ಮನೆಯಲ್ಲಿ ಜಾಸ್ತಿ ದುಡ್ಡು ಇಡಂಗಿಲ್ಲ..!
– ಹಣ ವರ್ಗಾವಣೆಗೆ ಜಾರಿಯಾಯ್ತು ಹೊಸ ನಿಯಮ
– ಮನೆಯಲ್ಲಿದ್ದ ಹಣಕ್ಕೆ ದಾಖಲೆ ಇಲ್ದಿದ್ರೆ ಭಾರೀ ದಂಡ
NAMMUR EXPRESS NEWS
ಮನೆಯಲ್ಲಿ ಬೇಕಾಬಿಟ್ಟಿ ಹಣ ಇಟ್ಟುಕೊಳ್ಳುವರಿಗೆ ಶಾಕಿಂಗ್ ಸುದ್ದಿ ಇದು. ಮನೆಯಲ್ಲಿ ಹಣವನ್ನು ನಿರ್ದಿಷ್ಟ ಇಟ್ಟುಕೊಳ್ಳಲು ಯಾವುದೇ ನಿರ್ಬಂಧಗಳಿಲ್ಲ. ಆದರೆ ಒಂದು ವೇಳೆ ನೀವು ಮನೆಯಲ್ಲಿ ಇಟ್ಟಿರುವ ಹಣಕ್ಕೆ ಯಾವುದೇ ದಾಖಲೆ ಇಲ್ಲದೇ ಇದ್ರೆ ಅಂತಹ ಹಣಕ್ಕೆ ಐಟಿ ಇಲಾಖೆ ಶೇ 137ರಷ್ಟು ದಂಡ ವಿಧಿಸುತ್ತದೆ. ಅಲ್ಲದೇ ಒಬ್ಬ ವ್ಯಕ್ತಿ ಯಾವುದೇ ಸಾಲ ಅಥವಾ ಠೇವಣಿಯಾಗಿ ರೂ 20,000ಕ್ಕಿಂತ ಅಧಿಕ ಹಣವನ್ನು ಸ್ವೀಕಾರ ಮಾಡಲು ಸಾಧ್ಯವಿಲ್ಲ. ಮನೆಯಲ್ಲಿ ಹಣವನ್ನು ಇಟ್ಟುಕೊಳ್ಳಲು ಯಾವುದೇ ಮಿತಿಯನ್ನು ಸರಕಾರ ಹೇರಿಲ್ಲ. ಆದರೆ ಇಟ್ಟುಕೊಂಡಿರುವ ಹಣಕ್ಕೆ ಸೂಕ್ತ ದಾಖಲೆಯನ್ನು ನೀಡಬೇಕು. ದಾಖಲೆ ರಹಿತವಾಗಿ ಸಂಗ್ರಹ ಮಾಡುವ ಹಣದ ಮೇಲೆ 137% ರಷ್ಟು ದಂಡವನ್ನು ಪಾವತಿಸ ಬೇಕಾಗುತ್ತದೆ. ಅಷ್ಟೇ ಅಲ್ಲ ಹಣಕಾಸು ವರ್ಷದಲ್ಲಿ 20 ಲಕ್ಷ ರೂ.ಗಿಂತ ಹೆಚ್ಚಿನ ನಗದು ವ್ಯವಹಾರ ನಡೆದರೆ ಪ್ಯಾನ್, ಆಧಾರ್ ದಾಖಲೆ ನೀಡಬೇಕು.
