ಚಿತ್ರದುರ್ಗ ಡಿಸಿಸಿ ಬ್ಯಾಂಕ್: ಸಚಿವ ಸುಧಾಕರ್ ಸೇರಿ 7 ಜನ ಅವಿರೋಧ ಆಯ್ಕೆ
– ಐದು ಜನರಿಗೆ ಡಿಸಿಸಿ ಚುನಾವಣೆಯಲ್ಲಿ ಗೆಲುವು
NAMMUR EXPRESS NEWS
ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್(ಡಿಸಿಸಿ) ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಚಿತ್ರದುರ್ಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಎ ವರ್ಗದ ಕ್ಷೇತ್ರಕ್ಕೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಇಲ್ಲಿ ಮೆದೇಹಳ್ಳಿ ಸೊಸೈಟಿಯಿಂದ ಎಚ್.ಎಂ.ದ್ಯಾಮಣ್ಣ, ಭೀಮಸಮುದ್ರದಿಂದ ಟಿ.ಪಿ.ಅನೂಫ್ ಹಾಗೂ ಪಿಳ್ಳೆಕೇರೆನಹಳ್ಳಿಯಿಂದ ಬಿ.ಮಂಜುನಾಥ್ ಪೈಪೋಟಿ ನಡೆಸಿದ್ದರು.
ಅಂತಿಮವಾಗಿ ಮೆದೇಹಳ್ಳಿ ಸೊಸೈಟಿಯ ಎಚ್.ಎಂ.ದ್ಯಾಮಣ್ಣ 10 ಮತಗಳಿಂದ ಗೆಲುವು ಸಾಧಿಸಿದ್ದಾರೆ. ಹೊಸದುರ್ಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕ್ಷೇತ್ರದಿಂದ ವೆಂಗಳಾಪುರ ಸೊಸೈಟಿಯ ಕೆ.ಅನಂತ್ ಹಾಗೂ ಕಾರೇಹಳ್ಳಿ ಸೊಸೈಟಿಯ ಎಚ್.ಬಸವರಾಜ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಅಂತಿಮವಾಗಿ ಕೆ.ಅನಂತ್ 10 ಮತಗಳಿಂದ ಆಯ್ಕೆಯಾಗಿದ್ದಾರೆ. ಮೊಳಕಾಲ್ಮೂರು ಕೃಷಿ ಪತ್ತಿನ ಸಹಕಾರ ಸಂಘದ ಕ್ಷೇತ್ರದಿಂದ ತಿರುಮಲಾಪುರ ಸೊಸೈಟಿಯ ಜಿಂಕಲ್ ಬಸವರಾಜ್ ಹಾಗೂ ಜೆ.ಬಿ.ಹಳ್ಳಿಯಿಂದ ಎಚ್.ಟಿ.ನಾಗೀರೆಡ್ಡಿ ನಡುವೆ ಪೋಟಿ ನಡೆದು, ಚ್.ಟಿ.ನಾಗೀರೆಡ್ಡಿ 6 ಮತಗಳಿಂದ ಗೆದ್ದಿದ್ದಾರೆ. ಹಿರಿಯೂರು, ಚಳ್ಳಕೆರೆ ಹಾಗೂ ಮೊಳಕಾಲ್ಮೂರು ಹಾಲು ಉತ್ಪಾದಕರ ಸಹಾಕರ ಸಂಘದ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಲಕ್ಕವ್ವನಹಳ್ಳಿ ಸೊಸೈಟಿಯ ಎಂ.ಭಾರತಿ ಹಾಗೂ ತಿಮ್ಮಪ್ಪಯ್ಯನಹಳ್ಳಿ ಸೊಸೈಟಿಯ ಪಿ.ವಿನೋದಸ್ವಾಮಿ ನಡುವೆ ಹಣಾಹಣಿ ನಡೆದು, ಪಿ.ವಿನೋದಸ್ವಾಮಿ 3 ಮತಗಳಿಂದ ಜಯದ ನಗೆ ಬೀರಿದ್ದಾರೆ. ಜಿಲ್ಲೆಯ ಇತರೆ ಸಹಕಾರಿ ಕ್ಷೇತ್ರದ ಪರವಾಗಿ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಚಳ್ಳಕೆರೆಯ ಬಿ.ಸಿ.ಸಂಜೀವಮೂರ್ತಿ ಹಾಗೂ ಚಿತ್ರದುರ್ಗದ ನಿಶಾನಿ ಎಂ.ಜಯ್ಯಣ್ಣ ನಡುವೆ ಪೈಪೋಟಿ ನಡೆದು, ಅಂತಿಮವಾಗಿ ನಿಶಾನಿ ಎಂ.ಜಯ್ಯಣ್ಣ 8 ಮತಗಳಿಂದ ಗೆದ್ದಿದ್ದಾರೆ.
– ಸಚಿವ ಸುಧಾಕರ್ ಸೇರಿ 7 ಜನ ಅವಿರೋಧ:
ಡಿಸಿಸಿ ಬ್ಯಾಂಕಿನ ಹಾಲಿ ಅಧ್ಯಕ್ಷರಾಗಿರುವ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ನಗರಂಗೆರೆ ಕೃಷಿ ಪತ್ತಿನ ಸಹಕಾರ ಸಂಘದಿಂದ ನಿರ್ದೇಶಕ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದು, ಅವಿರೋಧವಾಗಿ ಆಯ್ಕೆಯಾಗಿದ್ದರು. ಇವರೊಟ್ಟಿಗೆ ಹೊಳಲ್ಕೆರೆ ತಾಲೂಕು ಶಿವಗಂಗಾ ಸೊಸೂಟಿಯ ಎಸ್.ಆರ್.ಗಿರೀಶ್, ಹಿರಿಯೂರಿನಿಂದ ಓ.ಮಂಜುನಾಥ್, ಟಿಎಪಿಸಿಎಂಎಸ್ನಿಂದ ಹೊಸದುರ್ಗದ ಎಚ್.ಬಿ.ಮಂಜುನಾಥ್, ನೇಕಾರಿಕೆ ಸಹಕಾರ ಸಂಘಗಳ ಕ್ಷೇತ್ರದಿಂದ ಕೆ.ಜಗಣ್ಣ, ಪಟ್ಟಣ ಸಹಕಾರಿ ಬ್ಯಾಂಕ್ ಕ್ಷೇತ್ರದಿಂದ ರಘುರಾಮ ರೆಡ್ಡಿ, ಹಾಲು ಉತ್ಪಾಧಕರ ಕ್ಷೇತ್ರದಿಂದ ತಿಪ್ಪೇಸ್ವಾಮಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.