ಹೆಬ್ರಿ ಗ್ರಾಮಕ್ಕೆ ಸ್ಕ್ಯಾನಿಂಗ್ ಸೆಂಟರ್ ಇಲ್ಲ!
– ಸ್ಕ್ಯಾನಿಂಗ್ ಸೆಂಟರ್ ಇಲ್ಲದೆ ರೋಗಿಗಳ ಪರದಾಟ
– ಹೆಬ್ರಿ ಗ್ರಾಮಕ್ಕೆ ಒಂದು ಸ್ಕ್ಯಾನಿಂಗ್ ಸೆಂಟರ್ ಬೇಕು: ಅಭಿಯಾನ
NAMMUR EXPRESS NEWS
ಹೆಬ್ರಿ: ಹೆಬ್ರಿಯಲ್ಲಿ ತಾಲೂಕು ಇದ್ದರೂ ಸ್ಕ್ಯಾನಿಂಗ್ ಸೆಂಟರ್ ಕೊರತೆ ಎದ್ದು ಕಾಣುತ್ತಿದೆ. ಹೆಬ್ರಿ ಗ್ರಾಮದಲ್ಲಿ 10 ಕ್ಕೂ ಅಧಿಕ ಖಾಸಗಿ ಕ್ಲಿನಿಕ್ಗಳು, ಲ್ಯಾಬ್ಗಳು, ಸಮುದಾಯ ಆರೋಗ್ಯ ಕೇಂದ್ರ, 1 ಖಾಸಗಿ ಆಸ್ಪತ್ರೆಗಳು ಹೆಬ್ರಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಇಷ್ಟು ವ್ಯವಸ್ಥೆ ಇದ್ದರೂ ಸಹ ರೋಗಿಗಳಿಗೆ ವೈದ್ಯರು ಒಂದು ಸ್ಕ್ಯಾನಿಂಗ್ ಮಾಡಲಿಕ್ಕೆ ಹೇಳಿದರೆ ರೋಗಿಗಳು ಹೆಬ್ರಿಯಿಂದ ಕಾರ್ಕಳಕ್ಕೆ ಅಥವಾ ಬ್ರಹ್ಮಾವರ, ಉಡುಪಿ, ಮಣಿಪಾಲ ಆಸ್ಪತ್ರೆಗೆ ಹೋಗಿ ಸ್ಕ್ಯಾನಿಂಗ್ ಮಾಡಿಕೊಂಡು ಬರಬೇಕಾಗುತ್ತದೆ.
ಹೆಬ್ರಿ, ಚಾರಾ, ಶಿವಪುರ, ಕುಚ್ಚೂರು, ಬೇಳಂಜೆ, ಸೋಮೇಶ್ವರ, ಸೀತಾದಿ, ಮದ್ರಾಡಿ, ಇಲ್ಲಿ ಬೇರೆ ಬೇರೆ ಗ್ರಾಮಗಳಿಂದ ರೋಗಿಗಳು ಚಿಕಿತ್ಸೆಗಳಿಗಾಗಿ ಬಂದರೆ ಅವರು ಬೇರೆ ಊರಿಗೆ ಪ್ರಯಾಣಿಸಬೇಕಾದ ಪರಿಸ್ಥಿತಿ ಉಂಟಾಗುತ್ತದೆ. ಹೆಬ್ರಿ ಗ್ರಾಮದಲ್ಲಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಜನರು ವಾಸವಾಗಿರುತ್ತಾರೆ. ಹೆಬ್ರಿ ಗ್ರಾಮವು ಬೇರೆ ಎಲ್ಲಾ ಅಗತ್ಯತೆಗಳು ಜನರಿಗೆ ಸಿಕ್ಕಿದರೂ ಸಹ ಆರೋಗ್ಯದ ವಿಚಾರದಲ್ಲಿ ನೋಡಿದಾಗ ಇಲ್ಲಿ ಸ್ಕ್ಯಾನಿಂಗ್ ಮೇಷಿನ್ ಮಾತ್ರ ಜನರಿಗೆ ಸರಿಯಾಗಿ ಸಿಗುತ್ತಿಲ್ಲ. ಬೇರೆ ಊರಿಗೆ ಹೋಗಬೇಕಾದರೆ ಸಮಯ ಮತ್ತು ಹಣ ಎಲ್ಲಾ ವ್ಯರ್ಥ ಆಗುತ್ತದೆ.
ಹೆಬ್ರಿ ಗ್ರಾಮದ ಮತ್ತು ಆಸುಪಾಸಿನ ಗ್ರಾಮದ ಎಲ್ಲರಿಗೂ ಕೂಡ ಅದರಲ್ಲೂ ಬಾಣಂತಿಯರ ಪರೀಕ್ಷೆಗಳಿಗೆ ಹೋದಾಗ ವೈದ್ಯರು ಸ್ಕ್ಯಾನಿಂಗ್ ಪರೀಕ್ಷೆ ಹೇಳಿದರೆ ಗರ್ಭಿಣಿ ಮಹಿಳೆಯರು
ಉಡುಪಿ, ಕಾರ್ಕಳ, ಮಣಿಪಾಲ ಆಸ್ಪತ್ರೆಗೆ ತೆರಳಿ ಸ್ಕ್ಯಾನಿಂಗ್
ಮಾಡಿಕೊಳ್ಳಬೇಕಾಗುತ್ತದೆ. ಬೇರೆ ಆಸ್ಪತ್ರೆಗಳಿಗೆ ಹೋಗುವಾಗ ಕೆಲವು ಊರುಗಳಲ್ಲಿ ರಸ್ತೆಗಳ ಹೊಂಡಗುಂಡಿಯಲ್ಲಿ ಪ್ರಯಾಣಿಸುವಾಗ ರೋಗಿಗಳಿಗೆ ಒಂದು ಖಾಯಿಲೆಯ ಜೊತೆಗೆ ಇನ್ನೊಂದು ರೋಗ ಅದವೇ ಬೆನ್ನು ಮತ್ತು ಕೈಕಾಲು ನೋವು ಉಂಟಾಗುತ್ತದೆ. ದಯಮಾಡಿ ಜನಪ್ರತಿನಿಧಿಗಳು, ಸಚಿವರು ಆಗಲಿ ಹೆಬ್ರಿ ಗ್ರಾಮಕ್ಕೆ, ಆರೋಗ್ಯಕ್ಕೆ
ಅತಿ ಅಗತ್ಯವಾದ ಸ್ಕ್ಯಾನಿಂಗ್ ಸೆಂಟರ್, ಡಯಾಲಿಸಿಸ್, ಸುಸಜ್ಜಿತ ಆಸ್ಪತ್ರೆಯನ್ನು ಹೆಬ್ರಿ ಗ್ರಾಮದ ಜನರಿಗೆ ಅನುಕೂಲ ಮಾಡಿಸಬೇಕು ಮತ್ತು ಹೆಬ್ರಿ ಗ್ರಾಮಕ್ಕೆ ಒಂದು ಸ್ಕ್ಯಾನಿಂಗ್ ಸೆಂಟರ್ ಅಗತ್ಯತೆ ಎಂದು ಸಾರ್ವಜನಿಕರ ಬೇಡಿಕೆಯಾಗಿರುತ್ತದೆ.
ವರದಿ : ರಕ್ಷಿತ್ ಕುಮಾರ ಹೆಬ್ರಿ