ಸಿರಿಧಾನ್ಯ ಬೆಳೆಗಳ ಕುರಿತು ರೈತರೊಂದಿಗೆ ಸಂವಾದ
– ಚಿತ್ರದುರ್ಗ ಜಿಲ್ಲೆಯನ್ನು ನೀರಾವರಿಯನ್ನಾಗಿ ಮಾಡಲು ಪಟ್ಟು
– ಬಿಪಿಎಲ್ ಕಾರ್ಡ್ ರದ್ದುಗೊಳಿಸಬಾರದು: ಅಗ್ರಹ
NAMMUR EXPRESS NEWS
ಹೊಸದುರ್ಗ: ರೈತ ಜಾತಿ ಪಕ್ಷವನ್ನು ನೋಡಿ ಅನ್ನ ನೀಡುವುದಿಲ್ಲ ಅವನ ಸಹಾಯಕ್ಕೆ ನಾವೆಲ್ಲರೂ ನಿಲ್ಲಬೇಕು ಎಂದು ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಡಾ.ನವೀನ್ ಜಿ ತಿಳಿಸಿದ್ದಾರೆ.
ಹೊಸದುರ್ಗ ಪಟ್ಟಣದ ತಾಲೂಕು ರೈತ ಸಂಘದ ಕಚೇರಿಯಲ್ಲಿ ಸಿರಿಧಾನ್ಯ ಬೆಳೆಗಳ ಕುರಿತು ರೈತರೊಂದಿಗೆ ಸಂವಾದ ನಡೆಸಿ ಮಾತನಾಡಿದರು. ಸಂಪೂರ್ಣ ಬಯಲು ಸೀಮೆಯಾಗಿರುವ ಚಿತ್ರದುರ್ಗ ಜಿಲ್ಲೆಯನ್ನು ನೀರಾವರಿಯನ್ನಾಗಿ ಮಾಡಿ ಎಂದು ಅಗ್ರಹಿಸಿದರು.
ಕೃಷಿ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆ ಅಡಿಯಲ್ಲಿ 1 ಲಕ್ಷ ಕೋಟಿ ಹಣವನ್ನು ರೈತರಿಗಾಗಿ ಕೇಂದ್ರ ಸರ್ಕಾರ ಮೀಸಲಿರಿಸಿದೆ. ಇಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಕೇಂದ್ರ ಸರ್ಕಾರ ಸಾಕಷ್ಟು ಹಣ ಕಾಯ್ದೆರಿಸಿದೆ. ಐದು ವರ್ಷದಲ್ಲಿ ಮೂರು ಲಕ್ಷ ಕೋಟಿ ಹಣವನ್ನು ಗ್ಯಾರೆಂಟಿಗೆ ಕೊಡುವ ಬದಲ ರೈತರ ೀರಾವರಿ ಯೋಜನೆಗಳಿಗೆ ಕೊ್ಟಿದ್ದರೆ, ನಿಮ್ಮ ಯಾವುದೇ ಗ್ಯಾರೆಂಟಿಗಳನ್ನು ರೈತರು ಪಡೆಯುತ್ತಿರಲಿಲ್ಲ.ರಾಜ್ಯ ಆಹಾರ ನಿಗಮದ ಅಧ್ಯಕ್ಷರಾಗಿರುವ ಬಿಜಿ ಗೋವಿಂದಪ್ಪನವರು ರೈತರ ಬಿಪಿಎಲ್ ಕಾರ್ಡ್ ತೆಗೆಯಲು ಅವಕಾಶ ಕೊಡಬಾರದು ಎಂದರು.
ರಾಜ್ಯ ರೈತ ಮತ್ತು ಪ್ರಧಾನ ಕಾರ್ಯದರ್ಶಿ ರಾಜೇಶ್ ಬುರುಡೆಕಟ್ಟೆ ಮಾತನಾಡಿ, ಸಮಸ್ಯೆ ಬಗೆಹರಿಸುವ ಸಲುವಾಗಿ ಕರ್ನಾಟಕ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ನವೀನ್ ಜಿ ರವರು ತಮ್ಮ ಕಛೇರಿಗೆ ಬಂದಿರುತ್ತಾರೆ. ಸಿರಿಧಾನ್ಯದ ತವರು ಹೊಸದುರ್ಗ ಇಲ್ಲಿ ಯಥೇಚ್ಛವಾಗಿ ರೈತರು ಸಿರಿಧಾನ್ಯ ಬೆಳೆದಿದ್ದಾರೆ. ಸಾವೆ ನವಣೆಯ ಬೆಲೆಯನ್ನು ನೋಡಿದರೆ ರೈತನ ನೆರವಿಗೆ ಯಾರು ಬರುತ್ತಿಲ್ಲ. ರೈತರ ನೋವಿಗೆ ಬೆಂಬಲವಾಗಿ ರೈತ ಸಂಘ ಕಾರ್ಯವನ್ನು ನಡೆಸುತ್ತಿದೆ. ದಲ್ಲಾಳಿಗಳ ಹಾವಳಿಯಿಂದ ಇಂದು ಸಾವೆ ನವಣೆ ಪಾತಾಳಕ್ಕೆ ಕುಸಿದಿವೆ. ಸಿರಿಧಾನ್ಯದ ಬೆಳೆದು ಕೊಬ್ಬರಿ ಬೆಳೆದು ಇಂದು ರೈತ ಕಂಗಾಲಾಗಿದ್ದಾನೆ.ರೈತರ ಪರವಾಗಿ ಹೊಸದುರ್ಗದಲ್ಲಿ ಹೋರಾಟಕ್ಕೆ ಕರೆ ನೀಡುತ್ತೇವೆ ಎಂದರು.
ಹೊಸದುರ್ಗ ಪ್ರಭಾರಿ ಮಲ್ಲಿಕಾರ್ಜುನ್ ,. ತೆಂಗು ಅಡಿಕೆ, ಶೇಂಗಾ, ರಾಗಿ ಜೋಳ ನವಣೆ, ಅತಿ ಮುಖ್ಯವಾಗಿ ಸಾವೆ ಬೆಳೆಗಳಿಗೆ ಬೆಂಬಲ ಬೆಲೆ ನೀಡಿದ್ದರೆ ರೈತ ಯಾಕೆ ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದ, ರೈತನಿಗೆ ಪ್ರೋತ್ಸಾಹ ನೀಡಿದಾಗ ಮಾತ್ರ ದೇಶ ಅಭಿವೃದ್ಧಿಯಾಗುತ್ತದೆ ಎಂದರು.
ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ವೆಂಕಟೇಶ್ ಯಾದವ್, ರೈತ ಸಂಘದ ತಾಲೂಕ ಅಧ್ಯಕ್ಷ ಬೋರೀಶ್, ಉಪಾಧ್ಯಕ್ಷ ಚಿತ್ತಪ್ಪ, ಸುಮಂತ, ಮನು ಇದ್ದರು.