ರಾಜಧಾನಿಯಲ್ಲಿ ಮಲೆನಾಡ ತಲ್ಲಣದ ಚರ್ಚೆ!
– ಸಹ್ಯಾದ್ರಿ ಸಂಘ ಸೇರಿ ಮಲೆನಾಡು ಮೂಲದ ಸಂಘಟನೆಗಳ ಆಯೋಜನೆ
– ಮಲೆನಾಡಿನಲ್ಲಿ ಭೂಹಕ್ಕು ಮತ್ತು ಅರಣ್ಯ ಕಾಯ್ದೆಗಳಿಗೆ ಸಂಬಂಧಿಸಿದ ವಿಚಾರಗೋಷ್ಠಿ
– ನೀವೂ ಭಾಗವಹಿಸಿ…ನಿಮ್ಮ ಸಮಸ್ಯೆ ಬಗ್ಗೆ ಚರ್ಚೆ ಮಾಡಿರಿ
NAMMUR EXPRESS NEWS
ಬೆಂಗಳೂರು: ಸಹ್ಯಾದ್ರಿ ಸಂಘ ಬೆಂಗಳೂರು ಸೇರಿ ಮಲೆನಾಡು ಮೂಲದ ಸಂಘಟನೆಗಳು ಮಲೆನಾಡಿನಲ್ಲಿ ಭೂಹಕ್ಕು ಮತ್ತು ಅರಣ್ಯ ಕಾಯ್ದೆಗಳಿಗೆ ಸಂಬಂಧಿಸಿದ ಸಮಸ್ಯೆಗಳು ಮತ್ತು ಮಾರ್ಗೋಪಾಯಗಳು ಬಗ್ಗೆ ವಿಚಾರಗೋಷ್ಠಿಯನ್ನು ಆ. 25ರಂದು ಬೆಂಗಳೂರಲ್ಲಿ ಆಯೋಜಿಸಿವೆ.
ಅಧ್ಯಕ್ಷತೆಯನ್ನು ಮಾಜಿ ಗೃಹ ಸಚಿವರು ಮತ್ತು ಶಾಸಕರು ತೀರ್ಥಹಳ್ಳಿ ವಿಧಾನ ಸಭಾ ಕ್ಷೇತ್ರದ ಅರಗ ಜ್ಞಾನೇಂದ್ರ, ಮುಖ್ಯ ಅತಿಥಿಗಳಾಗಿ ಟಿ. ಡಿ ರಾಜೇಗೌಡ ಅಧ್ಯಕ್ಷರು ಕರ್ನಾಟಕ ರಾಜ್ಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ ಬೆಂಗಳೂರು ಮತ್ತು ಶಾಸಕರು ಶೃಂಗೇರಿ ವಿಧಾನ ಸಭಾ ಕ್ಷೇತ್ರ ಭಾಗವಹಿಸಲಿದ್ದಾರೆ.
ಪ್ರಧಾನ ಭಾಷಣಕಾರರಾಗಿ ಪ್ರೊ. ಕಮ್ಮರಡಿ ಪ್ರಕಾಶ್
(ಕೃಷಿ ತಜ್ಞರು ಹಾಗೂ ಮಾಜಿ ಅಧ್ಯಕ್ಷರು ಕೃಷಿ ಬೆಲೆ ಆಯೋಗ )ಬೆಂಗಳೂರು, ಾ. ವಿಠಲ್ ಹೆಗ್ಡೆ ಕಲ್ಕುಳಿ ಶೃಂಗೇರಿ ಖ್ಯಾತ ಪರಿಸರವಾದಿಗಳು ಮತ್ತು ರೈತ ಹೋರಾಟಗಾರರು ಬಿ ಎಂ. ರಮೇಶ್ ಹೆಗ್ಡೆ ಸಾಮಾಜಿಕ ಕಾರ್ಯಕರ್ತರು ಮತ್ತು ಮಾಜಿ ಅಧ್ಯಕ್ಷರು ನಗರ ಸಭೆ, ಶಿವಮೊಗ್ಗ ಇವರು ಭಾಗಿಯಾಗಲಿದ್ದಾರೆ.
ದಿನಾಂಕ 25-08-24 ಭಾನುವಾರ,ಬೆಳಿಗ್ಗೆ 11 ಕ್ಕೆ
ಸ್ಥಳ : ಶಾಸಕರ ಭವನ ಕಟ್ಟಡ 2, ಸಮ್ಮೇಳನ ಸಭಾಂಗಣ ಬೆಂಗಳೂರು
ಯಾವ ಯಾವ ಸಂಘಟನೆಗಳ ಸಹಯೋಗ?
ಮಲೆನಾಡು ಸಂಘ, ಬೆಂಗಳೂರು | ಮಲೆನಾಡು ಮಿತ್ರ ವೃಂದ ಬೆಂಗಳೂರು | ಮಲೆನಾಡು ಹಿತರಕ್ಷಣಾ ವೇದಿಕೆ ಬೆಂಗಳೂರು ಮಲೆನಾಡು ಕ್ರೆಡಿಟ್ ಕೊ. ಅಪರೇಟಿವ್ ಸೊಸೈಟಿ ಬೆಂಗಳೂರು | ಸುವರ್ಣ ಮಲೆನಾಡು ಸಂಘ ಬೆಂಗಳೂರು ಅಡಿಕೆನಾಡು ಕೋ- ಅಪರೇಟಿವ್ ಸೊಸೈಟಿ ಬೆಂಗಳೂರು | ಆಗುಂಬೆ ಕ್ರೆಡಿಟ್ ಕೊ ಆಪರೇಟಿವ್ ಸೊಸೈಟಿ ಬೆಂಗಳೂರು ಇವರ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಲಿದೆ.
ಮಲೆನಾಡಿನ ಸರ್ವರಿಗೂ ಈ ಕಾರ್ಯಕ್ರಮಕ್ಕೆ ಸ್ವಾಗತಿಸಲಾಗಿದೆ.