ತೀರ್ಥಹಳ್ಳಿ ಪಟ್ಟಣ ಪಂಚಾಯತ್ ನೂತನ ಸಾರಥಿ ಯಾರು?
– ನಡೆಯುತ್ತಾ ಭಾರೀ ರಾಜಕೀಯ ಗೇಮ್ ಪ್ಲಾನ್?
– ಆ. 27ಕ್ಕೆ ತೀರ್ಥಹಳ್ಳಿ ಪ.ಪಂ. ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ
– ಪ.ಪಂ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗ, ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಮಹಿಳೆಗೆ ಮೀಸಲು
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣ ಪಂಚಾಯ್ತಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಚುನಾವಣೆಗೆ ಆಗಸ್ಟ್ 27ರಂದು ದಿನಾಂಕ ನಿಗದಿಯಾಗಿದೆ.
ಆ. 27ಕ್ಕೆ ಬೆಳಿಗ್ಗೆ 11 ರಿಂದ 12 ನಾಮಪತ್ರ ಸಲ್ಲಿಕೆ, 12-30ರಿಂದ 12-45 ನಾಮಪತ್ರ ಪರಿಶೀಲನೆ, 12-45ರಿಂದ 1 -00 ವರೆಗೆ ನಾಮಪತ್ರ ವಾಪಾಸ್ ಪಡೆಯಲು ಅವಕಾಶ. ನಂತರ 1 ಗಂಟೆಗೆ ಅಗತ್ಯ ಬಿದ್ದಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಲಿದೆ.
ಮೀಸಲಾತಿ ಏನೇನಿದೆ?
ಪ.ಪಂ.ನ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ, ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಮಹಿಳೆಗೆ ಮೀಸಲಾಗಿದೆ. ಉಪಾಧ್ಯಕ್ಷ ಸ್ಥಾನಕ್ಕೆ ಗೀತಾ ರಮೇಶ್, ಶಬನಮ್ ಹೆಸರು ಮುಂಚೂಣಿಯಲ್ಲಿದೆ.
ಅಧ್ಯಕ್ಷರ ಸ್ಥಾನಕ್ಕೆ ಯಾರು ಯಾರು ಆಕಾಂಕ್ಷಿಗಳು?
ತೀರ್ಥಹಳ್ಳಿ ಪಟ್ಟಣ ಪಂಚಾಯತ್ ಅಧ್ಯಕ್ಷರ ಸ್ಥಾನಕ್ಕೆ ಜಯಪ್ರಕಾಶ್ ಶೆಟ್ಟಿ, ಗಣಪತಿ, ರಹಮತುಲ್ಲಾ ಅಸಾದಿ, ರತ್ನಾಕರ್ ಶೆಟ್ಟಿ ಹೆಸರು ಮುಂಚೂಣಿಯಲ್ಲಿದೆ. ಮಹಿಳಾ ಅಭ್ಯರ್ಥಿ ಮಂಜುಳಾ ನಾಗೇಂದ್ರ ಆಕಾಂಕ್ಷಿಯಾಗಿದ್ದಾರೆ.
ಬಿಜೆಪಿ ಮ್ಯಾಜಿಕ್ ನಡೆಯುತ್ತಾ?
6 ಪಟ್ಟಣ ಪಂಚಾಯತ್ ಸದಸ್ಯರಿದ್ದು, 1 ಎಂಪಿ, 1ಎಂಎಲ್ಎ ಮತ ಸೇರಿ 8 ಸ್ಥಾನ ಬಿಜೆಪಿ ಕೈಯಲ್ಲಿದೆ. ಇನ್ನು ಒಂದು ಸ್ಥಾನ ಅವಶ್ಯಕತೆ ಇದೆ. ಅಚ್ಚರಿ ಬೆಳೆವಣಿಗೆಯಲ್ಲಿ ಕುರ್ಚಿ ಬಿಜೆಪಿ ಪಾಲಾದರೂ ಅಚ್ಚರಿ ಇಲ್ಲ.