- ಶಿವಮೊಗ್ಗದಲ್ಲಿ ಭಾರಿ ಬಂದೋಬಸ್ತ್: ಹಲವೆಡೆ ಕಿರಿಕ್
- ಚಿಕ್ಕಮಗಳೂರಲ್ಲಿ ಸಾವು ಕಡಿಮೆ: ಕೇಸ್ ಮಾಮೂಲಿ
ಮಲೆನಾಡು: ಶಿವಮೊಗ್ಗ ಜಿಲ್ಲೆಯಲ್ಲಿ ಶನಿವಾರ 663 ಜನರಲ್ಲಿ ಕರೋನಾ ಬಂದಿದೆ. ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 7121ಕ್ಕೇರಿದೆ. ಶನಿವಾರ 14 ಮಂದಿ ಸಾವನ್ನು ಕಂಡಿದ್ದಾರೆ.
2401 ಜನರಿಗೆ ಸೋಂಕು ಪರೀಕ್ಷೆಗೆ ಒಳಪಡಿಸಲಾಗಿದ್ದು, ಇದರಲ್ಲಿ 1052 ಜನರಿಗೆ ನೆಗೆಟಿವ್ ಬಂದಿದೆ. ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 686ಕ್ಕೇರಿದೆ.
ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು ಇದರಲ್ಲಿ 26 ವಿದ್ಯಾರ್ಥಿಗಳಿಗೆ ಹಾಗೂ 5 ಸಿಬ್ಬಂದಿಗೆ ಸೋಂಕು ಧೃಡಪಟ್ಟಿದೆ.
ಯಾವ ತಾಲೂಕಲ್ಲಿ ಎಷ್ಟು?: ಶಿವಮೊಗ್ಗ 195, ಭದ್ರಾವತಿ 126, ಶಿಕಾರಿಪುರ 68, ತೀರ್ಥಹಳ್ಳಿ 30, ಸೊರಬ 64, ಹೊಸನಗರ 30, ಸಾಗರ 128, ಇತರೆ ಜಿಲ್ಲೆ 22 ಕೇಸ್ ವರದಿಯಾಗಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಸತತ ಎರಡನೇ ದಿನ 600ಕ್ಕೂ ಹೆಚ್ಚು ಕರೋನಾ ಪ್ರಕರಣಗಳು ಕಂಡು ಬಂದಿದೆ. ಜಿಲ್ಲೆಯ ಬಯಲು ಸೀಮೆ ಭಾಗದಲ್ಲಿ ಹೆಚ್ಚು ಸೋಂಕಿತರು ಪತ್ತೆಯಾಗಿದ್ದಾರೆ. ಮಲೆನಾಡು ಭಾಗದಲ್ಲಿ ಕರೊನಾ ಸೋಂಕಿತರ ಸಂಖ್ಯೆ ಇಳಿಮುಖ ಕಂಡು ಬಂದಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಶನಿವಾರ 652 ಜನರು ಸೋಂಕಿಗೆ ಒಳಗಾಗಿದ್ದಾರೆ. ಚಿಕ್ಕಮಗಳೂರು ತಾಲೂಕಿನಲ್ಲಿ 124, ಕಡೂರು ತಾಲೂಕಿನಲ್ಲಿ 174, ತರೀಕೆರೆ ತಾಲೂಕಿನಲ್ಲಿ 187, ಮೂಡಿಗೆರೆ ತಾಲೂಕಿನಲ್ಲಿ 55, ಎನ್.ಆರ್ ಪುರ ತಾಲೂಕಿನಲ್ಲಿ 69, ಕೊಪ್ಪ ತಾಲೂಕಿನಲ್ಲಿ 51 ಹಾಗೂ ಶೃಂಗೇರಿ ತಾಲೂಕಿನಲ್ಲಿ 01 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.
ಹೊಸನಗರ ತಾಲೂಕು ಬೆಳ್ಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಿರಣ್ಕುಮಾರ್ ಎನ್ನುವವರ ತಮ್ಮ ಮದುವೆಗೆ ಗ್ರಾಮ ಪಂಚಾಯ್ತಿಯಿಂದ ಕೊವೀಡ್ ನಿಬಂಧನೆಗೆ ಒಳಪಟ್ಟು ಮದುವೆ ನಡೆಸಲು ಅನುಮತಿ ಪಡೆದಿದ್ದರು. ಆದರೆ ನಿಬಂಧನೆಯನ್ನು ಉಲ್ಲಂಘಿಸಿ ರಾತ್ರಿ ಸಂಬಂಧಿಕರಿಗೆ ಬಾಡೂಟ ನಡೆಸಿದ್ದಾರೆಂದು ಬೆಳ್ಳೂರು ಗ್ರಾಮ ಪಂಚಾಯ್ತಿ ಪಿಡಿಓರಿಗೆ ಸ್ಥಳೀಯರೊಬ್ಬರು ದೂರವಾಣಿ ಮುಖಾಂತರ ದೂರು ನೀಡಿದ್ದರು. ಈ ಹಿನ್ನಲೆಯಲ್ಲಿ ಪಿಡಿಓ ಅವರು ಸ್ಥಳಕ್ಕೆ ಗ್ರಾಮ ಪಂಚಾಯ್ತಿ ಸಿಬ್ಬಂದಿಯನ್ನು ಕಳುಹಿಸಿದ್ದರು. ಈ ಹಿನ್ನೆಲೆ ಕರ್ತವ್ಯ ಲೋಪ ಹಿನ್ನೆಲೆ ಕೆಲಸದಿಂದ ಅಮಾನತುಗೊಂಡಿದ್ದಾರೆ.