ಆಸ್ತಿ ನೋಂದಣಿ ಸೆ.2ರಿಂದ ಹೊಸ ಯೋಜನೆ ಜಾರಿ!
– ಏನಿದು ಎನಿವೇರ್ ಆಸ್ತಿ ನೋಂದಣಿ ಪದ್ಧತಿ
– ನಕಲಿ ಅಸ್ತಿ ನೋಂದಣಿಗೆ ಇನ್ಮೇಲೆ ಮೂಗುದಾರ?
NAMMUR EXPRESS NEWS
ಬೆಂಗಳೂರು: ಆಸ್ತಿ ವಂಚನೆ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಯಾರದ್ದೋ ಆಸ್ತಿಗೆ ಮತ್ಯಾರೋ ನಕಲಿ ದಾಖಲೆ ಕೊಟ್ಟು ಮೋಸ ಮಾಡುವುದು, ವೈಯಕ್ತಿಕ ದಾಖಲೆ ನಕಲು ಮಾಡಿ ನಾನೇ ವಾರಸುದಾರ ಎಂದು ವಂಚಿಸುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ, ಇದಕ್ಕೆ ಕಡಿವಾಣ ಹಾಕಲು ಮುಂದಾಗಿದ್ದು, ಆಸ್ತಿ ಸೇಫ್ಟಿಗಾಗಿ ಎಲ್ಲಾ ಉಪ ನೋಂದಣಿ ಕಚೇರಿಗಳಲ್ಲಿ ಕಾವೇರಿ-2 ಜಾರಿಗೊಳಿಸಲಾಗಿದ್ದ, ಇಂದಿನಿಂದ ಎಲ್ಲಾ ಉಪ ನೋಂದಣಿ ಕಚೇರಿಗಳಲ್ಲಿ ತಮ್ಮ-ತಮ್ಮ ಆಸ್ತಿ ಒಡೆತನದವರು ಆಧಾರ್, ಪಾಸ್ಪೋರ್ಟ್, ಪ್ಯಾನ್ ಈ 3ರಲ್ಲಿ ಒಂದು ದಾಖಲೆ ನೀಡುವುದು ಕಡ್ಡಾಯವಾಗಿದೆ.
ಎಲ್ಲಾ ಉಪ ನೋಂದಣಿ ಕಚೇರಿಗಳಲ್ಲಿ ಕಾವೇರಿ-2 ಜಾರಿಗೊಳಿಸಿದ್ದೇವೆ. ಅಪಾಯಿಂಟ್ಮೆಂಟ್ ಸಿಸ್ಟಮ್ ಸರಿಯಾಗಿ ಪಾಲಿಸದೆ ಜನಜಂಗುಳಿಯಿತ್ತು. ಇನ್ಮುಂದೆ ಅಪಾಯಿಂಟ್ಮೆಂಟ್ ಸಿಸ್ಟಮ್ ಕಡ್ಡಾಯ ಮಾಡಿದ್ದೇವೆ ರಾಜ್ಯದಲ್ಲಿ 257 ಉಪನೋಂದಣಿ ಕಚೇರಿಗಳಿವೆ, 50 ಕೇರಿಗಳಲ್ಲಿ ಜನಜಂಗುಳಿ ಇೆ. ಉಳಿದ ಉಪನೋಂದಣಿ ಕಚೇರಿಗಳಲ್ಲಿ ಹೆಚ್ಚು ಜನಜಂಗುಳಿ ಇರಲ್ಲ. ಇವೆಲ್ಲವೂ ನಗರ ಪ್ರದೇಶದಲ್ಲಿರುವ ಕಾರಣ ಸ್ಥಳಾವಕಾಶ ಸಹ ಕಡಿಮೆ ಇದೆ. ಗ್ರಾಮೀಣ ಪ್ರದೇಶಗಳ ಉಪನೋಂದಣಿ ಕಚೇರಿಗಳಲ್ಲಿ ಕೆಲಸದ ಒತ್ತಡ ಇಲ್ಲ. ಸೆಪ್ಟೆಂಬರ್ 2ರಿಂದ ಆಯಾ ಜಿಲ್ಲೆಯ ಯಾವುದೇ ಉಪನೋಂದಣಿ ಕಚೇರಿಗೆ ಹೋಗಿ ನೋಂದಣಿ ಮಾಡಿಸಬಹುದು ಎಂದು ಸಚಿವ ಕೃಷ್ಣ ಬೈರೆಗೌಡ ತಿಳಿಸಿದ್ದಾರೆ.