ತೀರ್ಥಹಳ್ಳಿ ಕುವೆಂಪು ಶಾಲೆಯಲ್ಲಿ ಚೆಸ್, ಯೋಗ ಸ್ಪರ್ಧೆ
– ವಿವಿಧ ಶಾಲೆಗಳಿಂದ ಆಗಮಿಸಿದ ಮಕ್ಕಳು: ಆರಗ ಜ್ಞಾನೇಂದ್ರ ಉದ್ಘಾಟನೆ
– ಶಾಲಾ ಸಮಿತಿಯಿಂದ ನೂತನ ಪಟ್ಟಣ ಪಂಚಾಯತ್ ಪದಾಧಿಕಾರಿಗಳಿಗೆ ಸನ್ಮಾನ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣದ ಮುಖ್ಯ ಬಸ್ ನಿಲ್ದಾಣ ಹಿಂಭಾಗದ 6-14 ವರ್ಷ ಒಳಗಿನ ಚೆಸ್, ಯೋಗ ಸ್ಪರ್ಧೆ ಬುಧವಾರ ನಡೆಯಿತು. ಶಾಸಕ ಆರಗ ಜ್ಞಾನೇಂದ್ರ ಅವರು ಚೆಸ್, ಯೋಗ ಪಂದ್ಯಾವಳಿಯನ್ನು ಉದ್ಘಾಟನೆ ಮಾಡಿ ಮಾತನಾಡಿ, ತೀರ್ಥಹಳ್ಳಿ ಎಲ್ಲಾ ಕ್ಷೇತ್ರದಲ್ಲಿ ಮುಂದಿದೆ. ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮೂಲಕ ತೀರ್ಥಹಳ್ಳಿ ಹೆಸರು ಗಳಿಸಿದೆ. ಎಲ್ಲಾ ಶಿಕ್ಷಕರಿಗೆ ಅಭಿನಂದನೆಗಳು. ಯೋಗ ಮತ್ತು ಚೆಸ್ ಎರಡು ಕ್ರೀಡೆಗಳು ಮಕ್ಕಳ ಭವಿಷ್ಯಕ್ಕೆ ಅವಶ್ಯ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಗಣೇಶ್ ಅವರು ಮಾತನಾಡಿ, ಕುವೆಂಪು ಓದಿದ ಶಾಲೆಯಲ್ಲಿ ಯೋಗ, ಚೆಸ್ ಆಯೋಜನೆ ಮಾಡಿದ್ದೇವೆ. 150 ವಿದ್ಯಾರ್ಥಿಗಳು ವಿವಿಧ ಭಾಗದಿಂದ ಆಗಮಿಸಿದ್ದಾರೆ.
ಯೋಗ ಆರೋಗ್ಯ, ಚೆಸ್ ಬುದ್ದಿಮತ್ತೆಯನ್ನು ಹೆಚ್ಚಿಸುತ್ತದೆ. ಶೈಕ್ಷಣಿಕ ಹಾಗೂ ಕ್ರೀಡೆಯಲ್ಲಿ ತೀರ್ಥಹಳ್ಳಿ ತಾಲೂಕು ಜಿಲ್ಲೆಯಲ್ಲಿ ನಂ. 1 ಸ್ಥಾನ ಪಡೆದಿದೆ. ಎಲ್ಲಾ ಶಿಕ್ಷಕರ ಸಹಕಾರ, ಶಾಸಕರು, ಜನಪ್ರತಿನಿಧಿಗಳ ಸಹಕಾರ ತುಂಬಾ ಪ್ರಶಂಸನೀಯ. ಮಕ್ಕಳನ್ನು ನೈತಿಕವಾಗಿ, ಮಾನವೀಯತೆ ಮೂಲಕ ಪಾಠ ಮಾಡಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಎಸ್. ಡಿ. ಎಂ. ಸಿ ಅಧ್ಯಕ್ಷ ಸತೀಶ್ ಶೆಟ್ಟಿ, ಪಟ್ಟಣ ಪಂಚಾಯತ್ ರಹಮತುಲ್ಲ ಆಸಾದಿ, ಉಪಾಧ್ಯಕ್ಷರಾದ ಗೀತಾ ರಮೇಶ್, ಮಹಾಬಲೇಶ್ವರ ಹೆಗಡೆ, ಜ್ಯೋತಿ ಗಣೇಶ್, ಜಿಲ್ಲಾ ಶಿಕ್ಷಕರ ಸಂಘ ಖಜಾಂಚಿ ಮಂಜುನಾಥ್, ದೈಹಿಕ ಶಿಕ್ಷಕರ ಸಂಘದ ಚಂದ್ರಪ್ಪ, ಶಾಲೆ ಮುಖ್ಯ ಉಪಧ್ಯಾಯರಾದ ನಾಗರಾಜ್, ಎಸ್. ಡಿ. ಎಂ. ಸಿ ಸದಸ್ಯರು ಇದ್ದರು. ಸಂಗೀತ ಸ್ವಾಗತಿಸಿದರು.
ಶಾಲಾ ಸಮಿತಿಯಿಂದ ನೂತನ ಪಟ್ಟಣ ಪಂಚಾಯತ್ ಅಧ್ಯಕ್ಷ ಅಸಾದಿ ಹಾಗೂ ಉಪಾಧ್ಯಕ್ಷರಾದ ಗೀತಾ ರಮೇಶ್ ಅವರನ್ನು ಸನ್ಮಾನಿಸಲಾಯಿತು.