ತೀರ್ಥಹಳ್ಳಿಯಲ್ಲಿ ಸರ್ಕಾರಕ್ಕೆ ರೈತರ ಎಚ್ಚರಿಕೆ!
– ಒತ್ತುವರಿಯ ತೆರವು ವಿರೋಧಿಸಿ ಬೃಹತ್ ಪ್ರತಿಭಟನೆ
– ಪಕ್ಷ ಭೇದ ಮರೆತು ಎಲ್ಲಾ ಪಕ್ಷದ ಪ್ರಮುಖರು ಹಾಜರ್
NAMMUR EXPRESS NEWS
ತೀರ್ಥಹಳ್ಳಿ : ಕರ್ನಾಟಕ ರಾಜ್ಯ ರೈತ ಸಂಘ ತೀರ್ಥಹಳ್ಳಿ, ಹಾಗೂ ದಲಿತ ಸಂಘರ್ಷ ಕ್ರಿಯಾ ಸಮಿತಿ, ಕರ್ನಾಟಕ ರಕ್ಷಣಾ ವೇದಿಕೆ, ಮತ್ತು ಸಮಾನ ಮನಸ್ಕರ ಸಂಘಟನೆ ನೇತೃತ್ವದಲ್ಲಿ ತೀರ್ಥಹಳ್ಳಿಯಲ್ಲಿ ಒತ್ತುವರಿಯ ತೆರವು ವಿರೋಧಿಸಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಈ ಮೂಲಕ ಸರ್ಕಾರಕ್ಕೆ ರೈತರು ಎಚ್ಚರಿಕೆ ನೀಡಿದ್ದಾರೆ.
ತೀರ್ಥಹಳ್ಳಿಯ ಕೃಷಿ ಮಾರುಕಟ್ಟೆಯ ಮುಂಭಾಗದಿಂದ ರೈತರ ಪ್ರತಿಭಟನೆ ಹೋರಾಟ , ಪಟ್ಟಣದ ಮುಖ್ಯ ಬಸ್ ನಿಲ್ದಾಣ ಅಲ್ಲಿಂದ ತಾಲೂಕ್ ಆಫೀಸ್ ಆವರಣ ತಲುಪಿ ಪ್ರತಿಭಟನಾ ಸಭೆಯನ್ನು ಮಾಡಲಾಯಿತು. ಈ ಸಭೆಯನ್ನ ಉದ್ದೇಶಿಸಿ ಪ್ರಾಸ್ತಾವಿಕ ನುಡಿ ಆಡಿದ ಪತ್ರಕರ್ತ ಶಿವಾನಂದ ಕರ್ಕಿ, ಜನಸಾಮಾನ್ಯರು ಅರಣ್ಯ ಪ್ರದೇಶದಲ್ಲಿ ಇರಬಾರದು ಎಂದು ಸರ್ಕಾರ ತಿಳಿಸುತ್ತದೆ. ಆದರೆ ಮೊದಲು ಯಾಕೆ ಅರಣ್ಯ ಪ್ರದೇಶದಲ್ಲಿ ನಮಗೆ ಅವಕಾಶವ್ನು ೀಡಿದ್ದರು, ರೈತರು ಸಾಕಷ್ಟು ಪರಿಸರವನ್ನ ನಾಶ ಮಾಡಿದ್ದಾರೆ ಎಂಬ ಸುದ್ದಿಗಳು ಎಲ್ಲಾ ಕಡೆ ಹರಿದಾಡುತ್ತಿದೆ. ಇತ್ತೀಚಿನ ದಿನಗಳಲ್ಲಿ ರೈತರು ಒತ್ತುವರಿ ಮಾಡಿ ಜಮೀನು ಮಾಡಿರೋದ್ರಿಂದ ಯಾವುದೇ ಸಮಸ್ಯೆ ಇಲ್ಲ ಅದರ ಬದಲು ಮಹಾನಗರದಲ್ಲಿ ಉಂಟಾಗುವ ಹೊಗೆ ತಾಪಮಾನದಿಂದ ಈ ರೀತಿಯ ಸಮಸ್ಯೆಗಳು ಹೆಚ್ಚಾಗುತ್ತಾ ಇದೆ. ಬೇರೆ ಬೇರೆ ರೀತಿಯ ಅಭಿವೃದ್ಧಿಗಳು ಕೈಗಾರಿಕೆಗಳು ಹೊಗೆಯನ್ನ ಹೆಚ್ಚಳ ಮಾಡಿ ಇದರಿಂದ ತಾಪಮಾನ ಹೆಚ್ಚಳವಾಗುವುದಕ್ಕೆ ಕಾರಣವಾಗುತ್ತಿದೆ. ಜಾಗತಿಕ ತಾಪಮಾನಗಳು ಹೆಚ್ಚಳವಾಗಿರುವುದರಿಂದ ನಮ್ಮ ಪರಿಸರದಲ್ಲಿ ಮಳೆ ಸರಿಯಾಗಿ ಆಗದೆ ಇರುವುದರಿಂದ ಅನಾಹುತಗಳು ಸಂಭವಿಸುತ್ತಾ ಇದೆ ಎಂದರು.
