- ಪ್ರತಿ ಮನೆಯ ತಾಯಂದಿರ ಬಗ್ಗೆ ಜೋಪಾನ
- ತಾಯಂದಿರ ಹೆಸ್ರಲ್ಲಿ ಸೇವೆ ಮಾಡೋಣ..!
NAMMUR EXPRESS,ರಿಪೋರ್ಟ್: ರಂಜಿತ್
ಬೆಂಗಳೂರು: ಮೇ 9 ಭಾನುವಾರ ತಾಯಂದಿರ ದಿನ. ಎಲ್ಲೆಡೆ ಶುಭಾಶಯಗಳು, ಪೋಸ್ಟರ್ಗಳ ಸ್ಟೇಟಸ್ ಸಾಮಾಜಿಕ ಜಾಲತಾಣಗಳಲ್ಲಿ ಮಹಾಪೂರ ಕಂಡು ಬಂತು. ಆದರೆ ಪ್ರತಿಯೊಬ್ಬರೂ ಇಂದು ತಮ್ಮ ತಾಯಂದಿರ ಜೋಪಾನ ಮಾಡುವ ಸಮಯ. ತಮ್ಮ ತಾಯಂದಿರಿಗೆ ಲಸಿಕೆ ಹಾಕಿಸಿ, ಮಾಸ್ಕ್, ಸಾಮಾಜಿಕ ಅಂತರ ಕಾಪಾಡಲು ಹಾಗೂ ಕರೋನಾ ಬಗ್ಗೆ ಧೈರ್ಯ ಹೇಳಬೇಕಾದ ಸಂದರ್ಭ ಇದು. ಬರಿ ತೋರುಗಾಣಿಕೆಗೆ ಸ್ಟೇಟಸ್ ಹಾಕುವ ಬದಲು ಅಕ್ಕ ಪಕ್ಕದಲ್ಲಿರುವ ಹತ್ತಾರು ತಾಯಂದಿರಿಗೆ ಸಹಾಯ ಮಾಡಿ..!
ಅನೇಕರು ತಮ್ಮ ತಾಯಿಯ ಕಳೆದುಕೊಂಡು ತಾಯಂದಿರ ದಿನದ ಶುಭಾಶಯ ಹೇಳೋಕೂ ಆಗಿಲ್ಲ. ಅಂತವರು ತಮ್ಮ ತಾಯಿಯ ಹೆಸರಲ್ಲಿ ಕರೋನಾ ಸಂಕಷ್ಟದಲ್ಲಿರುವ ಹತ್ತು ತಾಯಂದಿರು ಮಕ್ಕಳ ಕುಟುಂಬಕ್ಕೆ ಸಹಾಯ ಮಾಡಿ. ಈ ಮೂಲಕ ಅವರಲ್ಲಿ ತಾಯಂದಿರನ್ನು ಕಾಣಿರಿ.. ಇದು ನಮ್ಮೂರ್ ಎಕ್ಸ್ಪ್ರೆಸ್ ಕಾಳಜಿ.
ಪ್ರತಿ ಮಕ್ಕಳಿಗೂ ತಾಯಿ ತಮ್ಮ ಜನ್ಮದಲ್ಲಿ ತೀರಿಸಲಾಗದ ಪ್ರೀತಿ ಕರುಣೆ ನೀಡುತ್ತಾಳೆ. ಅವಳ ಪ್ರೀತಿ, ಕರುಣೆಗೆ ಎಂದು ಮೋಸ ಮಾಡದಿರಿ. ಕರೋನಾದ ತುರ್ತು ಸಂದರ್ಭದಲ್ಲಿ ತಮ್ಮ ತಾಯಿಯರ ಬಗ್ಗೆ ಕಾಳಜಿ ವಹಿಸಿ.
ಬಡ ಮಕ್ಕಳು, ತುತ್ತು ಊಟಕ್ಕಾಗಿ ಪರದಾಡುವ ಎಲ್ಲಾ ಕುಟುಂಬಕ್ಕೆ ನಾವು ಮಕ್ಕಳಾಗಿ ಹೊರಡೋಣ. ಈ ದೇಶ, ಈ ನಾಡು ನಮ್ಮ ತಾಯಿ. ಈ ತಾಯಿ ಸಂಕಷ್ಟದಲ್ಲಿದ್ದಾಳೆ ಅವಳ ಸೇವೆಯೇ ನಾವು ತಾಯಂದಿರ ದಿನಕ್ಕೆ ನಿಜವಾಗಿ ಮಾಡುವ ಸಾರ್ಥಕತೆ.
ನಮ್ಮೆಲ್ಲ ತಾಯಂದಿರಿಗೆ, ಭೂಮಿ ತಾಯಿ ಈ ನಾಡು, ಈ ದೇಶಕ್ಕೆ ಎಲ್ಲರೂ ಸೇರಿ ಸಹಾಯ ಮಾಡೋಣ. ಪ್ರತಿಯೊಬ್ಬರು ಭಾರತಾಂಬೆಯ ಮಕ್ಕಳು. ರಾಜಕೀಯ, ಪಕ್ಷ, ಜಾತಿ, ಧರ್ಮ, ಪ್ರತಿಷ್ಠೆ, ಸ್ವಾರ್ಥ ಬಿಟ್ಟು ಎಲ್ಲರೂ ಮಾನವೀಯತೆ ಮೆರೆಯೋಣ.
ಎಲ್ಲಾ ತಾಯಂದಿರ ತ್ಯಾಗ, ಪ್ರೀತಿ ಅಕ್ಷರದಲ್ಲಿ ಬರೆಯಲಾಗದ್ದು. ನಮ್ಮೂರ್ ಎಕ್ಸ್ಪ್ರೆಸ್ ಮಾಧ್ಯಮ ಜನ ಜಾಗೃತಿ ಸುದ್ದಿಗಳನ್ನು ಬಿತ್ತರ ಮಾಡುವ ಮೂಲಕ ತಾಯ್ನಾಡಿನ ಸೇವೆಗೆ ಮುಂದಾಗಿದೆ. ನಿಮ್ಮೆಲ್ಲರ ಸಹಕಾರ, ಸಲಹೆ, ಮಾರ್ಗದರ್ಶನ ಇರಲಿ.
ಎಲ್ಲಾ ಸುದ್ದಿಗಳಿಗೆ NAMMUR EXPRESS, ಫೇಸ್ಬುಕ್ ಹಾಗೂ ಯೂಟ್ಯೂಬ್ ವೀಕ್ಷಿಸಿ…!.. ಸುದ್ದಿ ಪಡೆಯಲು 9481949101ಗೆ ನಿಮ್ಮ ಹೆಸರು, ಊರು, ತಾಲ್ಲೂಕು ವಾಟ್ಸಾಪ್ ಮಾಡಿ…!. ಈ ಸುದ್ದಿ ಇಷ್ಟವಾದರೆ ಎಲ್ಲಾ ಸ್ನೇಹಿತರು, ಗ್ರೂಪ್, ಎಲ್ಲರಿಗೂ ಶೇರ್ ಮಾಡಿ..!.