-ಬಾಳೆ ಬೆಳೆಗಾರರ ಆದಾಯ ದ್ವಿಗುಣ
-ಬಾಳೆಯಿಂದ ಬಟ್ಟೆ, ಔಷಧಿ ತಯಾರು ಯೋಜನೆ
ಕೊಯಂಬತ್ತೂರು : ಜಿಲ್ಲೆಯ ಬಹುತೇಕ ಪ್ರದೇಶಗಳಲ್ಲಿ ಬಾಳೆ ತೋಟಗಾರಿಕೆ ಹೆಚ್ಚಾಗಿರುವುದರಿಂದ, ಕೃಷಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ, ಸರ್ಕಾರ ಹೊಸ ವಿಶೇಷ ಯೋಜನೆ ಹಾಕಿಕೊಂಡಿದೆ. ಬಾಳೆನಾರು ಮತ್ತು ಕಾಂಡವು ಔಷಧಿ ಗುಣವನ್ನು ಹೊಂದಿದ್ದು, ಜವಳಿ ಕೂಡ ತಯಾರಿಸಬಹುದಾಗಿದೆ. ಈ ನಿಟ್ಟಿನಲ್ಲಿ 400 ಕೋಟಿ ರೂ.ಗಳ ಸಂಶೋಧನೆ ಯೋಜನೆಯನ್ನು ತಮಿಳುನಾಡು ಸರ್ಕಾರ ಖಾಸಗಿ ಸಂಸ್ಥೆಗೆ ವಹಿಸಲಾಗಿದೆ. ಎಂದು ಮುಖ್ಯಮಂತ್ರಿ ಕೆ ಪುಳನಿಸ್ವಾಮಿ ತಿಳಿಸಿದ್ದಾರೆ.
ಬಾಳೆ ಬೆಳೆ ಕಟಾವು ನಂತರ ಅದರ ಕಾಂಡ ಮತ್ತು ಒಣಗಿದ ಎಲೆಗಳಿಂದ ನಾರು ತಯಾರು ಮಾಡಬಹುದಾಗಿದೆ. ಬಾಳೆಯ ಕಾಂಡದಿಂದ ನಾರು ತಯಾರು ಮಾಡಿ ರಾಸಾಯನಿಕ ಮುಕ್ತ ಧೋತಿ ಮತ್ತು ಶರ್ಟುಗಳನ್ನು ತಯಾರು ಮಾಡಬಹುದು. ಗಿಡದ ಕಾಂಡ ಔಷಧಿ ಗುಣಗಳನ್ನು ಹೊಂದಿರುವುದರಿಂದ, ಕಾಂಡದಿಂದ ಔಷಧಿ ತಯಾರಿಕೆ ಯೋಜನೆಯನ್ನೂ ಸರ್ಕಾರ ಹಾಕಿಕೊಂಡಿದೆ.
ಈ ಬಗ್ಗೆ ಇಸ್ರೋ ನಿರ್ದೇಶಕ ಅನಂದ ದೊರೈ ಅವರು ಈಗಾಗಲೇ ವಿವರವಾದ ವರದಿ ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಒಮ್ಮೆ ಈ ಯೋಜನೆ ಯಶಸ್ವಿಯಾದರೆ, ಪ್ರಧಾನಿ ನರೇಂದ್ರ ಮೋದಿ ಅವರ ಕನಸು ನನಸಾಗಲಿದೆ ಎಂದು ಸಿಎಂ ವಿವರಿಸಿದ್ದಾರೆ.
ಪ್ರಾಯೋಜಕರು: