ಕೋಣಂದೂರಿನ ಕರ್ನಾಟಕ ಪಬ್ಲಿಕ್ ಶಾಲೆ ಚಾಂಪಿಯನ್
– ತೀರ್ಥಹಳ್ಳಿ ತಾಲೂಕು ಮಟ್ಟದ ಬಾಲಕಿಯರ 17 ವರ್ಷದೊಳಗಿನ ಬಾಲಕಿಯರ ಗುಂಪು ಆಟ
– ಅಚ್ಚುಕಟ್ಟಿನ ಆಯೋಜನೆ ಮಾಡಿದ ಆರಗ ಸರ್ಕಾರಿ ಪ್ರೌಢ ಶಾಲೆ
NAMMUR EXPRESS NEWS
ತೀರ್ಥಹಳ್ಳಿ: ಆರಗದಲ್ಲಿ ನಡೆದ ತೀರ್ಥಹಳ್ಳಿ ತಾಲೂಕು ಮಟ್ಟದ ಬಾಲಕಿಯರ 17 ವರ್ಷದೊಳಗಿನ ಬಾಲಕಿಯರ ಗುಂಪು ಆಟಗಳ ಪಂದ್ಯಾವಳಿಯಲ್ಲಿ ಕೋಣಂದೂರಿನ ಕರ್ನಾಟಕ ಪಬ್ಲಿಕ್ ಶಾಲೆ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ.
ತಾಲೂಕು ಮಟ್ಟದ ಗುಂಪು ಆಟಗಳಲ್ಲಿ ಪ್ರಥಮ ಸ್ಥಾನ ಗಳಿಸಿದ ತಂಡಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ.
ತಾಲೂಕು ಮಟ್ಟದ ಫಲಿತಾಂಶ ಹೀಗಿದೆ.
ವಾಲಿಬಾಲ್ : ತೀರ್ಥಹಳ್ಳಿ ಸಹ್ಯಾದ್ರಿ ಶಾಲೆ ಪ್ರಥಮ, ಸರ್ಕಾರಿ ಪ್ರೌಢಶಾಲೆ ಗುಡ್ಡೆಕೊಪ್ಪ ದ್ವಿತೀಯ.
ಥ್ರೋಬಾಲ್: ಕೆಪಿಎಸ್ ಕೋಣಂದೂರು ಪ್ರಥಮ ,ವಾಗ್ದೇವಿ ಪ್ರೌಢಶಾಲೆ ದ್ವಿತೀಯ.
ಕಬ್ಬಡ್ಡಿ : ಜಿ ಜ ಸಿ ಮಾಳೂರು ಪ್ರಥಮ ,ವಾಗ್ದೇವಿ ದ್ವಿತೀಯ.
ಖೋ ಖೋ : ಕುಡುಮಲ್ಲಿಗೆ ಅಂಬೇಡ್ಕರ್ ವಸತಿ ಶಾಲೆ ಪ್ರಥಮ, ಸರ್ಕಾರಿ ಪ್ರೌಢಶಾಲೆ ಗುಡ್ಡೇಕೇರಿ ದ್ವಿತೀಯ.
ಬ್ಯಾಡ್ಮಿಂಟನ್ : ಚಿಟ್ಟೆ ಬೈಲಿನ ಪ್ರಜ್ಞಾ ಭಾರತಿ ಶಾಲೆ ಪ್ರಥಮ, ಕೆಪಿಎಸ್ ಕೋಣಂದೂರು ದ್ವಿತೀಯ.
ವಿವಿಧ ವಲಯ ಮಟ್ಟದ ಪಂದ್ಯಾವಳಿಯ ಫಲಿತಾಂಶ ಹೀಗಿದೆ.
ಕೋಣಂದೂರು ವಲಯ
ವಾಲಿಬಾಲ್: ಸರ್ಕಾರಿ ಪ್ರೌಢಶಾಲೆ ಗುಡ್ಡೆಕೊಪ್ಪ ಪ್ರಥಮ ,ಸರ್ಕಾರಿ ಪ್ರೌಢಶಾಲೆ ನೊಣಬೂರು ದ್ವಿತೀಯ.
ಥ್ರೋಬಾಲ್ : ಕೆಪಿಎಸ್ ಕೋಣಂದೂರು ಪ್ರಥಮ, ರಾಷ್ಟ್ರೀಯ ಪ್ರೌಢಶಾಲೆ ಕೋಣಂದೂರು ದ್ವಿತೀಯ.
ಕಬ್ಬಡ್ಡಿ :ಸರ್ಕಾರಿ ಪ್ರೌಢಶಾಲೆ ನೊಣಬೂರು ಪ್ರಥಮ ,ಪ್ರೌಢಶಾಲೆ ಅರೆನಲ್ಲಿ ದ್ವಿತೀಯ.
ಖೋ ಖೋ : ಸರ್ಕಾರಿ ಪ್ರೌಢಶಾಲೆ ಮತ್ತಿಗಾರು ಪ್ರಥಮ ,ಸರ್ಕಾರಿ ಪ್ರೌಢಶಾಲೆ ಹುಂಚದಕಟ್ಟೆ ದ್ವಿತೀಯ.
ಬಾಲ್ ಬ್ಯಾಡ್ಮಿಂಟನ್: ಕೆಪಿಎಸ್ ಕೋಣಂದೂರು ಪ್ರಥಮ, ಸರ್ಕಾರಿ ಪ್ರೌಢಶಾಲೆ ಕನ್ನಂಗಿ ದ್ವಿತೀಯ.
ತೀರ್ಥಹಳ್ಳಿ ವಲಯ
ವಾಲಿಬಾಲ್: ಸಹ್ಯಾದ್ರಿ ಪ್ರೌಢಶಾಲೆ ತೀರ್ಥಹಳ್ಳಿ ಪ್ರಥಮ ,ವಾಗ್ದೇವಿ ಪ್ರೌಢಶಾಲೆ ತೀರ್ಥಹಳ್ಳಿ ದ್ವಿತೀಯ.
ಥ್ರೋಬಾಲ್ :ವಾಗ್ದೇವಿ ಪ್ರೌಢಶಾಲೆ ತೀರ್ಥಹಳ್ಳಿ ಪ್ರಥಮ ,ಕುಡುಮಲ್ಲಿಗೆಯ ಅಂಬೇಡ್ಕರ್ ವಸತಿ ,ಶಾಲೆ ದ್ವಿತೀಯ.
ಕಬಡ್ಡಿ: ವಾಗ್ದೇವಿ ಪ್ರೌಢಶಾಲೆ ಪ್ರಥಮ, ಜಿಜೆಸಿ ಮಾಳೂರು ದ್ವಿತೀಯ
ಖೋ ಖೋ: ಅಂಬೇಡ್ಕರ್ ವಸತಿ ಶಾಲೆ ಕುಡುಮಲ್ಲಿಗೆ ಪ್ರಥಮ, ಸರ್ಕಾರಿ ಪ್ರೌಢಶಾಲೆ ಕಟ್ಟೆಹಕ್ಕಲು ದ್ವಿತೀಯ.
ಬಾಲ್ ಬ್ಯಾಡ್ಮಿಂಟನ್ : ಚಿಟ್ಟೆಬೈಲಿನ ಪ್ರಜ್ಞಾಭಾರತಿ ಪ್ರೌಢಶಾಲೆಯ ಪ್ರಥಮ, ಸರ್ಕಾರಿ ಪ್ರೌಢಶಾಲೆ ಕಟ್ಟೆಹಕ್ಕಲು ದ್ವಿತೀಯ.
ಆಗುಂಬೆ ವಲಯ
ವಾಲಿಬಾಲ್: ಸರ್ಕಾರಿ ಪ್ರೌಢಶಾಲೆ ರಾಮಕೃಷ್ಣಪುರ ಪ್ರಥಮ ,ಸರ್ಕಾರಿ ಪ್ರೌಢಶಾಲೆ ಬಿಳಲುಕೊಪ್ಪ ದ್ವಿತೀಯ.
ಥ್ರೋಬಾಲ್: ಅನ್ನಪೂರ್ಣ ವಿದ್ಯಾ ಮಂದಿರ ಆಗುಂಬೆ ಪ್ರಥಮ ,ಸೈಂಟ್ ಮೇರಿಸ್ ಪ್ರೌಢಶಾಲೆ ಇಂದಿರಾನಗರ ತೀರ್ಥಹಳ್ಳಿ ದ್ವಿತೀಯ.
ಕಬಡ್ಡಿ: ಜಿಜೆಸಿ ಮೇಗರವಳ್ಳಿ ಪ್ರಥಮ, ವಿಶ್ವತೀರ್ಥ ಪ್ರೌಢಶಾಲೆ ಕಮ್ಮರಡಿ ದ್ವಿತೀಯ.
ಖೋಖೋ: ಸರ್ಕಾರಿ ಪ್ರೌಢಶಾಲೆ ಗುಡ್ಡೆ ಕೇರಿ ಪ್ರಥಮ, ಸರ್ಕಾರಿ ಪ್ರೌಢಶಾಲೆ ಬೀಳಲುಕೊಪ್ಪ ದ್ವಿತೀಯ.
