ಬಳ್ಳಾರಿ ಜೈಲಿಗೆ ದರ್ಶನ್: ಎಲ್ಲಾ ಜೈಲುಗಳು ಅಲರ್ಟ್!
– ಜೈಲು ಅವ್ಯವಹಾರ ಪ್ರಕರಣ ತನಿಖೆ ಜೋರು
– ದರ್ಶನ್ ಹೇಳಿದ್ದೇನು…? ಏನಿದು ಜೈಲು ಕಥೆ?
NAMMUR EXPRESS NEWS
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪ್ರಸ್ತುತ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಕನ್ನಡ ನಟ ದರ್ಶನ್ ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲು ಹಾಗೂ ಕೊಲೆ ಪ್ರಕರಣದ ಇತರ ಸಹ ಆರೋಪಿಗಳನ್ನು ರಾಜ್ಯದ ವಿವಿಧ ಜೈಲುಗಳಿಗೆ ಸ್ಥಳಾಂತರಿಸಲು ನ್ಯಾಯಾಲಯ ಅನುಮತಿ ನೀಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಜಿ ಪರಮೇಶ್ವರ ಇಬ್ಬರೂ, ದರ್ಶನ್ ಅವರನ್ನು ವರ್ಗಾವಣೆ ಮಾಡುವ ಆಯ್ಕೆಯನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಎಂದು ಸೂಚಿಸಿದರು, ಅವರು ಜೈಲಿನ ಹುಲ್ಲುಹಾಸಿನ ಮೇಲೆ ರೌಡಿಶೀಟರ್ ಸೇರಿದಂತೆ ಇತರ ಮೂವರ ಜೊತೆ ಸುತ್ತಾಡುತ್ತಿರುವ ಫೋಟೋ ವೈರಲ್ ಆಗಿದ್ದು, ಗದ್ದಲ ಎಬ್ಬಿಸಿದೆ.
ಅಲ್ಲದೆ, ದರ್ಶನ್ ಜೈಲಿನಿಂದ ವೀಡಿಯೋ ಕಾ ಮೂಲಕ ವ್ಯಕ್ತಿಯೊಬ್ಬನೊಂದಿಗೆ ಮಾತನಾಡಿರುವ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡತೊಡಗಿತ್ತು.
ದರ್ಶನ್ ನ್ಯಾಯಾಂಗ ಬಂಧನ ಆ.28ರಂದು ಮುಕ್ತಾಯವಾಗಲಿದ್ದು, ವಿಡಿಯೋ ಕಾನ್ಫರೆನ್ಸ್ ಮೂಲಕ ಇಂದು ನ್ಯಾಯಾಧೀಶರೆದುರು ಹಾಜರು ಪಡಿಸಲಾಗುತ್ತದೆ. ನ್ಯಾಯಾಂಗ ಬಂಧನ ಅವಧಿ 14 ದಿನ ವಿಸ್ತರಣೆಯಾಗುವ ಸಾಧ್ಯತೆ ಇದೆ. ಹೀಗಾಗಿ ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಅಪರಾಹ್ನ 3 ಗಂಟೆಗೆ ಪರಪ್ಪನ ಅಗ್ರಹಾರ ಜೈಲಿನಿಂದ ಹೊರತರುವ ಸಾಧ್ಯತೆಗಳಿರುತ್ತದೆ.
ವಿಡಿಯೋ ಕಾಲ್ ನಲ್ಲಿ ದರ್ಶನ್ ಅಭಿಮಾನಿ?
ಪರಪ್ಪನ ಅಗ್ರಹಾರದಲ್ಲಿರಾಜಾತಿಥ್ಯ ನೀಡಿರುವ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಜೈಲಿಗೆ ಬೇಗೂರು ಇನ್ಸಪೆಕ್ಟರ್ ಕೃಷ್ಣ ಕುಮಾರ್ ಆಗಮಿಸಿದ್ದು, ಲಾನ್ ನಲ್ಲಿ ಕುಳಿತಿದ್ದ ವಿಚಾರಕ್ಕೆ ಸಂಬಂಧಿಸಿ ತನಿಖೆ ನಡೆಸಿದ್ದಾರೆ.ಪ್ರಾಥಮಿಕ ಹಂತದ ತನಿಖೆ ನಡೆಸಲಾಗಿತ್ತು.
ಬಂಧನಕ್ಕೆ ಒಳಗಾಗಿರುವ ನಟ ದರ್ಶನ್ ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ನೀಡಿರುವುದರಿಂದ ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಗುತ್ತಿದೆ. ದರ್ಶನ್ ನ್ಯಾಯಾಂಗ ಬಂಧನ ಅವಧಿ ಆ. 28ರಂದು ಮುಕ್ತಾಯವಾಗಲಿದ್ದು, ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ ಬಳಿಕ ಸ್ಥಳಾಂತರ ಪ್ರಕ್ರಿಯೆ ನಡೆಯಲಿದೆ.
ಜೈಲು ಸಿಬ್ಬಂದಿ ಜೊತೆ ಅಳಲು ತೋಡಿಕೊಂಡ ದರ್ಶನ್!
