- ಮದ್ಯ ಬೇಡಿಕೆಯಲ್ಲಿ ಭಾರೀ ಕುಸಿತ
- ಹಣ ಇಲ್ಲ: ಎಣ್ಣೆ ಖರೀದಿಗೆ ಹಿಂದೇಟು!
- ಕುಡಿತ ಬಿಡಿ..
ಮನೆ ಕಾಪಾಡಿ..!
ಬೆಂಗಳೂರು: ರಾಜ್ಯದಲ್ಲಿ ಕರೋನಾ ಕರ್ಫ್ಯೂ ಜಾರಿಯಿಂದ ಮದ್ಯ ಮಾರಾಟಕ್ಕೆ ಭಾರೀ ಹೊಡೆತ ಬಿದ್ದಿದ್ದು, ಸಾಮಾನ್ಯ ದಿನಗಳಿಗೆ ಹೋಲಿಕೆ ಮಾಡಿದರೆ ನಿತ್ಯ ₹30ರಿಂದ ₹34 ಕೋಟಿ ನಷ್ಟವಾಗುತ್ತಿದೆ ಎಂದು ರಾಜ್ಯ ಅಬಕಾರಿ ಇಲಾಖೆ ಮಾಹಿತಿ ನೀಡಿದೆ.
ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ಟಫ್ರೂಲ್ಸ್ ಜಾರಿಯಲಿದ್ದು, ಮದ್ಯ ಮಾರಾಟಕ್ಕೆ ಬೆಳಗ್ಗೆ 6 ರಿಂದ10 ಗಂಟೆವರಿಗೆ ಮಾತ್ರ ಅವಕಾಶ ನೀಡಲಾಗಿದೆ. ಪಾರ್ಸೆಲ್ ರೂಪದಲ್ಲಿ ಮಾತ್ರ ಮದ್ಯ ಮಾರಾಟ ಮಾಡಲು ಅನುಮತಿ ಇರುವುದರಿಂದ ಜನ ಮದ್ಯ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಈ ಹಿಂದೆ ಸಾಮಾನ್ಯ ದಿನಗಳಲ್ಲಿ ಪ್ರತಿ ದಿನ ₹65 ಕೋಟಿಯಿಂದ ರಿಂದ ₹70 ಕೋಟಿ ಮದ್ಯ ವಹಿವಾಟು ನಡೆಯುತ್ತಿತ್ತು. ಆದರೆ ಈಗ ಸರಿ ಸುಮಾರು ₹45 ಕೋಟಿ ಮದ್ಯ ಮಾರಾಟವಾಗುತ್ತಿದೆ. ಇದರಿಂದ ರಾಜ್ಯದ ಆರ್ಥಿಕ ಮೂಲ ಭಾರಿ ಪ್ರಮಾಣದಲ್ಲಿ ಕುಸಿತವಾಗಿದ್ದು, ಸಾಮಾನ್ಯ ದಿನಗಳಲ್ಲಿ ಹೋಲಿಕೆ ಮಾಡಿದರೆ ನಿತ್ಯ₹ 30 ರಿಂದ₹34 ಕೋಟಿ ನಷ್ಟವಾಗುತ್ತಿದೆ ಎಂದು ಅಬಕಾರಿ ಇಲಾಖೆ ತಿಳಿಸಿದೆ.
ಹಳ್ಳಿ ಹಳ್ಳಿಯ ಅಂಗಡಿ, ಮನೆ ಮನೆಯಲ್ಲಿ ಕಳ್ಳ ಮದ್ಯ!: ರಾಜ್ಯದ ಬಹುತೇಕ ಊರಿನ ಹಳ್ಳಿಗಳ ದಿನಸಿ ಅಂಗಡಿ, ಮನೆಗಳಲ್ಲಿ ಅಕ್ರಮ ಮದ್ಯ ಮಾರಾಟವಾಗುತ್ತಿದೆ. ಈ ಬಗ್ಗೆ ಆಡಳಿತ ಸುಮ್ಮನಿದೆ.
ಮನೆಯಲ್ಲಿ ಹಿಂಸೆ: ಕರೋನಾ ಸಂದರ್ಭದಲ್ಲಿ ಮನೆ ಮಕ್ಕಳು, ಕುಟುಂಬ ಎಲ್ಲಾ ಒಟ್ಟಿಗೆ ಇದೆ. ಇಂತಹ ಸಂದರ್ಭದಲ್ಲಿ ಕುಡಿತದಿಂದ ಲಕ್ಷಾಂತರ ಮನೆಗಳು ನೆಮ್ಮದಿ ಕಳೆದುಕೊಂಡಿವೆ. ತುತ್ತು ಊಟಕ್ಕೂ ಪರದಾಟ ನಡೆಸುತ್ತಿರುವ ಈ ಕಾಲದಲ್ಲಿ ಮದ್ಯ ಅನಿವಾರ್ಯ ಅಲ್ಲ ಎಂಬುದನ್ನು ಎಲ್ಲರೂ ಮನಗಾಣಬೇಕಿದೆ.
ಮದ್ಯ ಬಂದ್ ಮಾಡಿದ್ರು ಓಕೆ ಅಲ್ಲವೇ..?: ಸರ್ಕಾರ ತಲೆ ಇರೋರನ್ನು ಇಟ್ಟುಕೊಳ್ಳಬೇಕು. ಮದ್ಯದಿಂದ ಆದಾಯ ಆಗುತ್ತದೆ ಎಂಬ ಯೋಚನೆ ಮಾತ್ರ ಮಾಡುತ್ತೆ, ಮದ್ಯದಿಂದ ಆಗುವ ನಷ್ಟ ಯಾವತ್ತೂ ಲೆಕ್ಕ ಹಾಕಿಲ್ಲ. ಕೋಟಿ ಕೋಟಿ ಜನ ಮದ್ಯದಿಂದ ತಮ್ಮ ಜೀವ, ಜೀವನ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಮದ್ಯದಿಂದಲೇ ಲಾಭ ಎನ್ನುವ ಯೋಚನೆಯಿಂದ ಹೊರ ಬರಬೇಕು ಅಲ್ವೇ..? ನೀವು ಯೋಚಿಸಿ..!.
ಎಲ್ಲಾ ಸುದ್ದಿಗಳಿಗೆ Nammur Express ಫೇಸ್ಬುಕ್ ಹಾಗೂ ಯೂಟ್ಯೂಬ್ ವೀಕ್ಷಿಸಿ…!..
ಸುದ್ದಿ ಪಡೆಯಲು 9481949101 ಗೆ ನಿಮ್ಮ ಹೆಸರು, ಊರು, ತಾಲ್ಲೂಕು ವಾಟ್ಸಾಪ್ ಮಾಡಿ…!..ಎಲ್ಲರಿಗಿಂತ ಶೇರ್ ಮಾಡಿರಿ..!.