ತೀರ್ಥಹಳ್ಳಿಯಲ್ಲಿ ಸಂಭ್ರಮದ ಸ್ವಾತಂತ್ರ್ಯ ಹಬ್ಬ!
– ಎಲ್ಲೆಡೆ ಸ್ವಾತಂತ್ರ್ಯ ದಿನಾಚರಣೆಯ ರಂಗು
– ಬಿಸಿಲು ಜಾಸ್ತಿ ಆಗಿ ಕುಸಿದು ಬಿದ್ದ ಮಕ್ಕಳು!
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ ನಡೆಯಿತು.
ಹಳ್ಳಿ ಹಳ್ಳಿಯಲ್ಲೂ ತಿರಂಗಾ ಹಾರಿಸಲಾಗಿದೆ. ಜನ ದೇಶ ಭಕ್ತಿಯನ್ನು ಮೆರೆದಿದ್ದಾರೆ. ಸರ್ಕಾರಿ ಕಚೇರಿಗಳು, ಶಾಲಾ ಕಾಲೇಜುಗಳು, ಖಾಸಗಿ ಸಂಸ್ಥೆಗಳು ಸೇರಿ ಆಟೋ, ಬಸ್, ಕಾರು ನಿಲ್ದಾಣಗಳಲ್ಲಿ ಸ್ವಾತಂತ್ರ್ಯ ಸಂಭ್ರಮ ಕಂಡು ಬಂತು. ಮಕ್ಕಳು ಕೂಡ ಸಂಭ್ರಮದಿಂದ ಭಾಗಿಯಾದರು.
ತೀರ್ಥಹಳ್ಳಿ ತಾಲೂಕು ಆಡಳಿತ ಮತ್ತು ಮತ್ತು ರಾಷ್ಟ್ರೀಯ ಹಬ್ಬಗಳ ಸಮಿತಿಯಿಂದ ತೀರ್ಥಹಳ್ಳಿಯಲ್ಲಿ 78ನೇ ಸ್ವಾತಂತ್ರೋತ್ಸವನ್ನು ಸಂಭ್ರಮದಿಂದ ಆಚರಿಸಲಾಯಿತು.
ತೀರ್ಥಹಳ್ಳಿಯ ಯು.ಆರ್.ಅನಂತಮೂರ್ತಿ ಶಾಲೆಯ ಕ್ರೀಡಾಂಗಣದಲ್ಲಿ ನಡೆದ ಸ್ವಾತಂತ್ರೋತ್ಸವದಲ್ಲಿ ತೀರ್ಥಹಳ್ಳಿಯ ಎಲ್ಲಾ ಶಾಲಾ ಮಕ್ಕಳು ಭಾಗವಹಿಸಿದ್ದರು ಧ್ವಜಾರೋಹಣವನ್ನು ತಾಲೂಕು ದಂಡಾಧಿಕಾರಿ ಜಕ್ಕಣ್ಣ ಗೌಡರ್ ನೆರವೇರಿಸಿದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರದ ಶಾಸಕರಾದ ಆರಗ ಜ್ಞಾೇಂದ್ರ ವಹಿಸಿದ್ದರು.
