ತೀರ್ಥಹಳ್ಳಿ ಕೋಣಂದೂರು ಬಳಿ ಯೋಧನಿಗೆ ಅವಮಾನ!?
– ಭಾವಚಿತ್ರ, ಅವರ ಮನೆಗೆ ಹೋಗುವ ಬೋರ್ಡ್ ವಿರೂಪ
– ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲು
NAMMUR EXPRESS NEWS
ತೀರ್ಥಹಳ್ಳಿ: ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸೈನಿಕರೊಬ್ಬರ ಭಾವಚಿತ್ರ ಹಾಗೂ ಅವರ ಮನೆಗೆ ಹೋಗುವ ಬೋರ್ಡ್ ವಿರೂಪಗೊಳಿಸುವುದರ ಜತೆಗೆ ಸೈನಿಕರ ಮನೆಗೆ ಹೋಗುವ ಬೋರ್ಡ್ ನಾಶ ಪಡಿಸಿದ ಘಟನೆ ತೀರ್ಥಹಳ್ಳಿ ತಾಲೂಕಿನ ಗುಡ್ಡೆಕೋಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಣಕನಗದ್ದೆಯಲ್ಲಿ ನಡೆದಿದೆ. ಈ ಘಟನೆ ಇದೀಗ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಗುಡ್ಡೆಕೋಪ್ಪ ಗ್ರಾಮದ ಪ್ರವೀಣ್ ಎಂಬ ಯೋಧ ಪ್ಯಾರಮಿಲಿಟರಿಯಲ್ಲಿ ಕಳೆದ 20 ವರ್ಷಗಳಿಂದ ಸೇವೆ ಮಾಡುತ್ತಿದ್ದರು. ಇವರ ಮನೆ ಆರಣ್ಯಭಾಗದಲ್ಲಿ ಒಂಟಿ ಮನೆ, ತನ್ ಸ್ನೇಹಿತರು ಬಂದು ಬಳಗದವರಿಗೆ ಮನೆಗೆ ಬರಲು ಸಹಾಯವಾಗಲೆಂದು ಪಂಚಾಯಿತಿ ಆಡಳಿತ ಹಿಂದಿನ ವರ್ಷ ಯೋಧನ ಮನೆಗೆ ಹೋಗುವ ದಾರಿಯೆಂದು ಒಂದು ನಾಮಪಲಕದ ಬೋರ್ಡ್ ಗುಡ್ಡೆಕೋಪ್ಪ ಹೊದಲ ಹೋಗುವ ಮಾರ್ಗದಲ್ಲಿ ಆಳಡಿಸಲಾಗಿತ್ತು. ಆದರೆ ಬುಧವಾರ ತಡರಾತ್ರಿ ಆ ಬೋರ್ಡ್ ನ್ನ ಕೆಲವು ವಿಕೃತ ಮನಸ್ಸಿನ ಕಿಡಿಗೇಡಿಗಳು ತುಂಡು ಮಾಡಿ ಸೈನಿಕನ ಘನತೆಗೆ ಧಕ್ಕೆ ಮಾಡಿ ಅವಮಾನ ಮಾಡಲಾಗಿದೆ.
ಕೋಣಂದೂರು ಗ್ರಾಮ ಪಂಚಾಯತ್ ಆಡಳಿತದ ವತಿಯಿಂದ ಪಿಡಿಓ ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.