-ವ್ಯಾಟ್ಸಪ್ ನಲ್ಲೂ “ಊP”ಗ್ಯಾಸ್ ಬುಕ್ಕಿಂಗ್ ಮಾಡಬಹುದು
-ಆನ್ಲೈನ್ ಪೇಮೆಂಟ್ ಕೂಡ ಲಭ್ಯ
ಬೆಂಗಳೂರು : ಎಚ್ ಪಿಸಿಎಲ್ ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿಯೊಂದನ್ನು ನೀಡಿದ್ದು, ಇನ್ಮುಂದೆ ಗ್ರಾಹಕರು ವಾಟ್ಸಪ್ ಮೂಲಕವೂ ಎಚ್ ಪಿ ಗ್ಯಾಸ್ ಬುಕ್ ಮಾಡಬಹುದು ಎಂದು ತಿಳಿಸಿದೆ.
ಹೌದು, ಇನ್ಮುಂದೆ ಗ್ರಾಹಕರು ಮೊಬೈಲ್ ಸಂಖ್ಯೆ 9222201122 ಸೇವ್ ಮಾಡಿಕೊಂಡು ಬುಕ್ (ಃಔಔಏ)) ಎಂದು ಸಂದೇಶ ಕಳುಹಿಸಿದರೆ ಗ್ಯಾಸ್ ಬುಕ್ ಆಗಲಿದೆ.
ಹೆಚ್ಚಿನ ಮಾಹಿತಿಗಾಗಿ ಇದೇ ನಂಬರ್ ಗೆ ಹೆಲ್ಪ್ (ಊಇಐP) ಎಂದು ಸಂದೇಶ ಕಳುಹಿಸಿ ಮಾಹಿತಿ ಪಡೆಯಬಹುದು. ಜೊತೆಗೆ ಎಲ್ ಪಿಜಿ ಕೋಟಾ, ಎಲ್ ಪಿಜಿ ಐಡಿ, ಸಬ್ಸಿಡಿ ಬಗ್ಗೆಯೂ ಮಾಹಿತಿ ಸಿಗಲಿದೆ.
ಗ್ಯಾಸ್ ಬುಕ್ಕಿಂಗ್ ಆದ ನಂತರ ನಿಮ್ಮ ಮೊಬೈಲ್ ಗೆ ಒನ್ ಟೈಮ್ ಪಾಸವರ್ಡ್ ಬರಲಿದ್ದು, ಈ ಪಾಸ್ ವರ್ಡ್ ಅನ್ನು ಗ್ಯಾಸ್ ತಲುಪಿಸಿದವರಿಗೂ ತಿಳಿಸಬೇಕು. ಜೊತೆಗೆ ಎಚ್ ಪಿಸಿಎಲ್ ಡಿಜಿಟಲ್ ಪೇಮೆಂಟ್ ಪರಿಚಯಿಸುತ್ತಿದ್ದು, ಇನ್ಮುಂದೆ ಗ್ರಾಹಕರು ಫೋನ್ ಪೇ, ಗೂಗಲ್ ಪೇ, ಪೇಟಿಎಂ, ಅಮೇಜಾನ್ ಪೇ ಮೂಲಕ ಪೇಮೆಂಟ್ ಪಾವತಿಸಬಹುದು ಎನ್ನಲಾಗಿದೆ.