ಕರ್ನಾಟಕ ರಕ್ಷಣಾ ವೇದಿಕೆ ನಾಯಕ ವೆಂಕಟೇಶ ಹೆಗಡೆ ಮಾತನಾಡಿ, ಇದು ಒಬ್ಬರ ಸಮಸ್ಯೆಯಲ್ಲ, ತಾಲೂಕಿನಲ್ಲಿರುವ ಪ್ರತಿಯೊಬ್ಬರ ಸಮಸ್ಯೆ ಕೂಡ ಹೌದು. ಈಗಾಗಲೇ ಚಿಕ್ಕಮಂಗಳೂರು, ಕೊಪ್ಪ ಈ ಭಾಗಗಳಲ್ಲಿ ಒತ್ತುವರಿಯ ತೆರುವಿನ ಕೆಲಸ ನಡೆದಿದೆ. ಹಾಗೆಯೇ ತೀರ್ಥಹಳ್ಳಿ ಕೆಲವು ಕಡೆ ಕೂಡ ಒತ್ತುವರಿಯ ತೆರವಿನ ಕೆಲಸ ನಡೆದಿದೆ. ಆದರೆ ಸರ್ಕಾರದ ಈ ಆದೇಶ ಮತ್ತೊಮ್ಮೆ ಪರಿಶೀಲನೆ ಮಾಡಬೇಕು ಎಂಬುದು ನಮ್ಮ ಆಶಯವಾಗಿದೆ ಎಂದು ತಿಳಿಸಿದ್ದಾರೆ.
ಹೋರಾಟಗಾರ ನೆಂಪೆ ದೇವರಾಜ್ ಮಾತನಾಡಿ, ಒತ್ತುವರಿ ಸಮಸ್ಯೆ ಎಂಬುದು ಪ್ರತಿಯೊಬ್ಬ ರೈತನಿಗೂ ಕೂಡ ಸಂಕಷ್ಟವಾಗಿದೆ. ರೈತನಾದವನು ಮತ್ತು ಅವರ ಕುಟುಂಬ ಒಂದು ಭೂಮಿಯನ್ನು ಉಳುಮೆ ಮಾಡಿ ಬೀಜವನ್ನ ಬಿತ್ತಿ ಅದು ಒಂದು ಪಸಲು ಕೊಡುವ ಮರವಾಗಿ ಬೆಳೆದಿದೆ ಈಗ ಅದನ್ನ ತ್ತುವರಿ ಎಂದು ಹೇಳಿದರೆ, ಅನೇಕ ಜನ ರೈತರು ಕಣ್ಣೀರಿನಲ್ಲಿ ಕೈ ತೊಳೆಯುವ ಪರಿಸ್ಥಿತಿ ಎದುರಾಗಿದೆ. ನಿಜವಾದ ಭಯೋತ್ಪಾದಕರು ಅರಣ್ಯ ಅಧಿಕಾರಿಗಳಾಗಿದ್ದಾರೆ ಹೊರೆತು ರೈತರ ಆಗಿಲ್ಲ ಎಂದರು.
ಬಿಜೆಪಿ ನಾಯಕ ಚಂದವಳ್ಳಿ ಸೋಮಶೇಖರ್, ರೈತರು ಕಷ್ಟಪಟ್ಟು ತಮ್ಮದೇ ಆದ ಜಮೀನನ್ನ ಮಾಡಿಕೊಂಡಿದ್ದಾರೆ ಆದರೆ ಈಗ ಅವರು ಭಯಪಡುವಂಥ ಪರಿಸ್ಥಿತಿ ಎದುರಾಗಿದೆ.. ಶಿರೂರು ಹಾಗೂ ಕೇರಳದಲ್ಲಿ ಉಂಟಾಗಿರುವ ಪರಿಸ್ಥಿತಿ ಏನು ಎಂದರೆ ಇರುವಂತಹ ಗುಡ್ಡಗಳನ್ನ ನಾಶ ಮಾಡಿ ರಸ್ತೆಯನ್ನು ಮಾಡಿದ್ದಾರೆ ಆದ್ದರಿಂದ ಇಡೀ ಊರಿಗೆ ಊರೇ ನಾಶವಾಗಿದೆ ಎಂದರು.
