ಕುವೆಂಪು ವಿವಿ ಅವ್ಯವಸ್ಥೆಗೆ ಹೊಣೆ ಯಾರು?
– ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾದರೂ, ಡಿಗ್ರಿ ಕಾಲೇಜುಗಳು ಆರಂಭವಾಗಿಲ್ಲ
– ಕಾಲೇಜು ಅಡ್ಮಿಶನ್ ಆಗದೆ ವಿದ್ಯಾರ್ಥಿಗಳ ಆತಂಕ!
NAMMUR EXPRESS NEWS
ಶಂಕರಘಟ್ಟ: ರಾಜ್ಯದಲ್ಲಿ ಅತಿ ಕಳಪೆ ವಿಶ್ವ ವಿದ್ಯಾನಿಲಯವಾಗಿ ಕುವೆಂಪು ವಿವಿ ಬೆಳೆಯುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್ ಅರುಣ್ ಶಾಸಕ ದೂರಿದ್ದಾರೆ.
ರಾಜ್ಯದಲ್ಲಿ 41 ವಿಶ್ವವಿದ್ಯಾಲಯಗಳಿವೆ, ಇದರಲ್ಲಿ ಡೀಮ್ಡ್ ವಿಶ್ವವಿದ್ಯಾಲಯ 11 ಇದೆ. ನ್ಯಾಷನಲ್ ಇನ್ಸ್ಟಿಟ್ಯೂಟ್ 9 ಇದೆ. ಕುವೆಂಪು ವಿವಿಯಲ್ಲಿ ಆರಂಭದಲ್ಲಿ 4 ಜಿಲ್ಲೆ ಇತ್ತು. ಈಗ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆ ಮಾತ್ರ ವಿಶ್ವ ವಿದ್ಯಾಲಯ ಉಳಿದುಕೊಂಡಿದೆ.
ಇನ್ನು ಡಿಗ್ರಿ ಕಾಲೇಜು ಶುರುವಾಗಿಲ್ಲ
ಏ.11ರಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ಇಲ್ಲಿಯವರೆಗೂ ಡಿಗ್ರಿ ಕಾಲೇಜುಗಳು ಆರಂಭವಾಗಿಲ್ಲ. 4 ತಿಂಗಳು 11 ದಿನ ಆದರೂ ಡಿಗ್ರಿ ಕಾಲೇಜು ಆರಂಭವಾಗಿಲ್ಲ. 84 ಕಾಲೇಜು ಇದೆ. ಇವುಗಳಿಗೆ ಪ್ರತಿವರ್ಷ ಅಫೀಲಿಯೇಷನ್ ಗೆ ಬರೆಯಲಾಗುತ್ತದೆ. ಅರ್ಜಿ ಬರೆದಾಗ ಸ್ಥಯ ತಪಾಸಣೆ ನಡೆಸಿ ಅನುಗುಣವಾಗಿ ಸೀಟು ನೀಡಲಾಗುತ್ತದೆ. 84 ಕಾಲೇಜಿನ ಅಫೀಲಿಯೇಷನ್ ನನ್ನ ಸರ್ಕಾರಕ್ಕೆ ಕಳುಹಿಸುವ ವ್ಯವಸ್ಥೆ ಆರಂಭಿಸಿದ್ದರಿಂದ ಕುವೆಂಪು ವಿವಿಯಲ್ಲಿ ಇದುವರೆಗೂ ಕಾಲೇಜುಗಳು ಆರಂಭವಾಗಿಲ್ಲ. ಬೇರೆ ಎಲ್ಲಾ ವಿಶ್ವ ವಿದ್ಯಾನಿಲಯದ ಕಾಲೇಜುಗಳು ಆರಂಭವಾಗಿದೆ. ಅಫೀಲಿಯೇಷನ್ ಭಯ ಆರಂಭವಾಗಿದೆ ಎಂದರು.
ಅಡ್ಮಿಷನ್ ಪ್ರೊಸಸ್ ನಡೆಯಬೇಕು. ಆದರೆ ಅಡ್ಮಿಶನ್ ಪೋರ್ಟಲ್ ಗಳು ಓಪನ್ ಆಗದೇ ಇರುವುದರಿಂದ ವಿದ್ಯಾರ್ಥಿಗಳಿಗೆ ಆತಂಕ ಎದುರಾಗಿದೆ. ಅಧಿಕಾರ ವಿಕೇಂದ್ರಿಕರಣ ಇಲ್ಲವಾಗಿದೆ.
ಕುವೆಂಪು ವಿವಿಯ ಎಲ್ಲಾ ವಿದ್ಯಾರ್ಥಿಗಳಿಗೂ ಕೂಡ ಶಾಕ್ ಆಗಿದೆ . ಉಪ ಕುಲಪತಿ ಅವರು ವಿದೇಶಿ ಪ್ರವಾಸದಲ್ಲಿದ್ದಾರೆ. ಹಿಂದುಳಿದ ಯೂನಿವರ್ಸಿಟಿ ಎಂದರೆ ಕುವೆಂಪು ವಿವಿ ಎಂದು ದೂರಿದರು. ಅತಿಥಿ ಉಪನ್ಯಾಸಕರಿಗೆ ಐದು ತಿಂಗಳ ಸಂಬಳವಿಲ್ಲದಂತಾಗಿದೆ. ಮಕ್ಕಳ ಭವಿಷ್ಯದ ಬಗ್ಗೆ ಆಟ ಆಡುತ್ತಿದ್ದಾರೆ. ಯೂನಿವರ್ಸಿಟಿಯ ಅಧಿಕಾರಿಗಳೂ ಅತಿ ಶೀಘ್ರವಾಗಿ ಕ್ರಮ ಕೈಗೊಳ್ಳಬೇಕು ಎಂದರು.