ಬಾಲ್ ಬ್ಯಾಡ್ಮಿಂಟನ್: ಎಸ್ವಿಎಸ್ ಆಗುಂಬೆ ಪ್ರಥಮ, ಅನ್ನಪೂರ್ಣ ವಿದ್ಯಾ ಮಂದಿರ ಆಗುಂಬೆ ದ್ವಿತೀಯ.
ಸಹಕಾರ ಮಾಡಿದ ಎಲ್ಲರಿಗೂ ಥ್ಯಾಂಕ್ಸ್
ಐತಿಹಾಸಿಕ ಆರಗದ ಹಳೆಕೋಟೆ ಕ್ರೀಡಾಂಗಣದಲ್ಲಿ ತಾಲೂಕು ಮಟ್ಟದ 17 ವರ್ಷದೊಳಗಿನ ಬಾಲಕಿಯರ ಪಂದ್ಯಾವಳಿಯು ಅತ್ಯಂತ ಯಶಸ್ವಿಯಾಗಿದ್ದು ಶಾಸಕ ಆರಗ ಜ್ಞಾನೇಂದ್ರ ಸಹಕರಿಸಿದ್ದು, ಹಳೆ ವಿದ್ಯಾರ್ಥಿಗಳಾದ ಶಿವಮೊಗ್ಗದ ಎಂಜಿ ಡೆವೆಲಪರ್ಸ್ ಮಾಲಿಕ ಮಹೇಂದ್ರಗೌಡ, ಆರಗ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ್, ಸದಸ್ಯ ರಮೇಶ್ ,ಅಬ್ದುಲ್ ರಶೀದ್, ನಾಗಪಾತ್ರಿ ನಾಗರಾಜ್, ಗುರುಪ್ರಸಾದ್, ಬೆಂಗೂರಿನ ಮಂಜನಾಥ್ ಮತ್ತು ಆರಗ ದಿವಾಕರ್, ನಿವೃತ್ತ ಶಿಕ್ಷಕಿ ಶೋಭನ್ ಹಾಗೂ ಗ್ರಾಮ ಪಂಚಾಯಿತಿಯ ಎಲ್ಲ ಸದಸ್ಯರುಗಳಿಗೆ,ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಸಂದೀಪ್ ಮತ್ತು ನಿರ್ದೇಶಕರಿಗೆ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಸಿಬ್ಬಂದಿ ವರ್ಗದವರಿಗೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಪ್ರೌಢಶಾಲೆಯ ಶಾಲೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮಹೇಶ್ ಕೆ ಎಸ್ ಮತ್ತು ಸದಸ್ಯರುಗಳಿಗೆ,ಶಾಲೆಯ ಹಿರಿಯ ಶಿಕ್ಷಕ ದಾನೇಶ್ ಕೆ ಎನ್ ಮತ್ತು ಸಹ ಶಿಕ್ಷಕರುಗಳು ಹಾಗೂ ಸಿಬ್ಬಂದಿ ವರ್ಗದವರಿಗೆ, ಆರಗ ಸುತ್ತಮುತ್ತಲಿನ ಪ್ರಾಥಮಿಕ ಶಾಲಾ ಅಧ್ಯಕ್ಷರು ಮತ್ತು ಶಿಕ್ಷಕರಿಗೆ,ಎಲ್ಲಾ ಹಳೆ ವಿದ್ಯಾರ್ಥಿಗಳಿಗೆ, ಈ ಕ್ರೀಡಾಕೂಟದ ಯಶಸ್ಸಿಗೆ ಸಹಕರಿಸಿದ ಎಲ್ಲ ದಾನಿಗಳಿಗೆ , ಗ್ರಾಮಸ್ಥರಿಗೆ ಹಾಗೂ ತಾಲೂಕು ಶಿಕ್ಷಣ ಇಲಾಖೆಯ ಎಲ್ಲಾ ಅಧಿಕಾರಿಗಳಿಗೆ,ತಾಲೂಕು ದೈಹಿಕ ಶಿಕ್ಷಣ ಅಧ್ಯಾಪಕರುಗಳಿಗೆ, ಆರಗ ಸರ್ಕಾರಿ ಪ್ರೌಢಶಾಲೆಯ ತಾಲೂಕು ಮಟ್ಟದ ಕ್ರೀಡಾಕೂಟ ಸಮಿತಿ ಅಧ್ಯಕ್ಷ ಅಧ್ಯಕ್ಷ ಎಸ್ಎನ್ ಮಂಜುನಾಥ್ ಕೃತಜ್ಞತೆ ಸಲ್ಲಿಸಿದ್ದಾರೆ.
ವರದಿ : ಬೋಜರಾಜ್ ಬಿ ಟಿ
ಪ್ರಧಾನ ಕಾರ್ಯದರ್ಶಿ ಹಳೇ ವಿದ್ಯಾರ್ಥಿ ಸಂಘ,ಆರಗ