ರೈತರ ಜಾಗ ಒತ್ತುವರಿ: ಆ. 17ಕ್ಕೆ ಶೃಂಗೇರಿ ಕ್ಷೇತ್ರ ಬಂದ್!
– ಹಲವು ಸಂಘಟನೆಗಳ ಸಾಥ್: ಏನಿರುತ್ತೆ..? ಏನಿರಲ್ಲ?
– ಕೊಪ್ಪ, ಶೃಂಗೇರಿ, ಎನ್. ಆರ್. ಪುರ 3 ತಾಲೂಕು ಬಂದ್
– ತುರ್ತು ಸೇವೆ ಹೊರತುಪಡಿಸಿ ಉಳಿದ ಎಲ್ಲವು ಸಂಪೂರ್ಣ ಬಂದ್
NAMMUR EXPRESS NEWS
ಶೃಂಗೇರಿ: ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿ ಶೃಂಗೇರಿ ಕ್ಷೇತ್ರ ರೈತರ ಜಾಗ ಒತ್ತುವರಿ ವಿರೋಧಿಸಿ ಕರೆ ಕೊಟ್ಟಿರುವ ಶೃಂಗೇರಿ ಬಂದ್ ಭಾರೀ ಜನ ಸ್ಪಂದನೆ ಸಿಗುತ್ತಿದೆ.
ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗೂ ಹೋರಾಟ ವ್ಯಾಪಿಸುತ್ತಿದ್ದು, ಶೃಂಗೇರಿ ಕ್ಷೇತ್ರದಲ್ಲಿ ಜನ ಸಿದ್ಧತೆ ನಡೆಸಿದ್ದಾರೆ.
ತುರ್ತು ಸೇವೆಗಳನ್ನು ಹೊರತುಪಡಿಸಿ ಉಳಿದ ಎಲ್ಲವು ಸಂಪೂರ್ಣ ಬಂದ್ ಆಗಿರುತ್ತದೆ. ಶೃಂಗೇರಿ, ಕೊಪ್ಪ, ನರಸಿಂಹರಾಜಪುರ ತಾಲ್ಲೂಕು ಕೇಂದ್ರಗಳು, ಖಾಂಡ್ಯ ಹೋಬಳಿ ಹಾಗೂ 3 ತಾಲೂಕಿನ ಎಲ್ಲಾ ಹೋಬಳಿ ಕೇಂದ್ರಗಳೂ ಬಂದ್ ಆಗಿರಲಿವೆ.
ಏನಿರುತ್ತೆ?
ಆಸ್ಪತ್ರೆ
ಮೆಡಿಕಲ್ ಸ್ಟೋರ್
ಪೇಪರ್ – ಹಾಲು
ಅಂಬುಲೆನ್ಸ್
ಪೋಸ್ಟ್ ಆಫೀಸ್
ಏನಿರಲ್ಲ?
ಅಂಗಡಿ ಮುಂಟ್ಟುಗಳು
ಬಸ್ ಸೇವೆಗಳು
ಶಾಲಾ ಖಾಸಗಿ ವಾಹನಗಳು
ಆಟೋ ಹಾಗೂ ಟ್ಯಾಕ್ಸಿ
ಲಾರಿ, ಟೆಂಪೋ ಇತ್ಯಾದಿ
ಗೂಡ್ಸ್ ವಾಹನಗಳು
ಹೋಟೆಲ್
ಚಿತ್ರಮಂದಿರ
ಜಿಮ್
ಶಾಲಾ ಕಾಲೇಜುಗಳು
ಲಾಡ್ಜ್
ಬೀದಿ ಬದಿ ವ್ಯಾಪಾರ