ಟಾಪ್ ನ್ಯೂಸ್ ಮಲ್ನಾಡ್
ಕೆ. ಎಸ್. ಆರ್. ಟಿ. ಸಿ ಅಧಿಕಾರಿಗೆ ಚಾಕು ಇರಿತ!
– ಚಿಕ್ಕಮಗಳೂರಲ್ಲಿ ನಡೆದ ಘಟನೆ: ಕೆಲಸಕ್ಕೆ ಚಕ್ಕರ್ ಕೇಳಿದಕ್ಕೆ ಇರಿತ
* ಶಿವಮೊಗ್ಗ: ಬಾರಿನಲ್ಲಿ ಕೈ ಟಚ್,ಪ್ರಕರಣ ದಾಖಲು!
* ಶಿವಮೊಗ್ಗ: ಶುಂಠಿ ಹೊಲದ ಶೆಡ್ನಲ್ಲಿ ನಾಡ ಬಂದೂಕು ತಯಾರಿಕೆ
NAMMUR EXPRESS NEWS
ಚಿಕ್ಕಮಗಳೂರು: ಬುದ್ದಿ ಮಾತು ಹೇಳಿದ ಕೆ. ಎಸ್. ಆರ್. ಟಿ. ಸಿ ಅಧಿಕಾರಿಗೆ ಅಸಿಸ್ಟೆಂಟ್ ಓರ್ವ ಚಾಕು ಇರಿದಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಜಗದೀಶ್ ಕುಮಾರ್ ಚಾಕು ಇರಿತಕ್ಕೆ ಒಳಗಾದ ಅಧಿಕಾರಿ. ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಣ ಅಧಿಕಾರಿ ಜಗದೀಶ್ ಕುಮಾರ್ ವಾಹನ ಹತ್ತುವ ವೇಳೆ ಜೂನಿಯರ್ ಅಸಿಸ್ಟೆಂಟ್ ರಿತೇಶ್ ಏಕಾಏಕಿ ಅವರನ್ನು ಅಡ್ಡಗಟ್ಟಿ ಚಾಕುವಿನಿಂದ ಇರಿದಿದ್ದಾನೆ.
ತಪ್ಪಿಸಿಕೊಳ್ಳಲು ಯತ್ನಿಸಿದ್ದ ಅಧಿಕಾರಿಯ ಕೈಗೆ ಗಾಯವಾಗಿದೆ.ಹಾಜರಾತಿಗೆ ಸಂಬಂಧಿಸಿದಂತೆ ರಿತೇಶ್ ಹಾಗೂ ಆತನ ಕುಟುಂಬದವರನ್ನು ಕರೆದು ಬುದ್ದಿ ಮಾತು ಹೇಳಿದ್ದರಂತೆ. ಅಲ್ಲದೇ ಕುಟುಂಬದವರ ಮನವಿ ಮೇರೆಗೆ ಚಿಕ್ಕಮಗಳೂರಿನಿಂದ ಬೇಲೂರಿಗೆ ವರ್ಗಾವೆ ಲಾಗಿತ್ತು. ಇದರಿಂದ ರಿತೇಶ್ ಕೋಪಗೊಂಡು ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದು ಬಂದಿದೆ.
ಗಾಯಾಳು ಅಧಿಕಾರಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಕೃತ್ಯದ ಬಳಿಕ ಆರೋಪಿ ರಿತೇಶ್ ಪರಾರಿಯಾಗಿದ್ದಾನೆ. ಚಿಕ್ಕಮಗಳೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
* ಚಿಕ್ಕಮಗಳೂರು:ಶಾಲೆಗೆ ಶಿಕ್ಷಕರನ್ನು ನಿಯೋಜಿಸಲು ಆಗ್ರಹಿಸಿ ಪ್ರತಿಭಟನೆ
ಚಿಕ್ಕಮಗಳೂರು: ಚಿಕ್ಕಮಗಳೂರು ತಾಲೂಕಿನ ಸಿದ್ದಾಪುರ ಸರಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆಗೆ ಶಿಕ್ಷಕರನ್ನು ನಿಯೋಜಿಸುವಂತೆ ಆಗ್ರಹಿಸಿ ಶಾಲೆಯ ವಿದ್ಯಾರ್ಥಿಗಳು ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ತಾಲೂಕು ಪಂಚಾಯಿತಿ ಮಾಜಿ ಸದಸ್ಯ ರಮೇಶ್, ಎಸ್ಡಿಎಂಸಿ ಸದಸ್ಯರು ಹಾಗೂ ಗ್ರಾಮಸ್ಥರೊಂದಿಗೆ ಕುಗ್ರಾಮದಿಂದ ಸಮವಸ್ತ್ರದಲ್ಲೇ ಬಂದಿದ್ದ ಶಾಲಾ ಮಕ್ಕಳು ಬಿಇಓ ಕಚೇರಿ ಅಂಗಳದಲ್ಲಿ ಧರಣಿ ನಡೆಸಿ ಶಿಕ್ಷಕರನ್ನು ಶೀಘ್ರದಲ್ಲಿ ನಿಯೋಜಿಸುವಂತೆ ಆಗ್ರಹಿಸಿದ್ದಾರೆ.