ಆದಾಯ ತೆರಿಗೆ ಕಾಯಿದೆಯ ಪ್ರಕಾರ, ಮನೆಯಲ್ಲಿ ಇರಿಸಲಾಗಿರುವ ನಗದು ಮೊತ್ತಕ್ಕೆ ಯಾವುದೇ ಮಿತಿಯಿಲ್ಲ. ನಿಮಗೆ ಬೇಕಾದಷ್ಟು ಹಣವನ್ನು ಇರಿಸಿಕೊಳ್ಳಬಹುದು. ಆದರೆ ಅದಕ್ಕೆ ಸೂಕ್ತ ದಾಖಲೆಯನ್ನು ಹೊಂದದೇ ಇದ್ದರೆ ಆ ಹಣ ನಿಮಗೆ ದಕ್ಕುವುದಿಲ್ಲ. ಅಷ್ಟೇ ಅಲ್ಲ ನಗದು ಸಂಬಂಧ ಸರಕಾರ ಕೇಳುವ ಮಾಹಿತಿಯನ್ನೂ ನೀಡಬೇಕಾಗುತ್ತದೆ. ಒಂದು ವೇಳೆ ನೀವು ಮನೆಯಲ್ಲಿ ಇಟ್ಟಿರುವ ಹಣಕ್ಕೆ ಯಾವುದೇ ದಾಖಲೆ ಇಲ್ಲ, ದಾಖಲೆ ಇಲ್ಲದೆ ಹಣ ಇಟ್ಟರೆ ಐಟಿ ಇಲಾಖೆ ಶೇ 137ರಷ್ಟು ದಂಡ ವಿಧಿಸುತ್ತದೆ. ಉದಾಹರಣೆಗೆ, ದಾಖಲೆಯಿಲ್ಲದ 1 ಕೋಟಿ ರೂ.ಗಳಿದ್ದರೆ, ಐಟಿ ಇಲಾಖೆಯು 1.37 ಕೋಟಿ ರೂ.ವರೆಗೆ ದಂಡವನ್ನು ವಿಧಿಸಲು ಅವಕಾಶವಿದೆ.
ನಗದು, ಹಣ ವರ್ಗಾವಣೆಗೆ ಹೊಸ ನಿಯಮ ಏನು?
– ಯಾವುದೇ ಸಾಲ ಅಥವಾ ಠೇವಣಿಗಾಗಿ ರೂ 20,000 ಕ್ಕಿಂತ ಹೆಚ್ಚಿನ ಹಣವನ್ನು ಸ್ವೀಕರಿಸಲು ಸಾಧ್ಯವಿಲ್ಲ.
– ವೈಯಕ್ತಿಕ ಆಸ್ತಿಯ ಮಾರಾಟದಲ್ಲಿಯೂ ಸಹ 20,000 ರೂ.ಗಿಂತ ಹೆಚ್ಚಿನ ನಗದು ವರ್ಗಾವಣೆಗೆ ಅವಕಾಶವಿಲ್ಲ.
– ಒಂದು ವಹಿವಾಟಿನಲ್ಲಿ 50,000 ರೂ.ಗಿಂತ ಹೆಚ್ಚು ಠೇವಣಿ ಅಥವಾ ಹಿಂಪಡೆಯುವ ಸಂದರ್ಭದಲ್ಲಿ, ಪ್ಯಾನ್ ಸಂಖ್ಯೆಯನ್ನು ನಮೂದಿಸುವುದು ಕಡ್ಡಾಯವಾಗಿದೆ.
– ಯಾವುದೇ ಹಣಕಾಸು ವರ್ಷದಲ್ಲಿ ರೂ 20 ಲಕ್ಷಕ್ಕಿಂತ ಹೆಚ್ಚಿನ ನಗದು ವಹಿವಾಟು ಆದರೆ ಪ್ಯಾನ್ ಮತ್ತು ಆಧಾರ್ ವಿವರಗಳನ್ನು ಒದಗಿಸಬೇಕು.
– ಆಸ್ತಿ ಮಾರಾಟದಲ್ಲಿ ಪಾವತಿಗೆ 30 ಲಕ್ಷ ರೂ.ಗಿಂತ ಹೆಚ್ಚಿನ ಹಣವನ್ನು ಬಳಸಿದರೆ, ಅದು ತನಿಖೆಯನ್ನು ಎದುರಿಸಬೇಕಾಗುತ್ತದೆ.
– ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಮೂಲಕ ಒಂದು ವಹಿವಾಟಿನಲ್ಲಿ ನಿಧಿ ವರ್ಗಾವಣೆಯು ರೂ 1 ಲಕ್ಷವನ್ನು ಮೀರುವಂತಿಲ್ಲ.
– ಕುಟುಂಬ ಸದಸ್ಯರು ದಿನಕ್ಕೆ 2 ಲಕ್ಷಕ್ಕಿಂತ ಹೆಚ್ಚು ಹಣವನ್ನು ವಿತ್ ಡ್ರಾ ಮಾಡುವುದನ್ನು ನಿರ್ಬಂಧಿಸಲಾಗಿದೆ.