ಹೋಟೆಲ್ ಕಾರ್ಮಿಕರಿಗೆ ಶುಭ ಸುದ್ದಿ..!
– ಹೋಟೆಲ್ ಕಾರ್ಮಿಕರಿಗೂ ಕಾರ್ಮಿಕರ ಕಾರ್ಡ್, ಸರ್ಕಾರದಿಂದ ಸೌಲಭ್ಯ
– ಸರ್ಕಾರ ಹೋಟೆಲ್ ಕಾರ್ಮಿಕರಿಗೆ ನೀಡಿರುವ ಸೌಲಭ್ಯ ಏನೇನು?
– ಸೆ.18ಕ್ಕೆ ಎಲ್ಲಾ ಜಿಲ್ಲಾ ಹೋಟೆಲ್ ಕಾರ್ಮಿಕರ ಸಂಘದ ಪದಾಧಿಕಾರಿಗಳ ನೇಮಕ, ಉಚಿತ ಸದಸ್ಯತ್ವ ಅಭಿಯಾನ
NAMMUR EXPRESS NEWS
ಬೆಂಗಳೂರು: ಹೋಟೆಲ್ ಕಾರ್ಮಿಕರ ಬಹು ದಿನದ ಬೇಡಿಕೆ ಹೋಟೆಲ್ ಕಾರ್ಮಿಕರಿಗೂ ಕಾರ್ಮಿಕರ ಕಾರ್ಡ್ ಹಾಗೂ ಸರ್ಕಾರದಿಂದ ಸೌಲಭ್ಯದ ಕನಸು ಈಗ ನನಸಾಗಿದೆ.
ಸರಕಾರ ಹೋಟೆಲ್ ಕಾರ್ಮಿಕರಿಗೆ ಲೇಬರ್ ಕಾರ್ಡ್ ವಿತರಿಸಲು ಸಿದ್ಧತೆ ನಡೆಸುತ್ತಿದೆ, ಹಾಗೂ ಕೆಲವು ಯೋಜನೆ ಈಗಾಗಲೇ ಬಿಡುಗಡೆ ಮಾಡಿದೆ.
ಸರ್ಕಾರ ಹೋಟೆಲ್ ಕಾರ್ಮಿಕರಿಗೆ ನೀಡಿರುವ ಸೌಲಭ್ಯ ಏನೇನು?
1. ಹೋಟೆಲ್ ಕಾರ್ಮಿಕರು ಯಾವುದೇ ಅವಘಡದಿಂದ ಮರಣ ಹೊಂದಿದರೆ ಅಂತ ಹೋಟೆಲ್ ಕಾರ್ಮಿಕರ ಕುಟುಂಬಕ್ಕೆ ಒಂದು ಲಕ್ಷ ರೂಪಾಯಿ ಅುದಾನ ೀಡತ್ತಿದೆ
2. ಹೋಟೆಲ್ ಕಾರ್ಮಿಕರು ಅವಘಡಕ್ಕೆ ಒಳಗಾಗಿ ಕೆಲಸ ಮಾಡಲು ಆಗದ ಪರಿಸ್ಥಿತಿ ಅಂಥವರಿಗೆ ತಲಾ ಒಂದು ಲಕ್ಷ ರೂಪಾಯಿ ಅನುದಾನ ಕೊಡುತ್ತಿದೆ.