ರೈತ ಸಂಘದ ತಾಲೂಕು ಅಧ್ಯಕ್ಷರು ಕಂಬ್ಳಿಗೆರೆ ರಾಜೇಂದ್ರ ಮಾತನಾಡಿ, ಅನೇಕ ಜನರು ಈ ಹೋರಾಟದಲ್ಲಿ ಭಾಗವಹಿಸಿದ್ದರು. ಪ್ರತಿಯೊಬ್ಬ ರೈತರು ಕೂಡ ತಮ್ಮ, ಜಮೀನು ಮನೆ ಉಳಿಸಿಕೊಳ್ಳಲು ಹೋರಾಟ ಮಾಡಬೇಕು ಎಂದರು.
ರೈತರ ಮೇಲೆ ದೌರ್ಜನ್ಯವಾಗುತ್ತಿರುವುದನ್ನು ಪ್ರಶ್ನಿಸಿ ಶಾಂತವಾದ ಪ್ರತಿಭಟನೆಯನ್ನು ಮಾಡಿದ್ದೇವೆ, ಇದೇ ರೀತಿ ರೈತರ ಮೇಲೆ ದೌರ್ಜನ್ಯವಾದರೆ ಮುಂದಿನ ದಿನ ಈ ಪ್ರತಿಭಟನೆ ಶಾಂತಿಯುತವಾಗಿರುವುದಿಲ್ಲ. ಹಳ್ಳಿ ಹಳ್ಳಿಯಿಂದಲೂ ರೈತರು ಬಂದು ಸೇರಿ, ಉಗ್ರ ಪ್ರತಿಭಟನೆ, ಮತ್ತೆ ಮುಂದಾಗುವ ಅನಾಹುತಕ್ಕೆ ಇದಕ್ಕೆ ಸಂಬಂಧಪಟ್ಟವರೇ ಹೊಣೆಯಾಗುತ್ತಾರೆ ಎಂದು ರೈತರ ಮುಖಂಡರು ಎಚ್ಚರಿಕೆಯ ಕರೆಗಂಟೆಯನ್ನು ನೀಡಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಬಳಿಕ ರೈತ ಮುಖಂಡರು ಹಾಗೂ ವಿವಿಧ ಸಂಘ ಸಂಸ್ಥೆಯ ಮುಖ್ಯಸ್ಥರು ರಾಜ್ಯಪಾಲರಿಗೆ ಮನವಿ ಪತ್ರವನ್ನು ತಾಲೂಕು ದಂಡಾಧಿಕಾರಿ ಮೂಲಕ ನೀಡಿದರು. ಕರವೇ ಸುರೇಂದ್ರ, ಕೂಡ್ಲು ವೆಂಕಟೇಶ್, ಹೊರಬೈಲ್ ರಾಮಕೃಷ್ಣ, ಕಿರಣ್ ಪ್ರಭಾಕರ್ ಅಭಿಲಾಷ್ ಸೌಳಿ, ,,ಕೃಷ್ಣಪ್ಪ, ಹಾಗೂ ರೈತ ಮುಖಂಡರು ಮತ್ತು ಕುಕ್ಕೆ ಪ್ರಶಾಂತ್, ಚಂದವಳ್ಳಿ ಸೋಮಶೇಖರ್, ಡಾಕ್ಟರ್ ಸುಂದರೇಶ್, ಹಾಗೂ ಪ್ರಮುಖರು ಉಪಸ್ಥಿತರಿದ್ದರು. ಈ ರೈತ ಪ್ರತಿಭಟನೆಯಲ್ಲಿ ಪಕ್ಷೇದ ಮರೆತು ಎಲ್ಲ ಪ್ಷದ ಮುಖಂಡರುಗಳು ಹಾಗೂ ಕೆಲ ಕಾರ್ಯಕರ್ತರು ಭಾಗಿಯಾಗಿದ್ದರು.