ಟಾಪ್ 5 ನ್ಯೂಸ್ ಮಲ್ನಾಡ್
ದರ್ಶನ್ ಗ್ಯಾಂಗ್ ಶಿವಮೊಗ್ಗ ಜೈಲಿಗೆ ಶಿಫ್ಟ್!
– ಶಿವಮೊಗ್ಗ: ಚಾಲಕನ ನಿರ್ಲಕ್ಷ್ಯದಿಂದ ಸೇತುವೆ ಕೆಳಗೆ ಬಿದ್ದ ಕಾರು!
– ರಿಪ್ಪನಪೇಟೆ : ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಅಪಘಾತ
– ಆಗುಂಬೆ : ಮದ್ಯಪಾನ ನಿಷೇಧ: ವಾಹನ ಸವಾರರೇ ಎಚ್ಚರ
– ಶಿವಮೊಗ್ಗ: ಬಸ್ಸಲ್ಲಿ ಪ್ರಯಾಣಿಸುವಾಗ ಚಿನ್ನಾಭರಣ ಕಳವು
NAMMUR EXPRESS NEWS
ಶಿವಮೊಗ್ಗ: ಕೇಂದ್ರ ಕಾರಾಗೃಹಕ್ಕೆ ದರ್ಶನ್ ಗ್ಯಾಂಗಿನ ಇಬ್ಬರು ಸದಸ್ಯರನ್ನು ಶಿಫ್ಟ್ ಮಾಡಲಾಗುತ್ತಿದೆ. ಶಿವಮೊಗ್ಗ ಪೊಲೀಸ್ ಈ ಕಾರಣಕ್ಕಾಗಿ ಸೋಗಾನೆಯಲ್ಲಿರುವ ಸೆಂಟ್ರಲ್ ಜೈಲ್ ಮೇಲೆ ದಾಳಿಯನ್ನು ಮಾಡಿದ್ದಾರೆ.
ಶಿವಮೊಗ್ಗದ ಸೊಗಾನೆಯಲ್ಲಿರುವ ಕೇಂದ್ರ ಕಾರಾಗೃಹದ ಮೇಲೆ ಶಿವಮೊಗ್ಗ ಎಸ್.ಪಿ ಮಿಥುನ್ ಕುಮಾರ್ ನೇತೃತ್ವದ ಟೀಮ್ ದಾಳಿ ನಡೆಸಿದೆ. ಎಸ್.ಪಿ ಮಿಥುನ್ ಕುಮಾರ್ ಮತ್ತು ಟೀಮ್ ನಲ್ಲಿ ಹಲವು ಸಿಬ್ಬಂದಿಗಳು ಹಾಗೂ ಅಧಿಕಾರಿಗಳು ಇರುವುದನ್ನು ಖಚಿತಪಡಿಸಲಾಗಿದೆ.
ಪೊಲೀಸರು ಜೈಲಿನ ಪ್ರತಿ ಬ್ಯಾರಕ್ ಗಳನ್ನು ತಪಾಸನೆ ನಡೆಸಿದದಾರ. ಅಲ್ಲದೆ ನಿಷೇಧಿಸಿದ ವಸ್ತುಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಯಾವುದೇ ನಿಷೇಧಿತ ವಸ್ತುಗಳು ಸಿಕ್ಕಿರುವುದಿಲ್ಲ. ಇನ್ನೂ ರೇಣುಕಾ ಸ್ವಾಮಿ ಕೊಲೆ ಆರೋಪಿಗಳಿಬ್ಬರು ಬೆಂಗಳೂರಿನ ಪರಪ್ಪರ ಅಗ್ರಹಾರ ಜೈಲಿನಿಂದ ಶಿವಮೊಗ್ಗ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್ ಆಗುವ ಮುನ್ನ ನಡೆದಿರುವ ಕಾರ್ಯ ಮಹತ್ವವನ್ನು ಪಡೆದುಕೊಂಡಿದೆ.
ಶಿವಮೊಗ್ಗ: ಚಾಲಕನ ನಿರ್ಲಕ್ಷ್ಯದಿಂದ ಸೇತುವೆ ಕೆಳಗೆ ಬಿದ್ದ ಕಾರು!
