ತೀರ್ಥಹಳ್ಳಿಯಲ್ಲಿ ಹೆಚ್ಚಿದ ಅಪಘಾತ!
– ಬಾಳೆಬೈಲು ಬಳಿ ಕಾರು,ಬೈಕ್ ನಡುವೆ ಡಿಕ್ಕಿ: ಓರ್ವನಿಗೆ ಗಾಯ
– ಕುಡುಮಲ್ಲಿಗೆ ಬಳಿ ಕೋಳಿ ಗೂಡ್ಸ್ ಪಲ್ಟಿ
– ಬಿದರಗೋಡು ಬಳಿ ಕುಡಿತದ ಚಾಲನೆಗೆ ಇಬ್ಬರು ಬಲಿ
– ಕುಡಿದು ವಾಹನ ಚಾಲನೆಗೆ ದಂಡ ಶುರು
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಲ್ಲಿ ಅಪಘಾತದ ಸಂಖ್ಯೆ ದಿನೇ ದಿನೇ ಹೆಚ್ಚಾಗಿದೆ. ಈ ತಿಂಗಳು ಅಪಘಾತಕ್ಕೆ ತಾಲೂಕಿನಲ್ಲಿ 10 ಮಂದಿ ಬಲಿಯಾಗಿದ್ದಾರೆ. ಈ ನಡುವೆ ಕಾರು ಹಾಗೂ ಬೈಕ್ ನಡುವೆ ಡಿಕ್ಕಿಯಾಗಿ ಬೈಕ್ ಚಾಲಕನಿಗೆ ಗಾಯವಾಗಿರುವ ಘಟನೆ ಪಟ್ಟಣದ ಬಾಳೆಬೈಲು ಬಳಿ ಭಾನುವಾರ ನಡೆದಿದೆ.
ಭಾನುವಾರ ಮಧ್ಯಾಹ್ನ ತೀರ್ಥಹಳ್ಳಿಯಿಂದ ಉಡುಪಿಗೆ ಹೋಗುತ್ತಿದ್ದ ಕಾರೊಂದಕ್ಕೆ ಬೈಕ್ ಡಿಕ್ಕಿಯಾಗಿದೆ. ಬಾಳೇಬೈಲಿನ ಗುಡ್ ಲಕ್ ಗ್ರಾನೈಟ್ ಬಳಿ ಈ ಅಪಘಾತ ಸಂಭವಿಸಿದೆ. ಕಾರಿನ ಮುಂಭಾಗ ಸ್ವಲ್ಪ ನುಜ್ಜುಗುಜ್ಜಾಗಿದ್ದು ಬೈಕ್ ಚಾಲಕನಿಗೆ ಗಾಯವಾಗಿದೆ.
ಕುಡುಮಲ್ಲಿಗೆ ಬಳಿ ಕೋಳಿ ಗೂಡ್ಸ್ ಪಲ್ಟಿ
ತೀರ್ಥಹಳ್ಳಿ – ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿಯ ಕುಡುಮಲ್ಲಿಗೆ ತಿರುವಿನ ಬಳಿ ಕೋಳಿಗಳನ್ನು ತುಂಬಿದ್ದ ಗಾಡಿಯೊಂದು ಪಲ್ಟಿಯಾಗಿ ಗದ್ದೆಗೆ ಹೋಗಿ ಬಿದ್ದಿದೆ.
ಶನಿವಾರ ತಡ ರಾತ್ರಿ ಶಿವಮೊಗ್ಗ ಕಡೆಯಿಂದ ತೀರ್ಥಹಳ್ಳಿ ಕಡೆಗೆ ಕೋಳಿಗಳನ್ನು ತುಂಬಿಕೊಂಡು ಬರುತಿದ್ದ ಗೂಡ್ಸ್ ಕುಡುಮಲ್ಲಿಗೆ ಕ್ರಾಸ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಗದ್ದೆಗೆ ಹೋಗಿ ಬಿದ್ದಿದೆ.ನಿದ್ರೆ ಮಂಪರಿನಿಂದ ಈ ಅಪಘಾತ ಸಂಭವಿಸಿದೆ.
ಕುಡಿದು ವಾಹನ ಚಾಲನೆಗೆ ದಂಡ ಶುರು
ಆಗುಂಬೆ ಬಳಿಯ ಬಿದುರುಗೋಡಿನಲ್ಲಿ ಇತ್ತೀಚಿಗೆ ಕುಡಿದ ಮತ್ತಿನಲ್ಲಿಇದ್ದ ಪಿಕಪ್ ಚಾಲಕ ಬೈಕಿಗೆ ಡಿಕ್ಕಿಹೊಡೆದು ಬೈಕ್ ಸವಾರ ಹಾಗೂ ಪಿಕಪ್ಅಲ್ಲಿ ಇದ್ದ ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನಪ್ಪಿದ್ದರು. ಓರ್ವ ಗಂಭೀರ ಗಾಯ ಗೊಂಡು ಆಸ್ಪತ್ರೆ ದಾಖಲಾಗಿದ್ದ ಕುಡಿತದ ಮತ್ತಿನಲ್ಲಿಂದ ಚಾಲಕ ಪರಾರಿಯಾಗಿದ್ದ. ಇದೀಗ ಆಗುಂಬೆ ಪೊಲೀಸರು ಕುಡಿದು ವಾಹನ ಚಲಾಯಿಸುವವರ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ.