ದರ್ಶನ್ ಮೋಜು ಮಸ್ತಿ: ಈಗ ಮತ್ತೆ ಸಂಕಷ್ಟದತ್ತ!
– ಮೊಬೈಲ್, ಸಿಗರೇಟ್: ಜೈಲು ಅಧಿಕಾರಿಗಳ ತಲೆ ದಂಡ
– ಕೊಲೆ ಕೇಸ್ ಸಿಬಿಐ ತನಿಖೆಗೆ ರೇಣುಕಾಸ್ವಾಮಿ ತಂದೆ ಪಟ್ಟು!
NAMMUR EXPRESS NEWS
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಆರೋಪಿ ನಟ ದರ್ಶನ್ ರೌಡಿ ಶೀಟರ್ಗಳೊಂದಿಗೆ ಬಿಂದಾಸ್ ಆಗಿ ಟೀ ಸೇವಿಸುತ್ತಾ, ಸಿಗರೇಟ್ ಸೇವನೆ ಮಾಡುತ್ತಿರುವ ಫೋಟೋ ವೈರಲ್ ಆಗಿದ್ದು, ಭಾರೀ ಟೀಕೆಗೆ ಗುರಿಯಾಗಿದೆ. ಈ ನಡುವೆ ಪೊಲೀಸ್ ಇಲಾಖೆ ಜೈಲು ಅಧಿಕಾರಿಗಳ ವಿರುದ್ಧ ತನಿಖೆಗೆ ಅದೇಶಿಸಿದ್ದಾರೆ.
ದುಡ್ಡು ಕೊಟ್ಟರೆ ಜೈಲು ರೆಸಾರ್ಟ್ ವಾತಾವರಣ ಕಲ್ಪಿಸಿಕೊಡುತ್ತೆ ಎಂಬುದಕ್ಕೆ ಈ ಫೋಟೋ ಸದ್ಯ ಸಾಕ್ಷಿಯಾಗಿದೆ.
ಜೈಲು ಅಧಿಕಾರಿಗಳ ಸಪೋರ್ಟ್ ಇದ್ದುದರಿಂದಲೇ ದರ್ಶನ್ ಅವರು ಜಾಲೊಯಾಗಿ ಕಾಫಿ ಕುಡಿಯುತ್ತ, ಕೈಯಲ್ಲಿ ಸಿಗರೇಟ್ ಹಿಡಿದಿರೋ ಫೋಟೋ ಹರಿದಾಡುತ್ತಿದೆ. ಅಷ್ಟೇ ಅಲ್ಲ, ವಿಡಿಯೋ ಕಾಲ್ ಮಾಡಿದ್ದ ವ್ಯಕ್ತಿ ಜೊತೆಗೂ ದರ್ಶನ್ ಮಾತಾಡಿರುವ ವಿಯೋ ವೈರಲ್ ಆಗಿದೆ.
ಈಗ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿರುವ ದರ್ಶನ್ ಪ್ರಕರಣ ಗಂಭೀರ ಆಗುತ್ತಿದೆ. ಅತ್ತ ಜೈಲು ಅಧಿಕಾರಿಯ ತಲೆದಂಡ ಕೂಡ ಆಗುತ್ತಾ? ಕಾದು ನೋಡಬೇಕಿದೆ.
ತನಿಖೆಗೆ ಆದೇಶ: ಆಂತರಿಕ ತನಿಖೆ ಮಾಡುವಂತೆ ಇದೀಗ ಪರಪ್ಪನ ಅಗ್ರಹಾರದ ಡಿಜಿ ಮಾಲಿನಿ ಕೃಷ್ಣಮೂರ್ತಿ ಅವರು ಆದೇಶ ಹೊರಡಿಸಿದ್ದಾರೆ. ಇದರಿಂದ ದರ್ಶನ್ಗೆ ಮತ್ತೆ ಸಂಕಷ್ಟ ಎದುರಾಗುವ ಸಾಧ್ಯತೆ ಇದ್ದು, ರೌಡಿಗಳ ಜೊತೆ ದರ್ಶನ್ ಬಿಂದಾಸ್ ಆಗಿ ಹೇಗೆ ಇದ್ದರು. ಸ್ಥಳಕ್ಕೆ ಹೋಗಿ ಪರಿಶೀಲಿಸಿ. ಸಿಸಿಟಿವಿ ಸಾಕ್ಷ್ಯಾಗಳನ್ನು ಸಂಗ್ರಹಿಸಿ, ಜೈಲು ಅಧಿಕಾರಿಗಳನ್ನು ವಿಚಾರಿಸಿ ವರದಿ ನೀಡಬೇಕು ಎಂದು ಪೊಲೀಸ್ ಅಧಿಕಾರಿಗಳಾದ ಆನಂದ ರೆಡ್ಡಿ ಮತ್ತು ಸೋಮಶೇಖರ್ ಅವರಿಗೆ ಆದೇಶ ಮಾಡಿದ್ದಾರೆ. ಇಂದು ರಾತ್ರಿ ಅಥವಾ ನಾಳೆ ಅಧಿಕಾರಿಗಳು ಜೈಲಿಗೆ ಭೇಟಿ ನೀಡುವ ಸಾಧ್ಯತೆ ಇದೆ
ಸಿಬಿಐ ತನಿಖೆಗೆ ರೇಣುಕಾಸ್ವಾಮಿ ತಂದೆ ಪಟ್ಟು!
ಚಿತಚಿತ್ರದುರ್ಗ ಮೂಲದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ
ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್, ಜೈಲಿನಲ್ಲಿ ಸಹಚರರ ಜೊತೆಗೆ ಕಾಫಿ ಮಗ್ ಹಾಗೂ ಸಿಗರೇಟ್ ಹಿಡಿದು ಹರಟೆ ಹೊಡೆಯುತ್ತಾ ಕುಳಿತಿರುವ ಫೋಟೋ ವೈರಲ್ ಆದ ಬೆನ್ನಲ್ಲೇ ರೇಣುಕಸ್ವಾಮಿ ತಂದೆ ಶಿವನಗೌಡರು ಕಣ್ಣಿರಿಟ್ಟು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಮಗನನ್ನು ಕಳೆದುಕೊಂಡು ದಿನದಿಂದ ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದೇವೆ. ನಮ್ಮ ಸೊಸೆ ಮುಖ ನೋಡಿದಾಗ ಸಂಕಟ ಆಗುತ್ತೆ. ಇಂತಹ ಹೊತ್ತಿನಲ್ಲಿ ಈ ಪೋಟೋ ನೋಡಿದಾಗ ಹೊಟ್ಟೆ ಉರಿಯುತ್ತಿದೆ. ತಪ್ಪು ಮಾಡಿರುವ ಭಾವನೆಯೇ ಇಲ್ಲದಂತೆ ಕುಳಿತಿದ್ದಾರೆ. ಇದನ್ನೆಲ್ಲಾ ನೋಡಿದಾಗ ಸಿಬಿಐ ತನಿಖೆ ಅನಿವಾರ್ಯ ಅನ್ನಿಸುತ್ತಿದೆ ಎಂದಿದ್ದಾರೆ.
7 ಮಂದಿ ಅಧಿಕಾರಿಗಳ ಅಮಾನತು
ದರ್ಶನ್ ಜೈಲಲ್ಲಿ ಮೋಜು ಪ್ರಕರಣದಲ್ಲಿ 7 ಮಂದಿಯ ತಲೆ ದಂಡವಾಗಿದೆ.ಶರಣಬಸವ ಅಮೀನ್ ಗಡ, ಪುಟ್ಟಸ್ವಾಮಿ, ಖಂಡೇವಾಲಾ, ಶ್ರೀಕಾಂತ್, ವೆಂಕಪ್ಪ, ವಾರ್ಡರ್ ಬಸಪ್ಪ, ಸಂಪತ್ ಸರಿದಂತೆ ಏಳು ಮಂದಿಯನ್ನು ಅಮಾನತು ಮಾಡಲಾಗಿದೆ. ಮುಂದೆ ಇಂತಹ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳಲಾಗಿದೆ. ಜೈಲಿನ ಹಿರಿಯ ಅಧಿಯಕಾರಿಗಳ ಬಗ್ಗೆ ಕೂಡ ಕ್ರಮ ಕೈಗೊಳ್ಳಲಾಗಿದೆ ಎಂದು ಗೃಹ ಸಚಿವ ಪರಮೇಶ್ವರ್ ಅವರು ಸ್ಪಷ್ಟನೆ ನೀಡಿದ್ದಾರೆ.ಈ ಪ್ರಕರಣದಲ್ಲಿ ಜೈಲಿನ ಹಿರಿಯ ಅಧಿಕಾರಿಗಳು ಶಾಮೀಲು ಆಗಿರುವುದು ಗೊತ್ತಾದರೆ ಅವರನ್ನು ಕೂಡ ಅಮಾನತು ಮಾಡುತ್ತೇವೆ ಎಂದು ಹೇಳಿದರು. ಪೊಲೀಸ್ ಅಧಿಕಾರಿಗಳ ವಿರುದ್ಧ ಗರಂ ಆಗಿ ತನಿಖೆಗೆ ಸೂಚನೆ ನೀಡಿದ್ದಾರೆ.