-ಕೊರೋನಾ ಪರೀಕ್ಷೆ ವಿಚಾರದಲ್ಲಿ ಕೇಂದ್ರ ಸರ್ಕಾರದ ಮೆಚ್ಚುಗೆಗೆ ಪಾತ್ರವಾಗಿದ್ದ ಕರ್ನಾಟಕ
-ಲಸಿಕ ಹಂಚಿಕೆಯಲ್ಲೂ ಪ್ರಥಮ ಸ್ಥಾನ!
ಬೆಂಗಳೂರು: ಕೊರೋನಾ ಪರೀಕ್ಷೆ ವಿಚಾರದಲ್ಲಿ ಸೇರಿದಂತೆ, ಕೊರೋನಾ ಲಸಿಕೆ ಹಂಚಿಕೆ ವಿಚಾರದಲ್ಲಿ ಕರ್ನಾಟಕ ರಾಜ್ಯ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ.
ರಾಜ್ಯದಲ್ಲಿ ಕಠಿಣ ನಿಯಮಾವಳಿ ಜಾರಿ ಮಾಡುವ ಮೂಲಕ ಕೋವಿಡ್ ಅನ್ನು ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ಯಶಸ್ವಿಯಾಗಿತ್ತು. ಆ ಬಳಿಕ ತ್ವರಿತಗತಿಯಲ್ಲಿ ರಾಜ್ಯ ಬಹುತೇಕ ಜಿಲ್ಲೆಗಳನ್ನು ಲ್ಯಾಬ್ ಗಳನ್ನು ಆರಂಭಿಸಿದ ಸರ್ಕಾರ ಕೋವಿಡ್ ಟೆಸ್ಟಿಂಗ್ ವಿಚಾರದಲ್ಲೂ ಉಳಿದ ರಾಜ್ಯಗಳಿಗೆ ಮಾದರಿಯಾಗುವ ಮೂಲಕ ಕೇಂದ್ರ ಸರ್ಕಾರದ ಮೆಚ್ಚುಗೆಗೆ ಪಾತ್ರವಾಗಿತ್ತು.
ಶನಿವಾರವಷ್ಟೇ ಲಸಿಕೆ ಹಂಚಿಕೆ ಪ್ರಕ್ರಿಯೆ ಆರಂಭವಾಗಿದ್ದು, ಅಷ್ಟರಲ್ಲೇ ಕರ್ನಾಟಕದಲ್ಲಿ 80,686 ಮಂದಿ ಕೋವಿಡ್ ಲಸಿಕೆ ಪಡೆದಿದ್ದಾರೆ.