* ಬಾರಿನಲ್ಲಿ ಕೈ ಟಚ್,ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲು!
ಬಾರ್ ನಲ್ಲಿ ಕೈ ಟಚ್ ಆಗಿದ್ದಕ್ಕೆ ನಾಲ್ವರು ಯುವಕರು ಪರಸ್ಪರ ಬಡಿದಾಡಿಕೊಂಡಿದ್ದಾರೆ. ಸಕಾಲಕ್ಕೆ ಮೂವರನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ.ಉಳಿದಿಬ್ಬರು ಪರಾರಿಯಾಗಿದ್ದು,ಪ್ರಕರಣ ಕೋಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಶಂಕರ ಮಠ ರಸ್ತೆಯಲ್ಲಿರುವ ಬಾರ್ ನಲ್ಲಿ ಶೇಷಾದ್ರಿಪುರಂ ಹುಡುಗರು ಕುಡಿಯುತ್ತಿದ್ದ ವೇಳೆ ಚಿಕ್ಕಲ್ ನ ಹುಡುಗರು ಬಂದಿದ್ದಾರೆ. ನಡೆದಾಡುವಾಗ ಟಚ್ ಆಗಿದೆ. ಅಷ್ಟಕ್ಕೆ ಗಲಾಟೆಯಾಗಿದೆ. ಬಾರ್ ನಿಂದ ಹೊರ ಬಂದು ಗಲಾಟೆ ಮಾಡಿಕೊಂಡಿದ್ದಾರೆ.
ಈ ವೇಳೆ 112 ಗೆ ಕರೆ ಮಾಡಿದ ಪರಿಣಾಮ ಪೊಲೀಸರ ವಾಹನ ಸಕಾಲದಲ್ಲಿ ಸ್ಥಳಕ್ಕೆ ಧಾವಿಸಿದೆ. ಇದೇ ವೇಳೆ ಇಬ್ವರು ಯುವಕರು ಪರಾರಿಯಾಗಿದ್ದಾರೆ. ಕಾರ್ತಿಕ್, ರವಿ, ಸಂಜುದೇವಕರ್ನ್ನ ಪೊಲೀಸರು ವಶಕ್ಕೆ ಪಡೆದುಕೊಂಡು ಕೋಟೆ ಠಾಣೆಗೆ ಕರೆದದಿದ್ದಾರೆ.
ಚಂದನ್ ಮತ್ತು ದರ್ಶನ್ ಎಂಬುವರು ಎಸ್ಕೇಪ್ ಆಗಿದ್ದಾರೆ. ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
* ಶಿವಮೊಗ್ಗ: ಶುಂಠಿ ಹೊಲದ ಶೆಡ್ನಲ್ಲಿ ನಾಡ ಬಂದೂಕು ತಯಾರಿಕೆ
ಶಿವಮೊಗ್ಗ: ಜಮೀನೊಂದರಲ್ಲಿ ನಾಡ ಬಂದೂಕು (ಕೋವಿ) ತಯಾರಿಸುತ್ತಿದ್ದ ಶೆಡ್ ಮೇಲೆ ಪೊಲೀಸರು ದಾಳಿ ನಡೆಸಿದ ಘಟನೆ, ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಜೇನಿ ಹೋಬಳಿ ಕಾಳಿಕಾಪುರ ಗ್ರಾಮದಲ್ಲಿ ನಡೆದಿದೆ. ಖಚಿತ ವರ್ತಮಾನದ ಮೇರೆಗೆ ಹೊಸನಗರ ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ಶಂಕರಗೌಡ ಪಾಟೀಲ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ ಪೊಲೀಸರ ದಾಳಿಯ ಮಾಹಿತಿ ಅರಿತ ಆರೋಪಿಗಳು, ಸ್ಥಳದಿಂದ ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ತೀರ್ಥಹಳ್ಳಿ ಡಿವೈಎಸ್ಪಿ ಗಜಾನನ ವಾಮನ ಸುತಾರ, ಇನ್ಸ್’ಪೆಕ್ಟರ್ ಗುರಣ್ಣ ಹೆಬ್ಬಾಳ ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಹೊಸನಗರ ಠಾಣೆಯಲ್ಲಿ ಮೂವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಮೂವರು ಆರೋಪಿಗಳು ಶುಂಠಿ ಹೊಲದ ಶೆಡ್ ನಲ್ಲಿ ನಾಡ ಬಂದೂಕು ತಯಾರಿಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದರು. ದಾಳಿ ವೇಳೆ ಬಂದೂಕು ತಯಾರಿಗೆ ಬಳಸುವ ನಳಿಕೆಗಳು, ಮರದ ಹಿಡಿಕೆ, ಟ್ರಿಗರ್, ಕೇಪ್, ಮದ್ದುಗುಂಡುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ತಲೆಮರೆಸಿ ಕೊಂಡಿರುವ ಆರೋಪಿಗಳ ಬಂಧನಕ್ಕೆ ಪೊಲೀಸರು ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.