ಗುಡುಗಿನ ಶಬ್ದ ಕೇಳಿ ಏಳುವ ಹೆಗ್ಗಲು ಅಣಬೆ..!
– ಅಣಬೆಯ ಉಪಯೋಗ ತಿಳಿದ್ರೆ ದಿನ ತಿಂತೀರಾ
– ಅಣಬೆ ಸಸ್ಯಹಾರವೋ? ಮಾಂಸಾಹಾರವೋ…?
– ಮಳೆಗಾಲದ ಫೇವರಿಟ್ ತಿನಿಸಲ್ಲಿ ಅಣಬೆಯೂ ಒಂದು
NAMMUR EXPRESS NEWS
ಮಳೆಗಾಲದಲ್ಲಿ ಮಲೆನಾಡಿಗರಿಗಂತೂ ಹಬ್ಬ ಅಣಬೆ, ಕೆಸ, ಮರಗೆಸ ಕಳಲೆ ,ಅರಶಿಣದೆಲೆ ಇದನ್ನೆಲ್ಲ ವರ್ಷಕ್ಕೊಂದು ಸಲನಾದ್ರು ತಿನ್ನಬೇಕು ಎನ್ನುವ ಆಸೆ ಎಲ್ಲರಿಗೂ ಇದ್ದಿದ್ದೇ…!.
ಅಣಬೆ ಮಳೆಗಾಲದಲ್ಲಿ ಆಕರ್ಷಕವಾಗಿ ಅಲ್ಲಲ್ಲಿ ಕಂಡುಬರುತ್ತದೆ. ಇದು ಸಸ್ಯವೋ ಅಲ್ಲ ಪ್ರಾಣಿಯೂ ಅಲ್ಲ ಇದೊಂದು ಶಿಲೀಂದ್ರ. ಇದರ ವೈಜ್ಞಾನಿಕ ಹೆಸರು ಅಗಾರಿಕಸ್ ಬಿಸ್ಪೂರಸ್ ಇದರಲ್ಲಿ ಸುಮಾರು 700ಕ್ಕೂ ಹೆಚ್ಚು ವಿಧದ ಅಣಬೆಗಳಿವೆ. ಅದರಲ್ಲಿ ಆಹಾರಕ್ಕೆ ಬಳಕೆ ಮಾಡೋದು ಬೆರಳೆಣಿಕೆಯಷ್ಟು ಮಾತ್ರ ಕೆಲವು ವಿಷಕಾರಿ ಅಣಬೆಗಳು ಸಹ ಇವೆ.
ವಿಷಪೂರಿತ ಅಣಬೆ ಸೇವನೆ ಅಪಾಯಕಾರಿ,ಅಣಬೆ ತಿನ್ನುವಾಗ ಅವುಗಳ ಬಗ್ಗೆ ತಿಳಿದುಕೊಂಡು ಜಾಗ್ರತೆ ವಹಿಸಬೇಕು.
ಅಣಬೆ ಪ್ರೋಟೀನ ವಿಟಮಿನ್ ,ಫೈಬರ್,ಖನಿಜ,ತಾಮ್ರ
ಸೆಲೆನಿಯಮ್,ಪೊಟ್ಯಾಷಿಯಂ ಕೂಲೀನ್ ಮುಂತಾದ
ಸೂಕ್ಮ ಪೋಷಕಾಂಶಗಳ ಆಗರ ಅಣಬೆಯ ವಿಶೇಷ ರುಚಿಯು ಆಹಾರ ಪದಾರ್ಥದ ರುಚಿ ಹಾಗೂ ಶ್ರೀಮಂತಿಕೆಯನ್ನು ಹೆಚ್ಚಿಸಿದೆ ಆಹಾರದಲ್ಲಿ ಅಣಬೆಯ ಬಳಕೆಯಿಂದ ಅನೇಕ ಆರೋಗ್ಯಕರ ಪ್ರಯೋಜನಗಳಿವೆ.
ಅಣಬೆ ಬಳಕೆಯಿಂದ ಆರೋಗ್ಯಕರ ಪ್ರಯೋಜನಗಳೇನು?
- ಪೋಟೀನ್ ಯುಕ್ತ ಆಹಾರವಾಗಿದ್ದು ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆ ಮಾಡಲು ಸಹಾಯಕ
- ದೇಹಕ್ಕೆ ಅಗತ್ಯವಾದಸೂಕ್ಮ ಪೋಷಕಾಂಶ ಒದಗಿಸುತ್ತದೆ
- ಮಧುಮೇಹ ಹಾಗೂ ಕ್ಯಾನ್ಸರ್ ರೋಗ ನಿಯಂತ್ರಿಸಲು ಸಹಾಯಕ
- ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
- ಮೆದುಳಿನ ಆರೋಗ್ಯಕ್ಕೂ ಸಹಾಯಕ
- ಔಷಧೀಯ ಕ್ಷೇತ್ರದಲ್ಲಿ ಬಳಸಲಾಗುತ್ತಿದೆ.
ಮಲೆನಾಡಲ್ಲಿ ಅಣಬೆ ಸಂಭ್ರಮ!
ಮಲೆನಾಡಿಗರಿಗೆ ಹೈಗನ ಅಳಬಿ ,ದೂಪದಳಬಿ, ಎಣ್ಣೆ ಅಳಬಿ , ಅಕ್ಕಿಅಳಬಿ,ಚ್ಚುಳ್ಅಳಬಿ, ಮೊಟ್ಟೇಅಳಬಿ ,ಹಗ್ಗಲಳಬಿ ಇವುಗಳೆಲ್ಲ ಚಿರಪರಿಚಿತ ಇದನ್ನು ಆರಿಸಿ ತರೋದೆ ಒಂದ್ ಸಂಭ್ರಮ. ಮಳೆ ಬರುವಾಗ ಗುಡುಗು ಜೋರಾಗಿದ್ರೆ ಹೆಗ್ಗಲಳಬಿ ಏಳುತ್ತದೆ ಅದು ನಾಗರಹಾವಿನ ನಡೆ ಇದ್ದಲ್ಲಿ ಏಳತ್ತೆ ಅದನ್ನು ಮೊದಲು ನೋಡಿದವರು ಕೂಗಿ ಹೇಳಬೇಕು ಅನ್ನೋದು ರೈತಾಪಿ ಜನರ ನಂಬಿಕೆ. ಇದು ಮೂರು ದಿನಾನು ಅದೇ ಜಾಗದಲ್ಲೇ ಏಳುತ್ತೆ. ರೊಟ್ಟಿಗೆ ಅಳಬಿ ಪಲ್ಯೆ ಇದ್ರೆ ಆ ರುಚಿನೇ ಬೇರೆ.
ಇತ್ತೀಚಿಗೆ ಅಣಬೆ ಬೆಳೆಯುಆಹಾರದ ಜೊತೆಗೆ ರೈತರಿಗೆ ಉತ್ತಮ ಆದಾಯದ ಒಂದು ಬೆಳೆಯು ಆಗಿದೆ. ಸೂಪರ್ ಮಾರ್ಕೆಟ್ ಗಳಲ್ಲಿ ಸಹ ಅಣಬೆಯನ್ನು ನೋಡಬಹುದು. ಅಣಬೆಯಿಂದ ವಿವಿಧ ಖಾದ್ಯಗಳನ್ನು ಸಹ ತಯಾರಿಸಲಾಗುತ್ತಿದೆ.