ಚಿತ್ರದುರ್ಗದಲ್ಲಿ ಭಾರೀ ಮಳೆಗೆ ಜನ ಜೀವನ ಅಸ್ತವ್ಯಸ್ತ!
– ಹೊಳಲ್ಕೆರೆ: ವಿದ್ಯಾರ್ಥಿಗಳು ನಾಪತ್ತೆ: ಬೆಂಗಳೂರಲ್ಲಿ ಪತ್ತೆ
– ಹೊಸದುರ್ಗ: ಬೈಕ್ ಕಳ್ಳನ ಬಂಧನ: ಮೂರು ಬೈಕ್ ವಶ
NAMMUR EXPRESS NEWS
ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯಲ್ಲಿ ಭಾರೀ ಮಳೆ ಜನಜೀವನವನ್ನು ಸಂಪೂರ್ಣ ಅಸ್ತವ್ಯಸ್ತ ಮಾಡಿದೆ.
ಚಿತ್ರದುರ್ಗ, ಚಳ್ಳಕೆರೆ, ಹೊಸದುರ್ಗ ತಾಲೂಕು ಸೇರಿ ಎಲ್ಲೆಡೆ ಭಾರೀ ಮಳೆಯಾಗಿದೆ. ಕೆರೆ ಕಟ್ಟೆಗಳು ತುಂಬಿವೆ.
ಚಳ್ಳಕೆರೆ ನಗರಕ್ಕೆ ವರುಣಾಘಾತವಾಗಿದ್ದು, ನಗರದ ತಗ್ಗು ಪ್ರದೇಶದ ನಿವಾಸಿಗಳ ಗೋಳು ಕೇಳುವವರು ಇಲ್ಲವಾಗಿದೆ. ರಾಜಕಾಲುವೆ ಅಕ್ಕ ಪಕ್ಕದ ನಿವಾಸಿಗಳು ಅಂಗೈಯಲ್ಲಿ ಜೀವ ಹಿಡಿದುಕೊಂಡು ಇಡೀ ರಾತ್ರಿ ನಿದ್ದೆಯಿಲ್ಲದೆ ಕಾಲ ದೂಡಿದ್ದಾರೆ. ರಹೀಂ ನಗರ, ಸೂಜಿಮಲ್ಲೇಶ್ವರ ನಗರ, ಹಳೆ ನಗರ, ಕಾಟಪನಹಟ್ಟಿ, ಅಂಬೇಡ್ಕರ್ ನಗರ, ಪಾವಗಡ ರಸ್ತೆ ಹೀಗೆ ಅನೇಕ ಕಡೆ ನಿವಾಸಿಗಳ ಪಾಡು ಹೇಳತೀರದಾಗಿದೆ. ಕಾಟಪನಹಟ್ಟಿಗೆ ಹೋಗುವ ಪಾದಗಟ್ಟೆ ಸಮೀಪದ ಹಳ್ಳ ತುಂಬಿ ಹರಿದ ಪರಿಣಾಮ ರಸ್ತೆಯನ್ನು ಾತ್ಕಾಲಿಕ ಬಂದ್ ಮಾಡಲಾಗಿದೆ.
ವಿದ್ಯಾರ್ಥಿಗಳು ವಸತಿ ನಿಲಯದಿಂದ ನಾಪತ್ತೆ: ಬೆಂಗಳೂರಲ್ಲಿ ಪತ್ತೆ
ಹೊಳಲ್ಕೆರೆ: ವಸತಿ ಶಾಲೆಯಲ್ಲಿ ಅಧ್ಯಯನ ಮಾಡುತ್ತಿದ್ದ 6 ವಿದ್ಯಾರ್ಥಿಗಳು ವಸತಿ ನಿಲಯದಿಂದ ನಾಪತ್ತೆಯಾಗಿರುವ ಘಟನೆ ಬೆಳಗ್ಗೆ ವರದಿಯಾಗಿದ್ದು ಸಂಜೆ ವೇಳೆಗೆ ಪ್ರಕರಣ ವಿದ್ಯಾರ್ಥಿಗಳು ಬೆಂಗಳೂರಿನಲ್ಲಿ ಪತ್ತೆಯಾಗಿದ್ದಾರೆ ಎನ್ನಲಾಗಿದೆ.
