- ಕರೋನಾ ಸಂಕಷ್ಟದಲ್ಲಿ ರಾಜಕೀಯ ಧರಣಿ ಏಕೆ..?
- ಜನರ ಜೀವನಮರಣ ಹೋರಾಟಕ್ಕೆ ನೇರವಾಗಿ..!
- ರಾಜಕೀಯ ಬಿಡಿ.. ಜನರ ಕೆಲಸ ಮಾಡಿ..!
ನವ ದೆಹಲಿ: ದೇಶದಲ್ಲಿ ಚುನಾವಣೆ ನಡೆಸಿದ್ದೆ ತಪ್ಪು. ಮತದಾನದಿಂದ ದೇಶದಲ್ಲಿ ಕರೋನಾ ಹೆಚ್ಚಿರುವ ನಡುವೆ ಇದೀಗ ಚುನಾವಣಾ ಫಲಿತಾಂಶದ ದಿನ ಪಶ್ಚಿಮ ಬಂಗಾಳದಲ್ಲಿ ನಡೆದ ಹಿಂಸಾಚಾರವನ್ನು ಖಂಡಿಸಿ ದೇಶದಾದ್ಯಂತ ಮೇ 5ರಂದು ಧರಣಿ ಮಾಡುವುದಾಗಿ ಬಿಜೆಪಿ ತಿಳಿಸಿದೆ. ದೇಶ ಅಳುತ್ತಿರುವ ಪಕ್ಷದ ಈ ನಿರ್ಧಾರ ಇದೀಗ ಜನರ ಪಿತ್ತ ನೆತ್ತಿಗೆರಿಸಿದೆ. ತಕ್ಷಣ ಧರಣಿ ಕೈಬಿಡುವಂತೆ ಒತ್ತಾಯ ಮಾಡಲಾಗಿದೆ. ದೇಶದಲ್ಲಿ ಮತ್ತು ಕರ್ನಾಟಕದಲ್ಲಿ ಬಿಜೆಪಿ ಆಡಳಿತದಲ್ಲಿದೆ. ಇಲ್ಲಿ ಜನ ಕರೋನಾದಿಂದ ಸಾಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಜನರ ನೆರವಿಗೆ ಬಿಜೆಪಿ ಬರಬೇಕಿದೆ. ಆದರೆ ದೇಶದಲ್ಲಿ ಪಕ್ಷದ ಎಲ್ಲಾ ಸಾಂಸ್ಥಿಕ ಮಂಡಳಿಗಳಲ್ಲಿ ಕೋವಿಡ್ ನಿಯವನ್ನು ಪಾಲಿಸಿ ಈ ಪ್ರತಿಭಟನೆ ನಡೆಯಲಿದೆ ಎಂದು ತಿಳಿಸಲಾಗಿದೆ. ಆದರೆ ಕರೋನಾ ಪ್ರತಿ ಊರಲ್ಲೂ ನೂರಾರು ಪ್ರಾಣ ಬಲಿ ಪಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಧರಣಿ, ಪ್ರತಿಭಟನೆಗಳಿಂದ ಮತ್ತಷ್ಟು ಜನತೆಗೆ ಕರೋನಾ ಹರಡಿ ಮತ್ತಷ್ಟು ಜನ ಬಲಿಯಾದರೂ ಅಚ್ಚರಿ ಇಲ್ಲ.
ಇಂತಹ ತುರ್ತು ಸಂದರ್ಭದಲ್ಲಿ ರಾಜಕೀಯ ಬಿಡಿ ಪ್ರತಿ ಮನೆಯೂ ಆತಂಕದಲ್ಲಿದೆ. ಜನರ ಕಷ್ಟಕ್ಕೆ ನೇರವಾಗಿ. ರಾಜಕೀಯ ಮಾಡಲು ಇದು ಸಂದರ್ಭವಲ್ಲ ಎಂಬ ಅಭಿಪ್ರಾಯ ಕೇಳಿ ಬಂದಿದೆ.
ಏನಾಗಿತ್ತು..?: ಭಾನುವಾರ ಹೊರಬಿದ್ದ ಚುನಾವಣಾ ಫಲಿತಾಂಶದಲ್ಲಿ ತೃಣ ಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷ ಗೆಲುವನ್ನು ಸಾಧಿಸಿದೆ ಎಂದ ತಕ್ಷಣ ಟಿಎಂಸಿ ಕಾರ್ಯಕರ್ತರು ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಹಿಂಸಾಚಾರ ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ಇನ್ನು ಪಶ್ಚಿಮ ಬಂಗಾಳದಲ್ಲಿ ನಡೆದಿರುವ ಹಿಂಸಾಚಾರ ಕುರಿತಂತೆ ಕೇಂದ್ರ ಗೃಹ ಸಚಿವಾಲಯ ಪಶ್ಚಿಮ ಬಂಗಾಳ ಸರ್ಕಾರದಿಂದ ವರದಿ ಕೇಳಿದೆ. ಎಲ್ಲಾ ಸುದ್ದಿಗಳಿಗೆ Nammur Express ಫೇಸ್ಬುಕ್ ಹಾಗೂ ಯೂಟ್ಯೂಬ್ ವೀಕ್ಷಿಸಿ…!..ಸುದ್ದಿ ಪಡೆಯಲು 9481949101 ಗೆ ನಿಮ್ಮ ಹೆಸರು, ಊರು, ತಾಲ್ಲೂಕು ವಾಟ್ಸಾಪ್ ಮಾಡಿ…!..ಎಲ್ಲಾ ಗ್ರೂಪ್ ಹಾಗೂ ಸ್ನೇಹಿತರಿಗೆ ಶೇರ್ ಮಾಡಿರಿ..!.