ಶಿವಮೊಗ್ಗ : ಚಾಲಕನ ನಿಯಂತ್ರಣ ತಪ್ಪಿ ಸೇತುವೆಯಿಂದ ಕಾರು ಕೆಳಗೆ ಬಿದ್ದ ಘಟನೆ ಆಗರದಹಳ್ಳಿ ಬಳಿ ನಡೆದಿದೆ. ಸಿಗಂದೂರು, ಜೋಗ, ಕೊಲ್ಲೂರು ಪ್ರವಾಸ ಮುಗಿಸಿ ಚಿತ್ರದುರ್ಗಕ್ಕೆ ಹೋಗುತ್ತಿದ್ದಾಗ ದುರ್ಘಟನೆ ನಡೆದಿದೆ. ಅಪಘಾತದಿಂದ ಆರು ಮಂದಿಗೆ ಗಾಯವಾಗಿದ್ದು, ಗಾಯಾಳುಗಳನ್ನು ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ರಾತ್ರಿ ಹೊತ್ತಿಗೆ ಈ ದುರ್ಘಟನೆ ನಡೆದಿದೆ. ಚಾಲಕ ಕಾರ್ತಿಕ್ ಅತಿ ವೇಗ ಮತ್ತು ನಿರ್ಲಕ್ಷ್ಯದ ಚಾಲನೆ ಮಾಡಿರುವುದು ಅಪಘಾತಕ್ಕೆ ಕಾರಣ ಎಂಬ ಆರೋಪ ಕೇಳಿ ಬಂದಿದೆ. ಕಾರಿನಲ್ಲಿದ್ದ ಇಬ್ಬರು ಮಕ್ಕಳು ಸೇರಿ ಆರು ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
– ರಿಪ್ಪನಪೇಟೆ : ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಅಪಘಾತ
ರಿಪ್ಪನಪೇಟೆ : ಚಾಲಕನ ನಿಯಂತ್ರಣ ತಪ್ಪಿ 30 ಮಂದಿ ಪ್ರಯಾಣಿಕರನ್ನು ಇದ್ದ ಖಾಸಗಿ ಬಸ್ ಅಪಘಾತವಾಗಿರುವ ಘಟನೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ರಿಪ್ಪನ್ಪೇಟೆ ಬಳಿಯಲ್ಲಿ ನಡೆದಿದೆ.
ಸಾಗರದಿಂದ – ಉಡುಪಿ ಕಡೆಗೆ ತೆರಳುತಿದ್ದ ಕೃಷ್ಣಸ್ವಾಮಿ ಎಂಬ ಖಾಸಗಿ ಬಸ್ವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಿಂದ ಕೆಳಗೆ ಇಳಿದ ಘಟನೆಯೊಂದು ನಡೆದಿದೆ. ಬಾಳೂರು ಬಳಿಯಲ್ಲಿರುವ ಸೇತುವೆ ಬಳಿಯಲ್ಲಿ ಬರುತ್ತಿದ್ದ ಬಸ್ ಇದ್ದಕ್ಕಿದ್ದ ಹಾಗೆ ಚರಂಡಿಗೆ ಇಳಿದಿದೆ. ಬಸ್ನಲ್ಲಿ 30 ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಘಟನೆ ನಡೆದ ತಕ್ಷಣ ಸ್ಥಳೀಯರು ತಕ್ಷಣವೇ ಸ್ಥಳಕ್ಕೆ ಧಾವಿಸಿ ಪ್ರಯಾಣಿಕರಿಗೆ ನೆರವು ನೀಡಿ ಸಮಯ ಪ್ರಜ್ಞೆ ಮೆರೆದಿದ್ದಾರೆ. ಕೆಲವು ಪ್ರಯಾಣಿಕರಿಗೆ ಗಾಯಗಳಾಗಿದ್ದು ಶಿವಮೊಗ್ಗದ ಆಸ್ಪತ್ರೆಗೆ ವಾಿಸಲಾಗಿದೆ ಎಂಬ ಮಾಹಿತಿ ತಿಳಿದುಬಂದಿದೆ. ರಿಪ್ಪನ್ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
– ಮದ್ಯಪಾನ ಮಾಡಿ ಸಂಚಾರ ನಿಯಮ ಉಲ್ಲಂಘಿಸಿದರೆ ದಂಡ!
