ಆನ್ಲೈನ್ ಗೇಮ್ : ವಿದ್ಯಾರ್ಥಿಗಳು, ಯುವ ಜನತೆ ಬದುಕು ಡಮಾರ್!
– ಕಾಲೇಜಿಗೂ ಹೋಗದೆ, ಕೆಲಸವೂ ಮಾಡದೆ ಆನ್ಲೈನ್ ಗೇಮ್ ಹುಚ್ಚಾಟ
– ಪೋಷಕರೇ ವಿದ್ಯಾರ್ಥಿಗಳ ಬಗ್ಗೆ ಎಚ್ಚರ
– ಭವಿಷ್ಯ ಹಾಳು ಮಾಡುವ ಆಪ್ ಬಂದ್ ಏಕಿಲ್ಲ?
NAMMUR EXPRESS NEWS
ಭಾರತಕ್ಕೆ ಯುವ ಶಕ್ತಿಯೇ ಶಕ್ತಿ. ಆದರೆ ಇದೀಗ ಆನ್ಲೈನ್ ಆಟ, ಕೆಲವು ಸೋಷಿಯಲ್ ಮೀಡಿಯಾ ಚಟದಿಂದ ಯುವ ಜನತೆಯ ಭವಿಷ್ಯ ಸಂಕಷ್ಟಕ್ಕೆ ಸಿಲುಕಿದೆ.
ಸಾವಿರಾರು ಯುವಕ ಯುವತಿಯರು ಆನ್ಲೈನ್ ಚಟಕ್ಕೆ ಬಲಿಯಾಗುತ್ತಿದ್ದಾರೆ. ಪಬ್ಜಿಯಂತಹ ಗೇಮ್ ಬ್ಯಾನ್ ಆದರೂ ಕ್ರಿಕೆಟ್ ಬೆಟ್ಟಿಂಗ್ ಆಪ್, ಕೆಲವು ಆಪ್ ಯುವ ಜನರು, ವಿದ್ಯಾರ್ಥಿಗಳ ಭವಿಷ್ಯ ತೆಗೆಯುತ್ತಿವೆ. ಈಗಾಗಲೇ ಸಾವಿರಾರು ಯುವಕರು ಈ ಚಟಕ್ಕೆ ಬಿದ್ದು ಜೀವ ಕಳೆದುಕೊಂಡಿದ್ದಾರೆ.
ಕಾಲೇಜಿಗೆ ಜ ಹಾಕಿ ಆಟ!
ಶಾಲಾ ಕಾಲೇಜಿಗೆ ರಜೆ ಹಾಕಿ ವಿದ್ಯಾರ್ಥಿಗಳು ಖಾಸಗಿ ಹೋಟೆಲ್, ಬಸ್ ಸ್ಟ್ಯಾಂಡ್, ಪಾರ್ಕ್ ನಲ್ಲಿ ಕುಳಿತು ಫ್ರೀ ಫೈರ್, ಪಬ್ಜಿ, ಕ್ರಿಕೆಟ್ ಬೆಟ್ಟಿಂಗ್ ಗೇಮ್ ಆಟ ಆಡುತ್ತಿದ್ದಾರೆ. ಈಗ ಎಲ್ಲಾ ಕಡೆ ಈ ಬಗ್ಗೆ ಸುದ್ದಿಯಾಗುತ್ತಿದೆ.
ಹೋಟೆಲ್, ಪಾರ್ಕ್, ಬಸ್ ಸ್ಟ್ಯಾಂಡ್ ಈ ಭಾಗಗಳಲ್ಲಿ ಆಟ ಆಡುವ ವಿದ್ಯಾರ್ಥಿಗಳು ವಾರಗಟ್ಟಲೇ ಕಾಲೇಜಿಗೆ ಬರುತ್ತಿಲ್ಲ ಎಂಬ ದೂರು ಕೂಡ ಕೇಳಿ ಬಂದಿದೆ.
ಒಂದೇ ಕಡೆ 25 ಹುಡುಗರ ಗ್ಯಾಂಗ್!
ಇತ್ತೀಚಿಗೆ ಶಿವಮೊಗ್ಗ ಜಿಲ್ಲೆ ಸಾಗರ ಕಾಲೇಜಿನ ಪ್ರಿನ್ಸಿಪಾಲ್ ತಮ್ಮ ಮಗ ಕಾಲೇಜಿಗೆ ಬರುತ್ತಿಲ್ಲ ಎಂದು ಪೋಷಕರೊಬ್ಬರಿಗೆ ದೂರು ನೀಡಿದ್ದಾರೆ. ದೂರಿನ ಅಧಾರದ ಮೇಲೆ ಮಗನನ್ನ ಹುಡುಕಿ ಬಂದ ತಾಯಿಗೆ ಇಪ್ಪತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಒಂದೆಡೆ ಸೇರಿರುವುದು ಪತ್ತೆಯಾಗಿದೆ. ಕಾಲೇಜುಗಳಿಗೆ ರಜೆ ಹಾಕಿ ಆನ್ ಲೈನ್ ಗೇಮ್ ನಲ್ಲಿ ತೊಡಗಿಕೊಂಡಿದ್ದಾರೆ. ಸಾಗರ ಖಾಸಗಿ ಹೋಟೆಲ್ ನಲ್ಲಿ ತಾಯಿಯನ್ನ ಕಂಡ ವಿದ್ಯಾರ್ಥಿಗಳು ಎದ್ದುಬಿದ್ನೋ ಎಂದು ವಿದ್ಯಾರ್ಥಿಗಳು ಪರಾರಿಯಾಗಿದ್ದಾರೆ. ಈ ವಿಡಿಯೊ ವೈರಲ್ ಆಗಿದೆ.
ಕೇಂದ್ರ, ರಾಜ್ಯ ಸರ್ಕಾರ ಮೌನ!
ದೇಶ, ರಾಜ್ಯಕ್ಕೆ ಆಸ್ತಿಯಾಗಬೇಕಿದ್ದ ಯುವ ಸಮುದಾಯ ಈ ಗೇಮ್,. ಕೆಲ ಸೋಷಿಯಲ್ ಮೀಡಿಯಾ ಚಟಕ್ಕೆ ಬಿದ್ದು ದೇಶಕ್ಕೆ ನಷ್ಟವಾಗುವುದಲ್ಲದೆ ಕುಟುಂಬಕ್ಕೂ ಹೊರೆಯಾಗುತ್ತಿದ್ದಾರೆ. ಆದರೆ ಈ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಯಾವುದೇ ನಿಯಮ ತಂದಿಲ್ಲ. ಕ್ರಿಕೆಟ್ ಬೆಟ್ಟಿಂಗ್ ಆಪ್ ಅನ್ನು ಕೇಂದ್ರ ಸರ್ಕಾರ ಅನುಮತಿ ನೀಡುತ್ತಿದೆ. ಇದರಿಂದ ಸಾವಿರಾರು ಕುಟುಂಬಗಳು ಬೀದಿಗೆ ಬಿದ್ದಿವೆ. ಜತೆಗೆ ದೇಶದ ಮಾನವ ಸಂಪನ್ಮೂಲ ವ್ಯಯವಾಗುತ್ತಿದೆ.