- ತಮಿಳುನಾಡಲ್ಲಿ ಕರೋನಾ ದೇವಿ ದೇಗುಲ ನಿರ್ಮಾಣ
- ಕರೋನಾ ಬಂದು ಹೊರಗೆ ಓಡಾಡಿದ್ರೆ ಪೊಲೀಸ್ ಕೇಸ್
- ನಾಳೆಯಿಂದ ಇಂಜೆಕ್ಷನ್ ನೀಡಲು ಸರ್ಕಾರ ಸಿದ್ದ!
ಬೆಂಗಳೂರು: ಕರೋನಾ ಇಡೀ ವಿಶ್ವ ಹೆಚ್ಚು ಭಯ ಹುಟ್ಟಿಸಿದ ಪದ. ಕರೋನಾ ಇಡೀ ಭಾರತವನ್ನು ಕಪಿಪುಷ್ಟಿಯಲ್ಲಿಟ್ಟುಕೊಂಡಿದೆ.
ಲಕ್ಷಾಂತರ ಮಂದಿಯನ್ನು ಈಗಾಗಲೇ ಬಲಿ ಪಡೆದಿದೆ. ಕರೋನಾ ಮಹಾಮಾರಿಯನ್ನು ದೇಶದಿಂದ ಹೊರ ಹಾಕಲು ಈಗ ತಮಿಳುನಾಡು ಕರೋನಾ ದೇವಿ ಪ್ರತಿಷ್ಠಾಪನೆ ಮಾಡಿದ್ದಾರೆ.
ತಮಿಳುನಾಡಿನ ಜನರು ಇನ್ನೂ ಒಂದು ಹೆಜ್ಜೆ ಮುಂದೇ ಹೋಗಿದ್ದು, ಕೊರೋನಾಗೆ ದೇವಿಯ ರೂಪಕೊಟ್ಟು ಪೂಜಿಸಲು ದೇವಾಲಯವನ್ನೇ ನಿರ್ಮಿಸಿದ್ದಾರೆ.
ಕುಂದಾಪುರದಲ್ಲಿ ಸೊಂಕಿತನ ಕ್ರಿಮಿನಲ್ ಕೇಸ್!: ಕರೋನಾ ಸೋಂಕು ದೃಢಪಟ್ಟು ಹೋಮ್ ಐಸೋಲೇಷನ್ ನಲ್ಲಿದ್ದ ವ್ಯಕ್ತಿಯೋರ್ವ ಕ್ವಾರಂಟೈನ್ ನಿಯಮ ಪಾಲನೆ ಮಾಡದ ಹಿನ್ನೆಲೆಯಲ್ಲಿ ಕರೋನಾ ಸೋಂಕಿತನ ವಿರುದ್ದ ಕ್ರಿಮಿನಲ್ ಕೇಸ್ ದಾಖಲಾಗಿದೆ.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕಾವಡಿ ಗ್ರಾಮದ ವ್ಯಕ್ತಿಯೋರ್ವ ಹೋಮ್ ಐಸೋಲೇಷನ್ ನಲ್ಲಿದ್ದರೂ ಕೂಡ ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಹೊರಗಡೆ ತಿರುಗಾಡುತ್ತಿದ್ದ. ಕುಂದಾಪುರ ಸಹಾಯಕ ಆಯುಕ್ತರು ಗ್ರಾಮಕ್ಕೆ ಭೇಟಿ ನೀಡಿದ ವೇಳೆಯಲ್ಲಿ ಕ್ವಾರಂಟೈನ್ ನಿಯಮ ಉಲ್ಲಂಘನೆ ಮಾಡಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಸಹಾಯಕ ಆಯುಕ್ತರು ವ್ಯಕ್ತಿಯ ವಿರುದ್ದ ಪ್ರಕರಣ ದಾಖಲು ಮಾಡುವಂತೆ ಸೂಚನೆಯನ್ನು ನೀಡಿದ್ದರು.
ವೈಟ್ ಫಂಗಸ್ ಹಾವಳಿ ಶುರು!: ರಾಜ್ಯದಲ್ಲಿ ಕರೋನಾ ನಡುವೆ ಬ್ಲಾಕ್ ಫಂಗಸ್ ಹಾಗೂ ವೈಟ್ ಫಂಗಸ್ ಇದೀಗ ಜನರ ಬಲಿ ಪಡೆಯಲು ಶುರು ಮಾಡಿದೆ. ರಾಜ್ಯದಲ್ಲಿ ನೂರಾರು ಮಂದಿ ಬ್ಲಾಕ್ ಫಂಗಸ್ ರೋಗಕ್ಕೆ ಬಲಿಯಾಗಿದ್ದಾರೆ. ಬಿಹಾರದ ಪಾಟ್ನಾದಲ್ಲಿ 4 ಮಂದಿಯಲ್ಲಿ ವೈಟ್ ಫಂಗಸ್ ಪತ್ತೆಯಾಗಿದೆ. ಆರೋಗ್ಯ ತಜ್ಞರ ಪ್ರಕಾರ ಬ್ಲ್ಯಾಕ್ ಫಂಗಸ್ಗಿಂತ ವೈಟ್ ಫಂಗಸ್ ಬಹಳ ಅಪಾಯಕಾರಿಯಾಗಿದ್ದು ಇದು ಶ್ವಾಸಕೋಶ ಅಲ್ಲದೇ ದೇಹದ ಉಗುರು, ಚರ್ಮ, ಹೊಟ್ಟೆ, ಕಿಡ್ನಿ, ಬಾಯಿಗೂ ಹಾನಿ ಮಾಡುತ್ತದೆ. ವೈಟ್ ಫಂಗಸ್ಗೆ ಆಂಟಿ-ಫಂಗಲ್ ಇಂಟ್ರಾವೆನಸ್ ಇಂಜೆಕ್ಷನ್ ನೀಡಲಾಗುತ್ತದೆ. ಒಂದು ಡೋಸ್ 3,500 ರೂ. ದರವಿದ್ದು ಎಂಟು ವಾರಗಳವರೆಗೆ ನೀಡಬೇಕಾಗುತ್ತದೆ. ಇದು ರೋಗದ ವಿರುದ್ಧ ಪರಿಣಾಮಕಾರಿಯಾದ ಏಕೈಕ ಔಷಧವಾಗಿದೆ. ವೈಟ್ ಫಂಗಸ್ ಶ್ವಾಸಕೋಶಕ್ಕೂ ಸೋಂಕು ತರುತ್ತದೆ ಮತ್ತು ಸೋಂಕಿತ ರೋಗಿಯ ಮೇಲೆ ಎಚ್ಆರ್ ಸಿಟಿ ಸ್ಕ್ಯಾನ್ ನಡೆಸಿದಾಗ ಕೋವಿಡ್-19 ಗೆ ಹೋಲುವ ಸೋಂಕು ಪತ್ತೆಯಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.
ನಾಳೆಯಿಂದ ಇಂಜೆಕ್ಷನ್!: ಕರೋನಾ ಲಸಿಕೆ ಶನಿವಾರದಿಂದ ಕರೋನಾ ವಾರಿಯರ್ಸ್ಗಳಿಗೆ ನೀಡಲು ಸರ್ಕಾರಿ ಮುಂದಾಗಿದೆ. ಜೊತೆಗೆ 18 ವರ್ಷದೊಳಗಿನ ಮಕ್ಕಳಿಗೆ ಕೂಡ ಲಸಿಕೆ ಹಾಕಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.