್ದರಾಮಯ್ಯ ಸರ್ಕಾರದಿಂದ ಸಿದ್ಧತೆ
– ಪದವೀಧರರಿಗೆ 3000 ರೂ., ಡಿಪ್ಲೋಮೋದವರಿಗೆ 1500 ರೂ.
– ದಾಖಲೆ ಏನೇನು ಬೇಕು..?, ಇಲ್ಲಿದೆ ಮಾಹಿತಿ
NAMMUR EXPRESS NEWS
ಬೆಂಗಳೂರು: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳ ಪೈಕಿ ನಾಲ್ಕು ಗ್ಯಾರಂಟಿಗಳನ್ನು ಜಾರಿಗೆ ತರಲಾಗಿದ್ದು, ಇದೀಗ 5 ನೇ ಗ್ಯಾರಂಟಿ ಯೋಜನೆಯಾದ ಯುವನಿಧಿ ಜಾರಿಗೆ ತರಲು ಸಕಲ ಸಿದ್ಧತೆ ಮಾಡಿಕೊಂಡಿದೆ. ಡಿಪ್ಲೋಮಾ ಹಾಗೂ ಪದವೀಧರರಿಗೆ ಮಾಸಿಕ 1,500 ರೂ. ಹಾಗೂ 3,000 ರೂ. ನೀಡುವ ಯುವನಿಧಿ ಯೋಜನೆಯನ್ನು 2024ರ ಜನವರಿ ಮೊದಲ ವಾರವೇ ಜಾರಿಗೆ ತರಲು ಸರ್ಕಾರ ಈಗಾಗಲೇ ಸಿದ್ಧತೆ ನಡೆಸಿದೆ ಎನ್ನಲಾಗಿದೆ. ರಾಜ್ಯ ಸರ್ಕಾರವು ಈಗಾಗಲೇ ಶಕ್ತಿ ಯೋಜನೆ, ಗೃಹಜ್ಯೋತಿ, ಅನ್ನಭಾಗ್ಯ, ಗೃಹಲಕ್ಷ್ಮೀ ಯೋಜನೆಗೆ ಈಗಾಗಲೇ ಚಾಲನೆ ನೀಡಲಾಗಿದೆ.
ಡಿಸೆಂಬರ್ ಅಂತ್ಯಕ್ಕೆ ಡಿಪ್ಲೋಮಾ, ಪದವೀಧರರಿಗೆ 1,500 ರೂ. ಹಾಗೂ 3,000 ರೂ. ನೀಡುವ ಯುವನಿಧಿ ಯೋಜನೆಯನ್ನು ಜಾರಿಗೆ ತರಲು ಸಕಲ ಸಿದ್ಧತೆ ನಡೆಸಲಾಗಿದೆ. ರಾಜ್ಯ ಸರ್ಕಾರವು ಈಗಾಗಲೇ ಶಕ್ತಿ ಯೋಜನೆ, ಗೃಹಜ್ಯೋತಿ, ಅನ್ನಭಾಗ್ಯ, ಗೃಹಲಕ್ಷ್ಮೀ ಯೋಜನೆಗೆ ಈಗಾಗಲೇ ಚಾಲನೆ ನೀಡಲಾಗಿದೆ. 2024ರ ಜನವರಿ ಮೊದಲ ವಾರವೇ ಡಿಪ್ಲೋಮಾ, ಪದವೀಧರರಿಗೆ 1,500 ರೂ. ಹಾಗೂ 3,000 ರೂ. ನೀಡುವ ಯುವನಿಧಿ ಯೋಜನೆಯನ್ನು ಜಾರಿಗೆ ತರಲು ಸಕಲ ಸಿದ್ಧತೆ ನಡೆಸಲಾಗಿದೆ.
ಯುವನಿಧಿ ನಿರುದ್ಯೋಗ ಭತ್ಯೆಗೆ ದಾಖಲೆ ಏನು ಬೇಕು?
– ಆಧಾರ್ ಕಾರ್ಡ್
– ಆದಾಯ ಪ್ರಮಾಣ ಪತ್ರ
– ಶಿಕ್ಷಣ ಸಂಸ್ಥೆಯಿಂದ ಪಡೆದ ಪ್ರಮಾಣ ಪತ್ರ ಹಾಗೂ ಅಂಕಪಟ್ಟಿ
– ಬ್ಯಾಂಕ್ ಖಾತೆಯ ವಿವರ
– ಇ-ಮೇಲ್ ಐಡಿ
– ಮೊಬೈಲ್ ಸಂಖ್ಯೆ
– ಭಾವಚಿತ್ರ
– ಪದವಿ ಹಾಗೂ ಡಿಪ್ಲೋಮೋ ಮುಗಿಸಿದವರ ಕೊನೆಯ ವರ್ಷದ ಅಂಕಪಟ್ಟಿ.