ಟಾಪ್ ನ್ಯೂಸ್ ಮಲ್ನಾಡ್
ಶೃಂಗೇರಿ: ನದಿಯಲ್ಲಿ ಮುಳುಗಿ ಯುವಕ ದುರ್ಮರಣ!
– ಮಂಡಗದ್ದೆ: ಮರಕ್ಕೆ ಡಿಕ್ಕಿ ಹೊಡೆದು ಓರ್ವ ಸಾವು
– ಶಿವಮೊಗ್ಗ : ರೈಲ್ವೆ ನಿಲ್ದಾಣ ಅಸ್ವಸ್ಥ ಮಹಿಳೆಯ ರಕ್ಷಣೆ
– ಕಾರವಾರ: ಕಚೇರಿ ಸೇರಿ 3 ಮನೆಗಳು ಬೆಂಕಿಗಾಹುತಿ
– ಭದ್ರಾವತಿ: ಬ್ರಿಡ್ಜ್ ಬಳಿ ಗೋವು ಬುರುಡೆ ಪತ್ತೆ!
NAMMUR EXPRESS NEWS
ಶೃಂಗೇರಿ: ನದಿಯಲ್ಲಿ ಸ್ನಾನಕ್ಕೆಂದು ತೆರಳಿದ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಯಡದಳ್ಳಿ ಗ್ರಾಮದಲ್ಲಿ ನಡೆದಿದೆ. ಮರಡಿನ ಬೈಲು ಗ್ರಾಮದ ಸುರೇಶ್ ಹಾಗೂ ಲಕ್ಷ್ಮಿ ಅವರ ಪುತ್ರ ನಿತಿನ್ (23) ನೀರಿನಲ್ಲಿ ಮುಳುಗಿ ಮೃತ ಪಟ್ಟ ಯುವಕ ನಿತಿನ್ ಸೇರಿದಂತೆ 6 ಜನ ಯುವಕರ ತಂಡ ಯಡದಳ್ಳಿ ಗ್ರಾಮದ ನಳಿನಿ ನದಿಯಲ್ಲಿ ಸ್ನಾನಕ್ಕೆಂದು ತೆರಳಿದಾಗ ಆಕಸ್ಮಿಕವಾಗಿ ನದಿಯ ನೀರಿನಲ್ಲಿ ನಿತಿನ್ ಮುಳುಗಿ ಮೃತಪಟ್ಟಿದ್ದಾನೆ. ಈ ಕುರಿತು ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಡಗದ್ದೆ ಬಳಿ ರಸ್ತೆ ಅಪಘಾತ ಓರ್ವ ಸಾವು
ಶಿವಮೊಗ್ಗ: ಸಕ್ರಬೈಲಿನ ಬಳಿ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದಿದ್ದು ಅಪಘಾತದಲ್ಲಿ ವ್ಯಕ್ತಿಯೋರ್ವ ಸಾವು ಕಂಡಿರುವ ಘಟನೆ ನಡೆದಿದೆ. 1 ವರ್ಷದಿಂದ ಹೊಸಮನೆ 5 ನೇ ಕ್ರಾಸ್ ನಲ್ಲಿರುವ ಸಾಗರ್ ಅವರ ಮಾಲೀಕತ್ವದ ಶಿವಮೊಗ್ಗ ಸಿಟಿ ಎಂಟರ್ ಪ್ರೈಸಸ್ ಸರ್ವಿಸ್ ಸೆಂಟರ್ ಎಂಬುದನ್ನ ಕಿರಣ್ ಎಂಬುವರು ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿದ್ದರು. ಒಂದು ವಾರದ ಹಿಂದೆ ಅವರ ಊರಾದ ಕುಂದಾಪುರಕ್ಕೆ ಹೋಗಿದ್ದು, ಶಿವಮೊಗ್ಗದಲ್ಲಿ ಸಾಗರ್ ಮಾಲೀಕತ್ವದ ಶಿವಮೊಗ್ಗ ಸಿಟಿ ಎಂಟರ್ ಪ್ರೈಸಸ್ ಸರ್ವೀಸ್ ಸೆಂಟರ್ ತುಂಬಾ ಲಾಸ್ ನಲ್ಲಿ ಇದ್ದುದ್ದರಿಂದ ಅದನ್ನು ಕ್ಲೋಸ್ ಮಾಡಿಕೊಂಡು ಅಲ್ಲಿದ್ದ ಸಾಮಾನು ಗಳನ್ನು ವಾಪಸ್ ತರುವ ಸಲುವಾಗಿ ಮಾಲೀಕ ಸಾಗರ್, ಕಿರಣ್ ಮತ್ತೊಬ್ಬ ಸ್ನೇಹಿತ ಉಮೇಶ ರವರು ಮೊನ್ನೆ ಬೆಳಗಿನ ಜಾವ 1-00 ಗಂಟೆಗೆ ಮಂಗಳೂರಿನಿಂದ ಸಾಗರ್ ರವರ ಕೆಎ-19-ಎಂಎಂ-0574 ನೋಂದಣಿ ಸಂಖ್ಯೆಯ ಹುಂಡೈ ವೆನೋ ಕಾರ್ ನಲ್ಲಿ ಹೊರಟಿದ್ದರು.