ಆಗುಂಬೆ : ಪೊಲೀಸ್ ಠಾಣೆ ವ್ಯಾಪ್ತಿಯ ಆಗುಂಬೆ ಫಾರೆಸ್ಟ್ ಚೆಕೆಪೋಸ್ಟ್ ಹತ್ತಿರ ದಿನಾಂಕ 26 ರಂದು ಪಿಎಸ್ಐ ರಂಗನಾಥ್ ಅಂತರಗಟ್ಟಿ, ಎ ಎಸ್ ಐ .ಉಮೇಶ್ , ಎ ಎಸ್ ಐ ವಾಸಪ್ಪ,ಸಂಜಯ್ ಬಾಬು,ರಮೇಶ್ ಅನಿಲ್ ರವರು ವಾಹನ ತಪಾಸಣೆ ಮಾಡುತ್ತಿದ್ದಾಗ ಇನ್ನೋವಾ ಕಾರು KA 05-AF-0250 ಚಾಲಕ ಮಹೇಶ್ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದ್ದು,ಪ್ರಕರಣ ದಾಖಲಿಸಿ ನ್ಯಾಯಲಯಕ್ಕೆ ವರದಿ ಮಾಡಿದ್ದ ಹಿನ್ನಲೆಯಲ್ಲಿ ದಿನಾಂಕ 227/08/24 ರಂದು ಪ್ರಥಮ ದರ್ಜೆ ವ್ಯವಹಾರಗಳ ನ್ಯಾಯಾಲಯ ಮತ್ತು ಜೆಎಂಎಫ್ಸಿ ತೀರ್ಥಹಳ್ಳಿ ನ್ಯಾಯಲಯ ನ್ಯಾಯಾಧೀಶರು 10000 ರುಪಾಯಿ ದಂಡ ವಿಧಿಸಿ ಆದೇಶಿಸಿದ್ದಾರೆ.ಇನ್ನೂ ಒಂದೇ ತಿಂಗಳಿನಲ್ಲಿ 3 ಕೇಸ್ ದಾಖಲಾಗಿದ್ದು,ಸಂಚಾರ ನಿಯಮ ಮೀರುವ ವಾಹನ ಸವರರಿಗೆ ಇನ್ನು ಕಠಿಣ ಕ್ರಮ ಜರುಗಿಸಲು ಸಾರ್ವಜನಿಕರು ಒತ್ತಾಯಿಸಿದ್ದಾರೆ.
– ಶಿವಮೊಗ್ಗ : ಬಸ್ಸಲ್ಲಿ ಪ್ರಯಾಣಿಸುವಾಗ ಚಿನ್ನಾಭರಣ ಕಳವು
ಶಿವಮೊಗ್ಗ: ಶಿವಮೊಗ್ಗದ ನೆಹರೂ ರಸ್ತೆಯಲ್ಲಿರುವ ಜ್ಯುವೆಲ್ಲರಿ ಶಾಪ್ ನಲ್ಲಿ 3 ಗ್ರಾಂ 250 ಮಿಲಿಗ್ರಾಂ ಚಿನ್ನಾಭರಣ ಖರೀದಿಸಿದ್ದ ಮಹಿಳೆಯೋರ್ವರು ಶಿವಪ್ಪ ನಾಯಕ ವೃತ್ತಕ್ಕೆ ಬಂದು ಬಸ್ ನಲ್ಲಿ ಪ್ರಯಾಣಿಸುವಾಗ ಚಿನ್ನಾಭರಣ ಕಳುವಾಗಿರುವುದಾಗಿ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಆ.6 ರಂದು ಈ ಘಟನೆ ನಡೆದಿದೆ. ಚಿನ್ನ ಆಭರಣ ಖರೀದಿಸಿ ಗಾಂಧಿ ಬಜಾರ್ ನ ಶಿವಪ್ಪ ನಾಯಕ ಪ್ರತಿಮೆಯ ಬಸ್ ಸ್ಟಾಪ್ ನಿಂದ ಖಾಸಗಿ ನಗರ ಸಾರಿಗೆಯಲ್ಲಿ ಬಸ್ ಹತ್ತಿ ಸೀಟು ಹತ್ತಿ ಕುಳಿತಾಗ ಟಿಕೇಟ್ ಪಡೆಯಲು ಮುಂದಾಗ ಈ ಘಟನೆ ನಡೆದಿದೆ. ನಂತರ ಬೆಂಗಳೂರಿನಲ್ಲಿರುವ ಮಗಳಿಗೆ ಅನಾರೋಗ್ಯವಾದುದರಿಂದ ಮಗಳನ್ನ ನೋಡಿಕೊಂು ಬದ ನಂತರ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.