ಹೆಂಡತಿಯೇ ಗಂಡನಿಗೆ ಪ್ರೇಯಸಿ ಜತೆ ಅದ್ಧೂರಿ ಮದುವೆ ಮಾಡಿಸಿದಳು!
• ಬುದ್ಧಿಮಾಂದ್ಯ ಯುವತಿ ಜತೆ ಮದುವೆ
• ಎರಡನೇ ಮದುವೆ ಸುದ್ದಿ ಎಲ್ಲೆಡೆ ವೈರಲ್!
NAMMUR EXPRESS NEWS
ಯಾವುದೇ ಹೆಣ್ಣಾದ್ರೂ ತನ್ನ ಗಂಡನನ್ನು ಬೇರೋಬ್ಬರ ಜೊತೆ ಹಂಚಿಕೊಳ್ಳಲು ಇಷ್ಟಪಡುವುದಿಲ್ಲ. ಇನ್ನೂ ಪತಿ ಎರಡನೇ ಮದುವೆಯಾಗುತ್ತೇನೆ ಎಂದು ಬಯಸಿದ್ದರೆ ಆತನ ಕಥೆ ಮುಗಿಯಿತೆಂದೇ ಅರ್ಥ. ಇಲ್ಲೊಬ್ಬಳು ತ್ಯಾಗಮಯಿ ಪತ್ನಿ ತಾನೇ ಮುಂದೆ ನಿಂತು ತನ್ನ ಗಂಡನಿಗೆ ಅದ್ಧೂರಿಯಾಗಿ ಮದುವೆ ಮಾಡಿಸಿದ್ದಾಳೆ!.
ಹೌದು ತನ್ನ ಗಂಡನನ್ನು ಬುದ್ಧಿಮಾಂದ್ಯ ಯುವತಿಯೊಬ್ಬಳು ಮನಸಾರೆ ಇಷ್ಟಪಟ್ಟಂತಹ ವಿಷಯ ತಿಳಿದ ಈಕೆಯನ್ನು ಆ ಯುವತಿಗೆ ತನ್ನ ಪತಿಯೊಂದಿಗೆಯೇ ಮದುವೆ ಮಾಡಿಸಿದ್ದಾಳೆ. ಈ ಸುದ್ದಿ ಇದೀಗ ಭಾರೀ ವೈರಲ್ ಆಗುತ್ತಿದೆ.
ಪತಿಯ ವಿಚಾರದಲ್ಲಿ ಪ್ರತಿಯೊಬ್ಬ ಹೆಣ್ಣು ಕೂಡಾ ಪೊಸೆಸಿವ್ ಆಗಿರ್ತಾಳೆ. ತನ್ನ ಗಂಡನನ್ನು ಯಾರಾದ್ರೂ ಬುಟ್ಟಿಗೆ ಹಾಕಿಕೊಂಡರೆ ಅಥವಾ ಗಂಡನೇ ಬೇರೊಬ್ಬ ಮಹಿಳೆಯ ಜೊತೆ ಸಂಬಂಧ ಇಟ್ಟುಕೊಂಡರೆ ಹೆಂಡತಿಯಾದವಳು ಈ ವಿಚಾರವನ್ನು ಯಾವುದೇ ಕಾರಣಕ್ೂ ಹಿಸಿಕೊಳ್ಳುವುದಿಲ್ಲ. ಕೋಪ ಮಾಡಿಕೊಳ್ಳುತ್ತಾಳೆ. ಆದ್ರೆ ಇಲ್ಲಿ ಇದಕ್ಕೆ ತದ್ವಿರುದ್ಧವಾದ ವಿಚಿತ್ರ ಘಟನೆಯೊಂದು ನಡೆದಿದ್ದು, ಪತ್ನಿಯೇ ತನ್ನ ಮುದ್ದಿನ ಗಂಡನಿಗೆ ಅದ್ಧೂರಿಯಾಗಿ ಎರಡನೇ ಮದುವೆ ಮಾಡಿಸಿದ್ದಾಳೆ. ಹೌದು ತನ್ನ ಗಂಡನನ್ನು ಬುದ್ಧಿಮಾಂದ್ಯ ಯುವತಿಯೊಬ್ಬಳು ಮನಸಾರೆ ಇಷ್ಟಪಟ್ಟಂತಹ ವಿಷಯ ತಿಳಿದ ಈಕೆ ಆ ಯುವತಿಗೆ ತನ್ನ ಪತಿಯೊಂದಿಗೆಯೇ ಮದುವೆ ಮಾಡಿಸಿದ್ದಾಳೆ. ಈ ಸುದ್ದಿ ಇದೀಗ ಭಾರೀ ವೈರಲ್ ಆಗುತ್ತಿದೆ.
ಉಗ್ಗಂಪಲ್ಲಿ ಗ್ರಾಮದ ಸುರೇಶ್ ಮತ್ತು ಸರಿತಾ ಎಂಬವರು ಕೆಲ ವರ್ಷಗಳ ಹಿಂದೆ ಮದುವೆಯಾಗಿದ್ದು, ಇವರು ಮಗ ಮತ್ತು ಮಗಳೊಂದಿಗೆ ಸುಂದರವಾದ ಜೀವನ ನಡೆಸುತ್ತಿದ್ದರು. ಇತ್ತೀಚಿಗೆ ಮಹಬೂಬಾಬಾದ್ ಪಟ್ಟಣದಲ್ಲಿರುವ ಸುರೇಶ್ ಸಂಬಂಧಿ ಮಗಳಾದ ಸಂಧ್ಯಾ ಎಂಬವಳು ತನ್ನ ಸೋದರ ಮಾವನಾದ ಸುರೇಶ್ ಅವರನ್ನು ಪ್ರೀತಿಸಲು ಶುರು ಮಾಡಿದ್ದಾಳೆ. ಈ ವಿಷಯ ತಿಳಿದು ಆಕೆಯ ಪೋಷಕರು, “ನನ್ನ ಮಗಳಿಗೆ ನಿನ್ನ ಗಂಡನೊಂದಿಗೆ ಮದುವೆ ಮಾಡಿಸುವೆಯಾ”? ಎಂದು ಸರಿತಾ ಬಳಿ ಕೇಳಿಕೊಂಡಿದ್ದಾರೆ. ಸಂಧ್ಯಾ ಬುದ್ಧಿಮಾಂದ್ಯ ಯುವತಿಯಾಗಿರುವುದರಿಂದ ಆಕೆಯ ಇಷ್ಟವನ್ನು ನೆರವೇರಿಸಲು ಹಾಗೂ ಆಕೆಗೆ ಒಂದೊಳ್ಳೆ ಜೀವನವನ್ನು ಕಲ್ಪಿಸಬೇಕೆಂದು ಮಾನವೀಯ ದೃಷ್ಟಿಯಿಂದ ಸರಿತಾ ಈ ನಿರ್ಧಾರಕ್ಕೆ ಒಪ್ಪಿಗೆ ನೀಡಿ, ಆಗಸ್ಟ್ 28 ಹತ್ತಿರದ ದೇವಸ್ಥಾನದಲ್ಲಿ ಬಂಧು ಮಿತ್ರರ ಸಮ್ಮುಖದಲ್ಲಿ ಪತಿ ಸುರೇಶ್ ಹಾಗೂ ಸಂಧ್ಯಾಗೆ ಅದ್ಧೂರಿಯಾಗಿ ಮದುವೆ ಮಾಡಿಸಿದ್ದಾರೆ. ಈ ಎರಡನೇ ಮದುವೆ ಸುದ್ದಿ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.