ಧ್ವಜಾರೋಹಣದ ನಂತರ ಧ್ವಜ ವಂದನೆಯನ್ನು ಸಲ್ಲಿಸಲಾಯಿತು. ತೀರ್ಥಹಳ್ಳಿ ಪಟ್ಟಣದ ಎಲ್ಲಾ ಶಾಲೆಯ ಮಕ್ಕಳು ದೇಶಭಕ್ತಿ ಗೀತೆ,, ಮತ್ತು ನಾಡಗೀತೆ,ಹಾಗೂ ರೈತ ಗೀತೆಯನ್ನು, ಹಾಡಿದರು. ಇಬ್ಬರು ಮಕ್ಕಳು ಸ್ವಾತಂತ್ರ ಪಡೆದುಕೊಂಡ ಬಗ್ಗೆ ತುಂಬಾ ಅಚ್ಚು ಪಟ್ಟಾಗಿ ಮಾತನಾಡಿದರು. ದಂಡಾಧಿಕಾರಿ ಜಕ್ಕಣ್ಣ ಗೌಡರ್, ಶಾಸಕ ಅರಗ ಜ್ಞಾನೇಂದ್ರ, ತಾಲೂಕು ಕಾರ್ಯ ನಿರ್ವಹಣಾಧಿಕಾರಿ ಶೈಲಾ, ಶಿಕ್ಷಣ ಅಧಿಕಾರಿ ಗಣೇಶ್,ಸಚೀಂದ್ರ ಹೆಗ್ಗಡೆ, ಪೊಲೀಸ್ ಅಧಿಕಾರಿ ಡಿ.ವೈ ಎಸ್ಪಿ ಗಜಾನನ ವಾಮನಸುತಾರ, ಪೊಲೀಸ್ ಇನ್ಸ್ಪೆಕ್ಟರ್ ಅಶ್ವಥ್ ಗೌಡ, ಸಬ್ ಇನ್ಸ್ಪೆಕ್ಟರ್ ಶಿವನಗೌಡ, ಮತ್ತು ಅಧಿಕಾರಿಗಳು ಮತ್ತು ಸಾರ್ವಜನಿಕ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಬಿಸಿಲು ಜಾಸ್ತಿ ಆಗಿ ಕುಸಿದು ಬಿದ್ದ ಮಕ್ಕಳು!
ತೀರ್ಥಹಳ್ಳಿ: ಸ್ವಾತಂತ್ರ್ಯ ದಿನದ ಧ್ವಜಾರೋಹಣ ವೇಳೆ ವಿಪರೀತ ಬಿಸಿಲಿನ ತಾಪಕ್ಕೆ ಮಕ್ಕಳು ನಿತ್ರಾಣವಾಗಿ ಕುಸಿದುಬಿದ್ದ ಘಟನೆ ತೀರ್ಥಹಳ್ಳಿಯಲ್ಲಿ ನಡೆದಿದೆ.
ಯು ಆರ್ ಅನಂತಮೂರ್ತಿ ಪ್ರೌಢಶಾಲೆಯ ಕ್ರೀಡಾಂಗಣದಲ್ಲಿ ತಾಲೂಕು ದಂಡಾಧಿಕಾರಿಗಳ ಭಾಷಣದ ನಂತರದಲ್ಲಿ ಮಕ್ಕಳು ಕುಸಿದು ಬಿದ್ದಿದ್ದಾರೆ. ತಹಸೀಲ್ದಾರ್ ಜಕ್ಕಣ್ಣ ಗೌಡರ್ ರವರು ಸ್ವಾತಂತ್ರ್ಯ ದಿನಾಚರಣೆ ಕುರಿತು ಭಾಷಣ ಮಾಡಿ ಮುಗಿಸಿದ್ದರು. ಇದಕ್ಕೂ ಮೊದಲು ಧ್ವಜಾರೋಹಣ ನಂತರ ಮಕ್ಕಳ ಪಥಸಂಚಲನ ಹೀಗೆ ತುಂಬ ಹೊತ್ತು ಬಿಸಿಲಿನಲ್ಲೇ ನಿಂತಿದ್ದ ಮಕ್ಕಳು ಸುಸ್ತಾಗಿ ಕುಸಿದು ಬಿದ್ದಿದ್ದಾರೆ.
ಕುಡಿಯಲು ನೀರಿಲ್ಲ… ಪಾಚಿ ತೊಳೆಯಲಿಲ್ಲ!
ಸ್ವಾತಂತ್ರ್ಯ ಕಾರ್ಯಕ್ರಮದ ವೇಳೆ ಕುಡಿಯಲು ನೀರಿಲ್ಲದೆ ಮಕ್ಕಳು, ಸಾರ್ವಜನಿಕರು ನಿತ್ರಾಣರಾದ ಘಟನೆ ತೀರ್ಥಹಳ್ಳಿಯಲ್ಲಿ ನಡೆದಿದೆ. ಅನಂತಮೂರ್ತಿ ಪ್ರೌಢ ಶಾಲೆ ಮದಾನದಲ್ಲಿ ಈ ಘಟನೆ ನಡೆದಿದೆ. ಇನ್ನು ಧ್ವಜದ ಕಟ್ಟೆ ತೊಳೆಯದೆ ಧ್ವಜರೋಹಣ ಮಾಡಿರುವ ಆರೋಪ ಕೂಡ ಕೇಳಿ ಬಂದಿದೆ.