ಹೊಳಲ್ಕೆರೆ ಪಟ್ಟಣದ ಡ್ರಿಮ್ ವರ್ಲ್ಡ್ ಖಾಸಗಿ ವಸತಿ ಶಾಲೆಯಲ್ಲಿ ಅಧ್ಯಯನ ಮಾಡುತ್ತಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಆಗಸ್ಟ್ 21 ಬುಧವಾರ ಬೆಳಗಿನ ಜಾವ 5.30ಕ್ಕೆ ವಿದ್ಯಾರ್ಥಿ ನಿಲಯದಿಂದ ತೆರಳಿದ್ದರು. ಬೆಳಗ್ಗೆ ಒಟ್ಟು 9 ವಿದ್ಯಾರ್ಥಿಗಳು ಒಟ್ಟಿಗೆ ತೆರಳಿದ್ದು, ಅದರಲ್ಲಿ ಮೂರು ಜನ ವಾಪಾಸು ಬಂದಿದ್ದಾರೆ. ಉಳಿದ 6 ವಿದ್ಯಾರ್ಥಿಗಳು ಬೆಂಗಳೂರಲ್ಲಿ ಪತ್ತೆಯಾಗಿದ್ದಾರೆ.
ಬೈಕ್ ಕಳ್ಳನ ಬಂಧನ: ಮೂರು ಬೈಕ್ ವಶ!
ಹೊಸದುರ್ಗ: ಪೊಲೀಸರ ಮಿಂಚಿನ ಕಾರ್ಯಾಚರಣೆಯಲ್ಲಿ ಬೈಕ್ ಕಳ್ಳನನ್ನು ಬಂಧಿಸಿ ಅವನಿಂದ ಕಳುವಾಗಿದ್ದ ಮೂರು ಬೈಕ್ ಗಳನ್ನು ಪೋಲೀಸರು ವಶಪಡಿಸಿಕೊಂಡಿದ್ದಾರೆ. ಬೈಕ್ ಕಳವು ಮಾಡಿದ ಅಸ್ಸಾಮಿ ಸುದರ್ಶನ್ ಹೊಸದುರ್ಗದ ಕಲ್ಲೇಶ್ವರ ಬಡಾವಣೆ ನಿವಾಸಿ, ಇವನು ದುಶ್ಚಟಗಳಿಗೆ ಬಲಿಯಾಗಿ ಹಣ ಸಿಗದಿದ್ದಾಗ ಹೊಸದುರ್ಗದ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ, ಹಾಗೂ ವಿವಿಧ ಬಡಾವಣೆಗಳಲ್ಲಿ ಬೈಕ್ ಕಳುವು ಮಾಡುತ್ತಿದ್ದನು. ಕಳ್ಳನಿಂದ ಮೂರು ಬೈಕ್ ಗಳನ್ನು ವಶಪಡಿಸಿಕೊಂಡಿದ್ದು ಪೊಲೀಸರು ಕೇಸು ದಾಖಲಿಸಿ ಆಸಾಮಿಗೆ ಜೈಲು ಊಟದ ರುಚಿ ತೋರಿಸಿದ್ದಾರೆ. ಈ ಬಗ್ಗೆ ಹೊಸದುರ್ಗ ಪೊಲೀಸ್ ಇನ್ಸ್ಪೆಕ್ಟರ್ ಎನ್ ತಿಮ್ಮಣ್ಣ ಪ್ರತಿಕ್ರಿಯಿಸಿ ಚಿತ್ರದುರ್ಗ ಜಿಲ್ಲಾ ಎಸ್ ಪಿ ಸಾಹೇಬರ ಆದೇಶದಂತೆ ನಮ್ಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈಗಾಗಲೇ ಬೈಕ್ಗಳನ್ನ ಕಳುವು ಮಾಡಿದ ಕಳ್ಳರನ್ನ ಂಧಿಸಿದ್ದು ನಮ್ಮ ಪೊಲೀಸ್ ಿಬ್ಬಂದಿ ಹಗಲು ರಾತ್ರಿಯೆನ್ನದೆ ಹೊಸದುರ್ಗ ನಗರ ಮತ್ತು ತಾಲೂಕಿನಾದ್ಯಂತ ಗಸ್ತು ತಿರುಗಿ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳು ನಡೆಯದಂತೆ ಎಚ್ಚರಿಕೆ ವಹಿಸಿದ್ದೇವೆ. ಸಾರ್ವಜನಿಕ ಸ್ಥಳಗಳು ತಾಲೂಕಿನ ಎಲ್ಲಾ ದೇವಸ್ಥಾನಗಳು, ಹಾಗೂ ತಮ್ಮಗಳ ಅಂಗಡಿ ಮುಂಗಟ್ಟುಗಳ ಮುಂಭಾಗದಲ್ಲಿ ಕಡ್ಡಾಯವಾಗಿ ಸಿ ಸಿ ಕ್ಯಾಮರಾಗಳನ್ನ ಅಳವಡಿಸಿಕೊಳ್ಳಬೇಕು. ಎಂದರು.
ಕಾರ್ಯಾಚರಣೆಯಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮಹೇಶ್ ಕುಮಾರ್, ಸಿಬ್ಬಂದಿಗಳಾದ ಕುಮಾರ್ ಜೈರಾಜ್, ಗಂಗಾಧರ್ ಸತೀಶ್ ನಟರಾಜ್ ಉಮೇಶ್ ಇದ್ದರು.