ಈಗಾಗಲೇ ಸೆರೆಮನೆ ವಾಸದ ಕಷ್ಟ ಅನುಭವಿಸಿರುವ ಕುರಿತು ಜೈಲು ಸಿಬ್ಬಂದಿ ಜೊತೆ ದುಃಖ ವ್ಯಕ್ತಪಡಿಸಿದ್ದಾರೆ. ಇದೆಲ್ಲಾ ಬೇಕಿತ್ತಾ ಎಂದು ಅಳಲು ತೋಡಿಕೊಂಡಿದ್ದಾರೆ ಎನ್ನಲಾಗಿದೆ.
ನಟ ದರ್ಶನ್ ಅಭಿನಯದ ಚೌಕ ಚಿತ್ರವನ್ನು ಈ ಹಿಂದೆ ಬಳ್ಳಾರಿ ಜೈಲಿನಲ್ಲಿಯೇ ಚಿತ್ರೀಕರಣ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಅಲ್ಲಿನ ಖೈದಿಗಳ ಜೊತೆ ನಟ ಸಹಜ ಮಾತುಕತೆ ನಡೆಸಿದ್ದರು. ಬಳ್ಳಾರಿ ಜೈಲಿನ ಕಷ್ಟಗಳು, ಅಲ್ಲಿನ ವಾತಾವರಣದ ಬಗ್ಗೆ ಅಲ್ಲಿನ ಖೈದಿಗಳಿಂದ ತಿಳಿದುಕೊಂಡಿರುವ ದರ್ಶನ್ ಗೆ ಈಗ ತಾನೇ ಆ ಜೈಲಿಗೆ ಖೈದಿಯಾಗಿ ವರ್ಗಾವಣೆಯಾಗುತ್ತಿರುವುದು ಆತಂಕ ಹೆಚ್ಚಿಸಿದೆ ಎನ್ನಲಾಗಿದೆ.
ನನ್ನ ಪಾಡಿಗೆ ಾು ನನ್ನ ಕೊಠಡಿಯಲ್ಲಿ ಕುಳಿತಿದ್ದೆ. ಏಕಾಏಕಿ ನನ್ನ ಕೊಠಡಿಗೆ ಒರ್ವ ವ್ಯಕ್ತಿ ಬರುತ್ತಾನೆ. ಬಾಸ್ ನಿಮ್ಮ ಅಭಿಮಾನಿ ಬಾಸ್ ಪ್ಲೀಸ್ ಒಮ್ಮೆ ಮಾತನಾಡಿ ಅಂದ್ರು. ಅಭಿಮಾನಿ ಅಲ್ವಾ ಅಂತ ನಾನು ಊಟ ಆಯ್ತಾ ಅಂದೆ. ಹೇಗಿದ್ದೀರಾ ಬಾಸ್ ಅಂದ ನಾನು ಆರಾಮಾಗಿ ಇದ್ದೀನಿ ಅಂದೆ. ಅದು ಬಿಟ್ಟರೇ ನನಗೂ ಆ ವಿಡಿಯೋ ಕಾಲ್ ಗೂ ಸಂಬಂಧ ಇಲ್ಲ. ಮೊಬೈಲ್ ತಗೊಂಡು ಬಂದ ವ್ಯಕ್ತಿ ರೌಡಿಶೀಟರ್ ಅನ್ನೋದು ನನಗೆ ಗೊತ್ತಿಲ್ಲ. ನಾನು ಜೈಲಿನಲ್ಲಿ ಯಾವುದೇ ಮೊಬೈಲ್ ಬಳಕೆ ಮಾಡ್ತಾ ಇಲ್ಲ. ಫೋನ್ ನಲ್ಲಿ ಮಾತನಾಡಿದ ವ್ಯಕ್ತಿಯೂ ಯಾರು ಅನ್ನೋದು ಗೊತ್ತಿಲ್ಲ. ಬಹುಶ ಯಾವ ದಿನ ಮಾತನಾಡಿದ್ದು ಅಂತ ಸರಿಯಾಗಿ ಗೊತ್ತಿಲ್ಲ. ಸುಮಾರು 10- 15 ದಿನಗಳ ಹಿಂದೆ ಇರಬಹುದು ಎಂದು ವಿಚಾರಣೆ ವೇಳೆ ದರ್ಶನ್ ತಿಳಿಸಿದ್ದಾರೆ.
ದರ್ಶನ್ ಹೇಳಿಕೆ ದಾಖಲಿಸಿರುವ ಇನ್ಸ್ ಪೆಕ್ಟರ್ ಆ. 28ರಂದು ಮತ್ತೆ ಪರಪ್ಪನ ಅಗ್ರಹಾರದಲ್ಲಿ ವಿಚಾರಣೆ ನಡೆಸಲಿದ್ದಾರೆ. ಅವಶ್ಯಕತೆ ಇದ್ದರೆ ತನಿಖೆ ಭಾಗವಾಗಿ ಮತ್ತೆ ದರ್ಶನ್ ವಿಚಾರಣೆ ನಡೆಯಲಿದೆ ಎಂಬ ಮಾಹಿತಿ ಲಭ್ಯವಿದೆ.