ಕಿರಣ್ ಉಡುಪಿಯಲ್ಲಿ ಕಾರನ್ನು ಹತ್ತಿಕೊಂಡಿದ್ದು ಕಿರಣ್, ಸಾಗರ್ ಮತ್ತು ಉಮೇಶ ರವರು ಕಾರಿನಲ್ಲಿ ಶಿವಮೊಗ್ಗಕ್ಕೆ ಹೊರಟಿದ್ದಾರೆ. ಮಾಲೀಕ ಸಾಗರ್ ಕಾರನ್ನು ಚಾಲನೆ ಮಾಡುತ್ತಿದ್ದು ಉಮೇಶ ರವರು ಚಾಲಕನ ಪಕ್ಕದ ಸೀಟಿನಲ್ಲಿ ಹಾಗೂ ಕಿರಣ್ ಕಾರ್ ಹಿಂಬದಿ ಸೀಟಿನಲ್ಲಿ ಕುಳಿತುಕೊಂಡಿದ್ದರು, ಬೆಳಿಗ್ಗೆ, ಸುಮಾರು 4-00 ಗಂಟೆ ಸಮಯದಲ್ಲಿ ಶಿವಮೊಗ್ಗದ ಮಂಡಗದ್ದೆ ದಾಟಿ ಶಿವಮೊಗ್ಗ ನಗರದ ಕಡೆಗೆ ಬರುವಾಗ ಹುಲಿಹಳ್ಳ ಕ್ರಾಸ್ ಬಳಿ ಬರುತ್ತಿದ್ದಾಗ ಎದುರಿನಿಂದ ಬಂದ ವಾಹನದ ಲೈಟ್ ನ ಬೆಳಕಿಗೆ ದಾರಿ ಕಾಣದೆ ರಸ್ತೆ ಬದಿಯಲ್ಲಿದ್ದ ಮರವೊಂದಕ್ಕೆ ಸಾಗರ್ ಕಾರನ್ನ ಡಿಕ್ಕಿ ಹೊಡೆಸಿದ್ದಾರೆ ಚಾಲಕನ ಪಕ್ಕದ ಸೀಟ್ ನಲ್ಲಿ ಕುಳಿತಿದ್ದ ಉಮೇಶ ರವರಿಗೆ ತಲೆಗೆ ಪೆಟ್ಟು ಬಿದ್ದು ಕಿವಿಯಲ್ಲಿ ಮತ್ತು ಮೂಗಿನಲ್ಲಿ ರಕ್ತ ಬಂದಿದೆ.
ಎಡ ಭುಜದ ಬಳಿ ಪೆಟ್ಟು ಬಿದ್ದಿದ್ದು ಕಾರ್ ಚಾಲನೆ ಮಾಡುತ್ತಿದ್ದ ಸಾಗರನಿಗೂ ಸಹ ಸಣ್ಣ ಪುಟ್ಟ ಪೆಟ್ಟು ಬಿದ್ದಿದೆ. ಕಾರಿನ ಹಿಂಬದಿ ಕುಳಿತಿದ್ದ ಕಿರಣ್ ಗೂ ಸಹ ಒಳಪೆಟ್ಟಾಗಿರುತ್ತೆ, ನಂತರ ಅಲ್ಲಿದ್ದ ಸ್ಮಳಿಯರು ಅಂಬುಲೆನ್ಸ್ ಗೆ ಕರೆ ಮಾಡಿದ್ದು ಅಂಬುಲೆನ್ಸ್ ನಲ್ಲಿ ಮೂವರು ಸೇರಿ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ. ಆಸ್ಪತ್ರೆಯಲ್ಲಿನ ವೈದ್ಯರು ಉಮೇಶ ರವರನ್ನು ಪರೀಕ್ಷಿಸಿ ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ರಸ್ತೆ ಅಘಾತದಲ್ಲಿ ಉಮೇಶ್ ಸಾವನ್ನಪ್ಪಿದ್ದು ತುಂಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಶಿವಮೊಗ್ಗ ರೈಲ್ವೆ ನಿಲ್ದಾಣ ಅಸ್ವಸ್ಥ ಮಹಿಳೆಯ ರಕ್ಷಣೆ
ಶಿವಮೊಗ್ಗ ನಗರದ ರೈಲ್ವೆ ನಿಲ್ದಾಣದ ಬಳಿ ಮಲಗಿದ್ದ ಅಸ್ವಸ್ಥೆಯೊಬ್ಬರನ್ನ ಪೊಲೀಸರು ಹಾಗೂ ಸ್ಥಳೀಯರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ ಘಟನೆಯೊಂದರ ಬಗ್ಗೆ ವರದಿಯಾಗಿದೆ ಕಳೆದ 13 ನೇ ತಾರೀಖು ಈ ಘಟನೆ ನಡೆದಿದೆ. ಈ ಸಂಬಂಧ ಮೊನ್ನೆ ಶಿವಮೊಗ್ಗದ ಕೋಟೆ ಪೊಲೀಸ್ ಸ್ಟೇಷನ್ ವ್ಯಾಪ್ತಿಯ 112 ಗೆ ಸ್ಥಳೀಯರು ಕರೆ ಮಾಡಿ ಶಿವಮೊಗ್ಗ ರೈಲ್ವೆ ಸ್ಟೇಷನ್ ಸಮೀಪ ಅಸ್ವಸ್ಥರಾಗಿ ಮಹಿಳೆಯೊಬ್ಬರು ಮಲಗಿರುವುದಾಗಿ ತಿಳಿಸಿದ್ದಾರೆ. ತಕ್ಷಣವೇ ವಿಚಾರ ತಿಳಿದು ಸ್ಥಳಕ್ಕೆ ಬಂದ ಪೊಲೀಸರು, ಸ್ಥಳೀಯರ ಸಹಾಯ ಪಡೆದು ಮಹಿಳೆಯ ರಕ್ಷಣೆಗೆ ಮುಂದಾಗಿದ್ದಾರೆ. ಆಕೆಯ ಮನವೊಲಿಸಿ ರಕ್ಷಣೆ ಮಾಡಿದ ಪೊಲೀಸರು ತುರ್ತು ಅಗತ್ಯದ ಚಿಕಿತ್ಸೆಗಾಗಿ ಅವರನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲದೆ ಈ ಸಂಬಂಧ ಸ್ಥಳೀಯ ಪೊಲೀಸ್ ಸ್ಟೇಷನ್ ಕೋಟೆ ಪೊಲೀಸ್ ಸ್ಠೇಷನ್ಗೆ ಮಾಹಿತಿ ನೀಡಿದ್ದಾರೆ.
ವಿದ್ಯುತ್ ಶಾರ್ಟ ಸರ್ಕ್ಯೂಟ್: ಮನೆಗಳು ಬೆಂಕಿಗಾಹುತಿ
ಕಾರವಾರ : ವಿದ್ಯುತ್ ಶಾರ್ಟ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಸಂಭವಿಸಿ ಮೂರು ಮನೆಗಳು ಸಂಪೂರ್ಣ ಬೆಂಕಿಗಾಹುತಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಕಸ್ತೂರಬಾ ನಗರದಲ್ಲಿ ನಡೆದಿದೆ. ಶೇಖ್ ಅಹ್ಮದ್ ಎಂಬುವವರಿಗೆ ಸೇರಿದ ಮೂರು ಮನೆಗಳಾಗಿದ್ದು ಎರಡು ಮನೆಯನ್ನು ಬಾಡಿಗೆ ನೀಡಿದ್ದರು. ಬಾಡಿಗೆ ಮನೆಯಲ್ಲಿದ್ದ ಮಾರಿಕಾಂಬಾ ಡಿಜಿಟಲ್ ಕೇಬಲ್ ನೆಟ್ವರ್ಕ್ ನ ಸೆಟಪ್ ಬಾಕ್ಸ್ ಸೇರಿದಂತೆ ಹಲವು ವಸ್ತುಗಳು ಬೆಂಕಿಗಾಹುತಿಯಾಗಿದ್ದು ಹತ್ತು ಲಕ್ಷಕ್ಕೂ ಹೆಚ್ಚು ಹಾನಿ ಸಂಭವಿಸಿದೆ.ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿಗಳಿಂದ ಬೆಂಕಿ ನಂದಿಸಿದ್ದು ಶಿರಸಿ ನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಭದ್ರಾವತಿಯ ಬಳಿ ಗೋವಿನ ಮೂಳೆಗಳು ಪತ್ತೆ
ಭದ್ರಾವತಿ : ಭದ್ರಾವತಿ ತಾಲೂಕಿನ ಕಾಗೆ ಕೋಡ್ ಮಗ್ಗೆ ಗ್ರಾಮದ ಬಳಿಯ ಕಾಗೆ ಹಳ್ಳ ಬ್ರಿಡ್ಜ್ ನ ಬಳಿ ಗೋವಿನ ಬುರುಡೆಗಳು ಪತ್ತೆಯಾಗಿದ್ದು ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಂಯೋಜಕರಾದ ದೇವರಾಜ ಅರಳಿಹಳ್ಳಿ ಅವರು ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಭದ್ರಾವತಿಯಲ್ಲಿ ಪದೇ ಪದೇ ಈ ರೀತಿ ಗೋ ಹತ್ಯೆ ವಿಚಾರವಾಗಿ ದೂರುಗಳು ದಾಖಲಾಗುತ್ತಿದ್ದು ಗೋವಿನ ಖನಿಜಗಳು ಮತ್ತೆ ಮತ್ತೆ ಸಿಗುತ್ತಿರುವುದು ಗೋ ಹತ್ಯೆ ನಡೆಯುತ್ತಿರುವುದಕ್ಕೆ ಸಾಕ್ಷಿಯಾಗಿದೆ.