ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ
– ನೂತನ ಕಟ್ಟಡದ ಉದ್ಘಾಟನಾ ಸಮಾರಂಭ
– ಸರ್ವರನ್ನು ಸ್ವಾಗತಿಸಿದ ಸೊಸೈಟಿ ಆಡಳಿತ
NAMMUR EXPRESS NEWS
ತೀರ್ಥಹಳ್ಳಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ 30-12-2023 ನೇ ಶನಿವಾರ ಬೆಳಗ್ಗೆ 10-30ಕ್ಕೆ ಯಡೂರು ಸಹಕಾರಿ ಸಂಘದ ಆವರಣದಲ್ಲಿ ನಡೆಯಲಿದೆ. ಶ್ರೀ ಗುತ್ತಿ ರೇಣುಕಾಂಬ ಸಭಾ ಭವನ, ಸುಳುಗೋಡಿನ ಯಡೂರಿನಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖಾ ಸಚಿವರು, ಕರ್ನಾಟಕ ಸರ್ಕಾರ ಮತ್ತು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪನವರು ಕಟ್ಟಡ ಉದ್ಘಾಟನೆ ಮಾಡಲಿದ್ದಾರೆ. ಆರ್ ಎಂ ಮಂಜುನಾಥ ಗೌಡ, ಮಾಜಿ ಅಧ್ಯಕ್ಷರು, ಅಪೆಕ್ಸ್ ಬ್ಯಾಂಕ್, ಬೆಂಗಳೂರು, ಅಧ್ಯಕ್ಷರು, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಶಿವಮೊಗ್ಗ, ಅವರ ಸಾರಥ್ಯದಲ್ಲಿ ಸಮಾರಂಭ ಉದ್ಘಾಟನೆಯಾಗಲಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಶಶಾಂಕ್ ಕೊಳವಾಡಿ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನೆರವೇರಲಿದೆ.
ಶ್ರೀ ಆರಗ ಜ್ಞಾನೇಂದ್ರ, ಮಾಜಿ ಗೃಹ ಸಚಿವರು, ಕರ್ನಾಟಕ ಸರ್ಕಾರ ಮಾನ್ಯ ವಿಧಾನಸಭಾ ಸದಸ್ಯರು, ತೀರ್ಥಹಳ್ಳಿ ಕ್ಷೇತ್ರ, ಮಾಜಿ ಶಿಕ್ಷಣ ಸಚಿವರು ಕಿಮ್ಮನೆ ರತ್ನಾಕರ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಎಂ. ಎಂ ಪರಮೇಶ್, ನಿರ್ದೇಶಕರು, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಶಿವಮೊಗ್ಗ, ಎನ್. ಸುಧೀರ್, ನಿರ್ದೇಶಕರು, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್, ಶಿವಮೊಗ್ಗ ಜಿ. ವಾಸುದೇವ್, ಮುಖ್ಯ ಕಾರ್ಯನಿರ್ವಾಹಕರು ಡಿ. ಸಿ. ಸಿ ಬ್ಯಾಂಕ್, ಶಿವಮೊಗ್ಗ ಮತ್ತು ಸಹಕಾರ ಸಂಘಗಳ ಉಪನಿಬಂಧಕರು, ಶಿವಮೊಗ್ಗ ಜಿಲ್ಲೆ, ಶೃತಿ ಶೇಷಾದ್ರಿ,ಅಧ್ಯಕ್ಷರು ಗ್ರಾಮ ಪಂಚಾಯಿತಿ ಸುಳುಗೋಡು,ಹೆಚ್ ಡಿ ಜಯಪ್ರಕಾಶ್, ಅಧ್ಯಕ್ಷರು ಗ್ರಾಮ ಪಂಚಾಯಿತಿ ಯಡೂರು, ಕೆ. ಬಿ. ಕೃಷ್ಣಮೂರ್ತಿ,ಅಧ್ಯಕ್ಷರು ಗ್ರಾಮ ಪಂಚಾಯಿತಿ, ಖೈರುಗುಂದ ಮಾಸ್ತಿಕಟ್ಟೆ, ಇವರುಗಳು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಶಶಾಂಕ್ ಕೊಳವಾಡಿ ಅಧ್ಯಕ್ಷರು,
ನಾಗೇಶ್ ಗೌಡ ಹಿರೇಬೈಲು ಉಪಾಧ್ಯಕ್ಷರು,
ಮಂಜುನಾಥ ಹೊಸಗದ್ದೆ ನಿರ್ದೇಶಕರು,
ಟೀಕಪ್ಪ ಗೌಡ ಹುಮ್ಮಡಗಲ್ಲು ನಿರ್ದೇಶಕರು,
ಪುರುಷೋತ್ತಮ ಜಗನಕೊಪ್ಪ ನಿರ್ದೇಶಕರು,
ರಮೇಶ್ ಅಚ್ಚುಮನೆ ನಿರ್ದೇಶಕರು,
ಪ್ರಶಾಂತ ಹಂದಿಗೆಮನೆ ನಿರ್ದೇಶಕರು,
ವಿನೋದ ರಾಜಶೇಖರ ಗಿಣಿಕಲ್ಲು ನಿರ್ದೇಶಕರು,
ಸತ್ಯ ಪ್ರೇಮ ಯೋಗೇಂದ್ರ ಮೇಲಿನಬೈಸೆ ನಿರ್ದೇಶಕರು,
ಸರಸ್ವತಿ ರತ್ನಾಕರ್ ಕೊಳವಾಡಿ ನಿರ್ದೇಶಕರು,
ಯಶೋದ ಚಂದ್ರಶೇಖರ್ ಸುಳಗೋಡು ನಿರ್ದೇಶಕರು,
ಶಿವಕುಮಾರ್ ಎಸ್ ಕ್ಷೇತ್ರ ಅಧಿಕಾರಿಗಳು, ಡಿಸಿಸಿ ಬ್ಯಾಂಕ್ ಹೊಸನಗರ ಶಾಖೆ, ಜಿಲ್ಲಾ ಬ್ಯಾಂಕ್ ಪ್ರತಿನಿಧಿ,
ಮಹೇಶ್ ಮಾಗಲು, ಮಾಜಿ ಅಧ್ಯಕ್ಷರು, ವೃತ್ತಿಪರ ನಿರ್ದೇಶಕರು,
ಮಹಮ್ಮದ್ ಶರೀಫ್ ಯಡೂರು ವೃತ್ತಿಪರ ನಿರ್ದೇಶಕರು.
ಸಂತೋಷ್ ಹೊಸಗದ್ದೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಶ್ರೀಮತಿ ಕೆ ಆರ್ ಚೇತನ, ನಗದು ಗುಮಾಸ್ತೆ, ವಿಜೇತ್ ಗೌಡ ಕೊಳೂರು, ಪಿಗ್ಮಿ ಸಂಗ್ರಾಹಕರು ಇರಲಿದ್ದಾರೆ.