ಶಿವಮೊಗ್ಗ ಜಿಲ್ಲೆಯ ಸಾಧಕರಿಗೆ ರಾಜರತ್ನ ಪ್ರಶಸ್ತಿ!
• ಚಿತ್ರೋತ್ಸವ, ಸಿನಿಮಾ, ಕಿರುಚಿತ್ರಗಳ ಕ್ಷೇತ್ರದಲ್ಲಿ ಮಲೆನಾಡೇ ಮೇಲು ಗೈ
• ಜನತೆಗೆ ಹೆಮ್ಮೆ ಮೂಡಿಸಿದ ಶಿವಮೊಗ್ಗ ಸಾಧಕರು
NAMMUR EXPRESS NEWS
ಶಿವಮೊಗ್ಗ: ಶಿವಮೊಗ್ಗದ ಸಾಧಕರನ್ನು ರಾಜರತ್ನ ಪ್ರಶಸ್ತಿಗೆ ಆಯ್ಕೆ ಮಾಡಿದ್ದು, ಜನತೆಯಲ್ಲಿ ಹೆಮ್ಮೆ ಮೂಡಿಸಿದೆ.
ಕಿಮ್ ಸ್ಟಾರ್ ಉಡುಪಿ ವತಿಯಿಂದ ಆ. 25ರಂದು ಬೆಂಗಳೂರಿನಲ್ಲಿ ಚಿತ್ರೋತ್ಸವ, ಸಿನಿಮಾ ಹಾಗೂ ಕಿರುಚಿತ್ರಗಳ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶಿವಮೊಗ್ಗದ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ನಡೆಯಿತು.
ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ವೈದ್ಯೆ ಡಾ. ರಕ್ಷಾ ರಾವ್, ಉದ್ಯಮಿ ಎ.ಆರ್.ಅವಿನಾಶ್, ವಿದ್ಯಾ, ಉಮಾ ದಿಲೀಪ್, ಪುನೀತ್ ಬೆಳ್ಳೂರು, ಪೂರ್ಣಿಮಾ, ಅಮೃತಾ ಹಾಗೂ ವಿಷ್ಣುಪ್ರಸಾದ್ ಅವರಿಗೆ ರಾಜರತ್ನ ಪ್ರಶಸ್ತಿ ನೀಡಿ ಅಭಿನಂದನೆ ಸಲ್ಲಿಸಿದರು.
ಬೆಂಗಳೂರಿನ ಮೂಡಲಪಾಳ್ಯ ಕಲ್ಯಾಣ ನಗರದಲ್ಲಿರುವ ಜ್ಞಾನ ಸೌಧದಲ್ಲಿ ಆ. 25ರಂದು ಶಿವಮೊಗ್ಗ ಜಿಲ್ಲೆಯ ಸಾಧಕರು ಸೇರಿದಂತೆ ವಿವಿಧ ಕ್ಷೇತ್ರದ ಸಾಧಕರಿಗೆ ಅಭಿನಂದನಾ ಕಾರ್ಯಕ್ರಮವು ನಡೆಯಿತು. ಅತ್ಯುತ್ತಮ ಕಿರುಚಿತ್ರಗಳಿಗೆ ಪ್ರಶಸ್ತಿ ಪ್ರದಾನ,ಚಿತ್ರಗೀತೆಗಳ ಸಮ್ಮಿಲನ ಕಾರ್ಯಕ್ರಮವನ್ನು ನಡೆಸಲಾಯಿತು.
ಗೋವಿಂದರಾಜಪುರ ಶಾಸಕ ಎಂ.ಪ್ರಿಯಕೃಷ್ಣ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿಜಯನಗರ ವಿಧಾನಸಭಾ ಕ್ಷೇತ್ರ ಶಾಸಕ ಎಂ.ಕೃಷ್ಣಪ್ಪ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು. ಚಲನಚಿತ್ರ ಮಂಡಳಿ ಸದಸ್ಯ ಚಿಕ್ಕಣ್ಣ, ಬಿಬಿಎಂಪಿ ಸದಸ್ಯೆ ತಾರಾ ಲೋಕೇಶ್, ನಟಿ ಗೀತಾ ಮತ್ತಿತರ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.