3. ಹೋಟೆಲ್ ಕಾರ್ಮಿಕರು ಅವಘಡಕ್ಕೆ ಒಳಗಾದಾಗ ವೈದ್ಯಕೀಯ ಖರ್ಚು ವೆಚ್ಚಕ್ಕಾಗಿ 50,000 ರೂ.ಬಿಡುಗಡೆ ಮಾಡುತ್ತಿದೆ
4. ಹೋಟೆಲ್ ಕಾರ್ಮಿಕರು ಮರಣ ಹೊಂದಿದರೆ ಸ್ಮಶಾನದ ಕಟ್ಟುವೆಚ್ಚವಾಗಿ 10,000 ರೂ.ಅನುದಾನ ನೀಡುತ್ತಿದೆ
ಸದ್ಯದ ಮಟ್ಟಿಗೆ ಈ ನಾಲ್ಕು ಅನುದಾನ ಸರಕಾರದ ವತಿಯಿಂದ ಹೋಟೆಲ್ ಕಾರ್ಮಿಕರಿಗೆ ಬಿಡುಗಡೆ ಮಾಡಿದ್ದು, ಮುಂದೆ ನಾನಾ ವಿಧದಲ್ಲಿ ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ. ಇದರ ಪ್ರಯೋಜನವನ್ನು ಪಡೆಯಲು ಹೋಟೆಲ್ ಕಾರ್ಮಿಕರು ಕರ್ನಾಟಕ ಹೋಟೆಲ್ ಕಾರ್ಮಿಕರ ಸಂಘ(ನೋ.) ಇದರ ಮೂಲಕ ಅರ್ಜಿ ತುಂಬಿಸಲು ಸರಕಾರದ ಕಾರ್ಮಿಕ ಇಲಾಖೆಯಿಂದ ಸೂಚನೆ ಬಂದಿದೆ .
ಮೊದಲು ಅರ್ಜಿ ತುಂಬಿಸಿದವರಿಗೆ ಮೊದಲ ಅವಕಾಶ, ನಮ್ಮ ಸಂಘಟನೆಯಿಂದ ಗರಿಷ್ಠ 25,000 ಅರ್ಜಿ ಸಲ್ಲಿಸಲು ಎಲ್ಲಾ ರೀತಿಯ ತಯಾರಿ ನಡೆಯುತ್ತಿದೆ.
ಹಾಗಾಗಿ ಕಾಲಾವಕಾಶ ತುಂಬಾ ಕಡಿಮೆ ಇರುವುದರಿಂದ ಹೋಟೆಲ್ ಕಾರ್ಮಿಕರು ತ್ವರಿತ ಗತಿಯಲ್ಲಿ ಸಂಘಟನೆಯಿಂದ ನೀಡುತ್ತಿರುವ ಅರ್ಜಿ ಫಾರ್ಮನ್ನು ತುಂಬಿ ಮಾಡಿ, ಆಧಾರ್ ಕಾರ್ಡ್ ಕಾಪಿ ಹಾಗೂ ಎರಡು ಫೋಟೋವನ್ನು ಕಡ್ಡಾಯವಾಗಿ ಲಗತ್ತಿಸಿ ಸಂಘಟನೆಯ ಕೇಂದ್ರ ಕಚೇರಿಯ ಅಡ್ರೆಸ್ಸಿಗೆ ಅಥವಾ ಜಿಲ್ಲಾ ಪದಾಧಿಕಾರಿಗಳಿಗೆ ಆದಷ್ಟು ಬೇಗ ನೀಡಬೇಕಾಗಿ ವಿನಂತಿ.
ವಿಶೇಷ ಸೂಚನೆ
1. ಈ ಅರ್ಜಿ ಸರಕಾರಕ್ಕೆ ಸಲ್ಲಿಸಲು ಮಾತ್ರ ಉಪಯೋಗಿಸಲಾಗುವುದು
2. ಸಂಘಟನೆಯ ಸದಸ್ಯತ್ವ ಪಡೆಯಲು ಇಚ್ಚಿಸಿದವರು ಮಾತ್ರ ರೂಪಾಯಿ 200 ನೀಡಿ ಸಂಘಟನೆಯ ಒರ್ಜಿನಲ್ ಐಡಿ ಕಾರ್ಡ್ ಪಡೆದುಕೊಳ್ಳಬಹುದು.
3. ಸರಕಾರಕ್ಕೆ ನೀಡಲು ಅರ್ಜಿ ತುಂಬಿಸಿದಲ್ಲಿ ಯಾವುದೇ ಶುಲ್ಕ ನೀಡಬೇಕಾಗಿಲ್ಲ.
