-ಖಾತೆ ಮರುಹಂಚಿಕೆ
ಬೆಂಗಳೂರು: ಖಾತೆ ಮರುಹಂಚಿಕೆ ಆದರೂ ಬಿಜೆಪಿಯಲ್ಲಿಮತ್ತೆ ಅಸಮಾಧಾನ ಮುಂದುವರಿದಿದೆ.
ಖಾತೆ ಮರು ಹಂಚಿಕೆ ರಾಜ್ಯ ಬಿಜೆಪಿಯಲ್ಲಿ ತಲ್ಲಣ ಸೃಷ್ಟಿಸಿದ್ದು ಅತೃಪ್ತರ ಜೊತೆಗಿನ ಸಿಎಂ ಬಿಎಸ್ ಯಡಿಯೂರಪ್ಪ ಮಾತುಕತೆ ಫಲಿಸಲಿಲ್ಲ. ಕೆ. ಸುಧಾಕರ್, ಜೆ.ಸಿ ಮಾಧುಸ್ವಾಮಿ ಹಾಗೂ ಆರ್. ಶಂಕರ್ ಅಸಮಾಧಾನ ಮುಂದುವರಿದಿದೆ.
ವೈದ್ಯಕೀಯ ಶಿಕ್ಷಣದ ಜೊತೆಗೆ ಹಜ್ ಹಾಗೂ ವಕ್ಫ್ ಇಲಾಖೆ ಕೊಟ್ಟರೂ ಜೆ.ಸಿ ಮಾಧುಸ್ವಾಮಿ ಸಣ್ಣ ನೀರಾವರಿ ಖಾತೆ ಕೈತಪ್ಪಿದ್ದಕ್ಕೆ ಅಸಮಾಧಾನಗೊಂಡಿದ್ದಾರೆ. ಇನ್ನು ಕೆ. ಸುಧಾಕರ್ ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಖಾತೆ ಒಬ್ಬರಿಗೆ ಕೊಡಿ ಎಂದು ಪಟ್ಟು ಹಿಡಿದಿದ್ದಾರೆ.
ಪೌರಾಡಳಿತ ಖಾತೆಯಿಂದ ತೃಪ್ತಿ ಹೊಂದಿದ್ದ ಆರ್. ಶಂಕರ್ ಅವರಿಂದ ಆ ಖಾತೆಯನ್ನು ವಾಪಸ್ ಪಡೆದು ಅವರಿಗೆ ತೋಟಗಾರಿಕೆ ಹಾಗೂ ರೇಷ್ಮೆ ಖಾತೆ ನೀಡಿದಕ್ಕಾಗಿ ಅಸಮಾಧಾನಗೊಂಡಿದ್ದಾರೆ. ಸರ್ಕಾರಿ ಕಾರನ್ನು
ಅತೃಪ್ತಿ ಹೊಂದಿರುವ ಸಚಿವರ ಜೊತೆಗೆ ಸಿಎಂ ಮತ್ತೊಂದು ಸುತ್ತಿನ ಮಾತುಕತೆ ನಡೆಸುವ ಸಾಧ್ಯತೆ ಇದೆ.