4. ಹೋಟೆಲ್ ಕಾರ್ಮಿಕರು ಎಲ್ಲರೂ ಕಡ್ಡಾಯವಾಗಿ ಅರ್ಜಿ ತುಂಬಿಸಿ. ಸರಕಾರಕ್ಕೆ ನಮ್ಮ ಗಣತಿ ತೋರಿಸಲು ಒಳ್ಳೆಯ ಅವಕಾಶ.
ಕರ್ನಾಟಕ ಹೋಟೆಲ್ ಕಾರ್ಮಿಕರ ಸಂಘ
ಜಿಲ್ಲಾ ಕಮಿಟಿ ಪುನರ ರಚನೆ ಹಾಗೂ ಪದಾಧಿಕಾರಿಗಳ ಆಯ್ಕೆ
ಕರ್ನಾಟಕದ ಎಲ್ಲಾ ಜಿಲ್ಲೆಗಳ ಪುನರ್ ರಚನೆ ಹಾಗೂ ಪದಾಧಿಕಾರಿಗಳ ಆಯ್ಕೆ ಪ್ರಕರಿಯೆ ಿನಾಂಕ 18.09.2024 ಬುಧವಾರ ಬೆಳಗ್ಗೆ 11 ರಿಂದ ಸಂಜೆ 5 ಗಂಟೆವರೆಗೆ ನಡೆಯಲಿದ್ದು ಹೋಟೆಲ್ ಕಾರ್ಮಿಕರ ಒಳಿತಿಗಾಗಿ ನಿಸ್ವಾರ್ಥವಾಗಿ ಸೇವೆ ಮಾಡುವ ಮನೋಭಾವವುಳ್ಳ ಆಸಕ್ತ ಅಭ್ಯರ್ಥಿಗಳು ಬಂದು ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿ ಜವಾಬ್ದಾರಿಗಳನ್ನು ತೆಗೆದುಕೊಳ್ಳಬಹುದು.
ಉಚಿತ ಸದಸ್ಯತ್ವ ಅಭಿಯಾನ
ಸೆ.18ರ ಬೆಳಿಗ್ಗೆ 11 ರಿಂದ ಸಂಜೆ 5 ಗಂಟೆವರೆಗೆ ಉಚಿತ ಸದಸ್ಯತ್ವ ಅಭಿಯಾನವಿದ್ದು ಹೋಟೆಲ್ ಕಾರ್ಮಿಕರಿಗೆ ಸರ್ಕಾರದಿಂದ ಕೆಲವೊಂದು ಸೌಲಭ್ಯಗಳನ್ನು ಒದಗಿಸಿದ್ದು ಅದರ ಪ್ರಯೋಜನವನ್ನು ಪಡೆಯಲು ಕಡ್ಡಾಯವಾಗಿ ಸದಸ್ಯತ್ವವನ್ನು ನೊಂದಾಯಿಸಿಕೊಳ್ಳಬೇಕಾಗಿದೆ.
ಹೆಚ್ಚಿನ ಹೋಟೆಲ್ ಕಾರ್ಮಿಕರಿಗೆ ತಲುಪಿಸಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಹೋಟೆಲ್ ಕಾರ್ಮಿಕರು ಸದಸ್ಯತ್ವ ಪಡೆದುಕೊಂಡು ಸರ್ಕಾರದ ಸೌಲಭ್ಯಗಳನ್ನು ಪಡೆಯಬಹುದು.
ಸದಸ್ಯತ್ವ ಅಭಿಯಾನದ ಸ್ಥಳ: ಅನಘ ಗ್ರ್ಯಾಂಡ್,
,ಆದ್ರಿಕಾ ಪಾರ್ಟಿ ಹಾಲ್
ಉತ್ತರಹಳ್ಳಿ, ಬೆಂಗಳೂರು